ಧಾರವಾಡ 22: ಗ್ರಾಮೀಣ ಮಟ್ಟದಲ್ಲಿ ಮೂಲಭೂತ ಸೇವೆಗಳನ್ನು ಸರಿಯಾದ ಗುಣಾತ್ಮಕ ರೀತಿಯಲ್ಲಿ ಪೂರೈಕೆಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ಗ್ರಾಮೀಣ ಜನರು ನಗರಗಳಿಗೆ ವಲಸೆ ಹೋಗುವುದರ ಮೂಲಕ ಪ್ರತಿ ಗ್ರಾಮಗಳು ಕೇವಲ ಹಿರಿಯ ವಯಸ್ಸಿನ ನಾಗರೀಕರ ವಲಸೆ ತಾಣಗಳಾಗಿ ಪರಿಣಮಿಸುತ್ತವೆ ಎಂದು ಅಬ್ದುಲ್ ನಜೀರಸಾಬ ಗ್ರಾಮೀಣ ಉಪನಿದರ್ೆಶಕ ಬಿ.ಎಸ್ ಮೂಗನೂರಮಠ ಹೇಳಿದರು.
ಅವರು ಮ.ಗಾಂ.ರಾ.ಉ.ಖಾ.ಯೋಜನೆಯ ತಾಂತ್ರಿಕ ಸಹಾಯಕರ (ಃಈಖಿ) 90 ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಬ್ದುಲ ನಜೀರಸಾಬ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮೈಸೂರು ಪ್ರಾದೇಶಿಕ ಕೇಂದ್ರ ಧಾರವಾಡ ದಡಿಯಲ್ಲಿ ಮೈಸೂರು ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳ ಆಯ್ದ ತಾಲೂಕುಗಳಿಂದ ಆಯ್ಕೆಯಾದ ಮ.ಗಾಂ.ರಾ.ಉ.ಖಾ.ಯೋಜನೆಯ ತಾಂತ್ರಿಕ ಸಹಾಯಕರ (ಃಈಖಿ) 90 ದಿನಗಳ ತರಬೇತಿ ಶಿಬಿರಾಥರ್ಿಗಳು ಇಂದು ಬೇಲೂರ ಗ್ರಾಮ ಪಂಚಾಯತಗೆ ಕ್ಷೇತ್ರ ಅಧ್ಯಯನ ಭೇಟಿ ನೀಡಿದರು.
ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಬೋಧಕ ತರಬೇತಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಅಬ್ದುಲ್ ನಜೀರಸಾಬ ಅವರು ಸಕರ್ಾರದ ಯಾವುದೇ ಯೋಜನೆಯಡಿಯಲ್ಲಿ ಗ್ರಾಮ ಮಟ್ಟದಲ್ಲಿ ನಿಮರ್ಿಸಲಾಗುವ ಕಾಮಗಾರಿಗಳು ಅತ್ಯಂತ ಗುಣಾತ್ಮಕ ಮತ್ತು ದೀರ್ಘ ಬಾಳಿಕೆಯಿಂದ ಇರಬೇಕಾದರೆ, ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲಿ ತಾಂತ್ರಿಕ ತಜ್ಞರ ಸೇವೆ ಅತಿ ಅವಶ್ಯವಾಗಿದೆ. ಅಲ್ಲದೇ ಈ 90 ದಿನಗಳ ತರಬೇತಿಯ ಕಾರ್ಯಕ್ರಮದಲ್ಲಿ ವಿವಿಧ ಕಾಮಗಾರಿಗಳ ತಾಂತ್ರಿಕ ಕೌಶ್ಯಲ್ಯವನ್ನು ನುರಿತ ತಾಂತ್ರಿಕ ತಜ್ಞ ಸಂಪನ್ಮೂಲ ವ್ಯಕ್ತಿಗಳನ್ನು ಅಹ್ವಾನಿಸಿ ತರಬೇತಿ ನೀಡುವುದರೊಂದಿಗೆ ಹಲವಾರು ಕ್ಷೇತ್ರ ಭೇಟಿಯ ಮೂಲಕ ಕಾಮಗಾರಿಗಳ ಪ್ರಾಯೋಗಿಕ ಅಧ್ಯಯನ ಮಾಡಿಸಲಾಗುವುದೆಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯತ ಅಧ್ಯಕ್ಷ ಯಲ್ಲಪ್ಪ ಫಕ್ಕೀರಪ್ಪ ಕಡ್ಲಿ ಇವರು ಅವರು ಮಾತನಾಡುತ್ತ ಪ್ರತಿಯೊಂದು ಕಾಮಗಾರಿಗಳು ಅಥವಾ ಮೂಲಭೂತ ಸೇವಗಳನ್ನು ನೀಡುವಲ್ಲಿ ನಮ್ಮ ಗ್ರಾಮ ಪಂಚಾಯತಿಯು ಶ್ರಮ ವಹಿಸುತ್ತದೆ ಎಂದು ತಿಳಿಸುತ್ತಾ ಆದ್ದರಿಂದಲೆ ನಮ್ಮ ಗ್ರಾಮ ಪಂಚಾಯತಿಯು 2017-18 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಹಾಗೂ ಸರ್ವ ಸದಸ್ಯರು ಸೇವೆ ಸಹಕಾರ ಅನನ್ಯವಾಗಿದೆ ಎಂದು ಹೇಳಿದರು.
ಅಭಿವೃದ್ಧಿ ಅಧಿಕಾರಿ ಎಸ್ ಆರ್ ಬೆಟದೂರ ತಾಂತ್ರಿಕ ಸಂಯೊಜಕ ದೇವರಾಜ ಕುಂಬಾರ ಮತ್ತು ವಿನಾಯಕ ಮುಂದಲಮನಿ ಮತ್ತು ಜಿಲ್ಲಾ ತರಬೇತಿಯ ಸಂಯೋಜಕರಾದ ಗಂಗಾಧರ ಎಲಿಗಾರ ಇವರು ಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕ್ಷೇತ್ರ ಭೇಟಿಯ ಶಿಬಿರಾಥರ್ಿಗಳು ಗ್ರಾಮ ಪಂಚಾಯತಿಯ ಹಲವಾರು ಕಾಮಗಾರಿಗಳಾದ ಚರಂಡಿ ಗೋದಾಮ ಮತ್ತು ಕಾಂಕ್ರಿಟ್ ರಸ್ತೆ ದನದ ಕೊಟ್ಟಿಗೆ ಮುಂತಾದ ಕಾಮಗಾರಿಗಳ ಅಳತೆ ಅವುಗಳ ವಿನ್ಯಾಸ ನಿಮರ್ಾಣದ ವೆಚ್ಚ ಮುಂತಾದವುಗಳನ್ನು ಸೂಕ್ಷ್ಮವಾಗಿ ಗಮನಿಸುವುದರ ಮೂಲಕ ಪ್ರಾಯೋಗಿಕ ಅಧ್ಯಯನ ಮಾಡಿದರು.
ಪ್ರಾರಂಭದಲ್ಲಿ ಗ್ರಾಮ ಅಡ್ಡ ನಡಿಗೆ ಮೂಲಕ ಗ್ರಾಮದ ವಾಸ್ತವದ ಮೂಲಭೂತ ಸೇವೆಗಳ ಮಾಹಿತಿಯನ್ನು ಕಲೆಹಾಕಿದರು. ನಂತರ ಗ್ರಾಮ ಮಧ್ಯದ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಶ್ರಮದಾನವನ್ನು ಕೈಗೊಂಡರು. ತದನಂತರ ಗ್ರಾಮ ಪಂಚಾಯತಿಯ ಅಧಿಕಾರಿಗಳು ಸಿಬ್ಬಂದಿ ವರ್ಗ ಶಿಬಿರಾಥರ್ಿಗಳನ್ನು ಬೀಳ್ಕೊಟ್ಟರು.