ಧಾರವಾಡ 02: ಪ್ರತಿ ನಾಲ್ಕು ತಿಂಗಳಿಗೊಮ್ಮೆ ಕಾಖರ್ಾನೆಗಳಿಗೆ ಭೇಟಿ ನೀಡಿ ಅಲ್ಲಿನ ನೀರು ಸೌಲಭ್ಯ, ಅಗ್ನಿಶಾಮಕ ಸೌಲಭ್ಯ ಸೇರಿದಂತೆ ಲಭ್ಯವಿರುವ ಸುರಕ್ಷತಾ ಸೌಕರ್ಯಗಳ ಸುಸ್ಥಿತಿಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕೆಂದು ಕಾಖರ್ಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಹಾಗೂ ಸ್ವಾಸ್ಥ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದರು.
ಅವರು ನ. 30ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪಾಯಕಾರಿ ಕಾಯರ್ಾಚರಣೆ ಹೊಂದಿರುವ ಕಾಖರ್ಾನೆಗಳ ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಸದಸ್ಯರ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಜಿಲ್ಲೆಯಲ್ಲಿ ಅಪಾಯಕಾರಿ ಕಾಯರ್ಾಚರಣೆ ಹೊಂದಿರುವ ಏಳು ಕಾಖರ್ಾನೆಗಳಿದ್ದು, ಅಲ್ಲಿನ ಸುರಕ್ಷತಾ ಕ್ರಮಗಳನ್ನು ಮತ್ತು ಸುರಕ್ಷತಾ ಸಾಧನಗಳ ಸುಸ್ಥಿತಿಯನ್ನು ಇಲಾಖೆ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ, ಪರಿಶೀಲಿಸಬೇಕು. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಕಡ್ಡಾಯವಾಗಿ ಭೇಟಿ ನೀಡಿ ವರದಿ ನೀಡಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಅಪಾಯಕಾರಿ ಕಾಯರ್ಾಚರಣೆ ಹೊಂದಿರುವ ಕಾಖರ್ಾನೆಗಳ ಬಗ್ಗೆ, ಜಿಲ್ಲಾ ಬಿಕ್ಕಟ್ಟು ಪರಿಹಾರ ಗುಂಪು ರಚನೆಯಾದ ಬಗ್ಗೆ, ಅಪಾಯಕಾರಿ ಕಾಯರ್ಾಚರಣೆ ಹೊಂದಿರುವ ಕಾಖರ್ಾನೆಗಳಲ್ಲಿ ಕೈಗೊಂಡಿರುವ ಆನ್-ಸೈಟ್ ಪ್ಲಾನ್ನ ಅಣಕು ಪ್ರದರ್ಶನಗಳ ಬಗ್ಗೆ ಮತ್ತು ರಾಸಾಯನಿಕ ದುರಂತ ನಿವಾರಣಾ ದಿನಾಚರಣೆ ಆಚರಿಸುವ ಕುರಿತು ಜಿಲ್ಲಧಿಕಾರಿಗಳು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಕಾಖರ್ಾನೆಗಳ ಹಿರಿಯ ಸಹಾಯಕ ನಿದರ್ೆಶಕ ಮತ್ತು ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಸದಸ್ಯ ಕಾರ್ಯದಶರ್ಿ ರಾಜೇಶ್ ಮಿಶ್ರಿಕೋಟಿ ಅವರು ಸಭೆ ನಿರ್ವಹಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ವಿಪತ್ತು ನಿರ್ವಹಣಾ ಶಾಖೆ ಸಮಾಲೋಚಕ ಪ್ರಕಾಶ ವಾಯ್.ಎಚ್. ಸೇರಿದಂತೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ಸಾರಿಗೆ, ಪಾಲಿಕೆ, ಹೆಸ್ಕಾಂ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.