ವಿಶ್ವಾಸ ಮೋಘೆ ದೈವಾಧೀನ
ಕಾರವಾರ 03: ತಾಲೂಕಿನ ಶೇಜವಾಡದ ಶ್ರೀ ಶೆಜ್ಜೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ವಿಶ್ವಾಸ ಮೋಘೆ (75) ಅವರು ಸೋಮವಾರ ಬೆಳಿಗ್ಗೆ ದೈವಾಧೀನರಾದರು.
ಶ್ರೀ ಶೆಜ್ಜೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿದ್ದ ಇವರು ಪೌರೋಹಿತ್ಯ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದು ವಿಶ್ವಾಸ ಭಟ್ ಎಂದೇ ಪರಿಚಿತರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ವಿಶ್ವಾಸ ಭಟ್ಟರ ಅಗಲುವಿಕೆಗೆ ಶಾಸಕ ಸತೀಶ ಸೈಲ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ, ಶಿರವಾಡ ಗ್ರಾಪಂ ಅಧ್ಯಕ್ಷೆ ಅಶ್ವಿನಿ ಬಾಂದೇಕರ, ಉಪಾಧ್ಯಕ್ಷ ದೀಲೀಪ ನಾಯ್ಕ, ಸರ್ವ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ, ಶ್ರೀ ಶೆಜ್ಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಸೇರಿದಂತೆ ಎಲ್ಲ ಸದಸ್ಯರು, ಎಲ್ಲಾ ವೃತ್ತಿ ವಾನರು, ದೇವಳಿ ವರ್ಗದವರು ಹಾಗೂ ಊರ ನಾಗರಿಕರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.