ಜಿಲ್ಲಾಧಿಕಾರಿಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಬಾಲ ಮಂದಿರಗಳಿಗೆ ಭೇಟಿ

ಗದಗ 20:ಬೆಟಗೇರಿಯ ನಗರದ ಬೆಟಗೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರ ,  ಬಾಲಕರ ಬಾಲ ಮಂದಿರ ಹಾಗೂ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿನ  ಗ್ರಂಥಾಲಯಕ್ಕೆ ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಬುಧವಾರ ದಿ.19 ರಂದು ಭೇಟಿ ನೀಡಿದರು.  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನರಿಗೆ ವೈದ್ಯಕೀಯ ಚಿಕಿತ್ಸೆ ನೀಡುವ ಸೌಲಭ್ಯಗಳ,  ಸಿಬ್ಬಂದಿಗಳ  ಪರಿಶೀಲನೆ ನಡೆಸಿ ಆರೋಗ್ಯ ಕೇಂದ್ರ ಬರುವ ಜನರಿಗೆ ವೈದ್ಯಕೀಯ ಚಿಕಿತ್ಸೆ  ನೀಡಲು ಯಾವುದೇ ಸಮಸ್ಯೆಗಳು ಉಂಟಾಗದಂತೆ ಕಾಳಜಿ ವಹಿಸಲು ಜಿಲ್ಲಾಧಿಕಾರಿಗಳು ಸಿಬ್ಬಂದಿಗೆ ಸೂಚಿಸಿದರು.  ಬಾಲ ಮಂದಿರದಲ್ಲಿ ಇರುವ ಮಕ್ಕಳ ವಸತಿ, ಊಟ ಹಾಗೂ ಶಿಕ್ಷಣ ಸೌಲಭ್ಯಗಳ ಕುರಿತು ಹಾಗೂ  ಗ್ರಂಥಾಲಯದಲ್ಲಿ   ಓದುಗರಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು.