ಲೋಕದರ್ಶನ ವರದಿ
ರಾಮದುರ್ಗ 03: ಇಚ್ಛಾಶಕಿ, ಕ್ರೀಯಾಶಕ್ತಿ ಮತ್ತು ಜ್ಞಾನಶಕ್ತಿಗಳು ವಿದ್ಯಾಥರ್ಿಗಳ ಅಸ್ತ್ರಗಳಿದ್ದಂತೆ ಇವುಗಳ ಬಲದಿಂದಲೇ ಭವಿಷ್ಯವನ್ನು ರೂಪಿಸಿಕೊಳ್ಳಬೇಕು, ಬದಲಾವಣೆ ಆಗುವುದೇ ಮನುಷ್ಯನ ಗುಣಧರ್ಮ, ಇಂದು ಕನಸನ್ನು ಕಾಣಿರಿ ಅದರಂತೆ ಕಾರ್ಯ ಪ್ರವೃತ್ತರಾಗಿ ನಿಮ್ಮ ಭವಿಷ್ಯ ಬಂಗಾರಮಯವಾಗುವುದು, ಕೇವಲ ಅಂಕಗಳಿಕೆ ಮಾತ್ರ ನಿಮ್ಮ ಗುರಿಯಾಗಿರಬಾರದು ಉತ್ತಮ ಸದ್ಗುಣಗಳನ್ನು ರೂಢಿಸಿಕೊಳ್ಳಬೇಕು, ದುರಾಸೆಗಳ ದಾಸರಾಗದೇ ವಿದ್ಯೆಯನ್ನು ಅರಗಿಸಿಕೊಳ್ಳಬೇಕು, ಭವಿಷ್ಯದ ಜೀವನದಲ್ಲಿ ಕಷ್ಟ ಬರಬಾರದೆಂದರೆ ಈಗ ಶ್ರಮ ಪಡಬೇಕು ಎಂದು ಕಟಕೋಳದ ಮುರಾಜರ್ಿ ವಸತಿ ಶಾಲೆಯ ಮಹಾಲಿಂಗಯ್ಯ ಶಾಸ್ತ್ರಿಗಳು ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.
ಅವರು ತಾಲೂಕಿನ ಚಂದರಗಿಯ ಕ್ರೀಡಾ ವಸತಿ ಶಾಲೆಯಲ್ಲಿ ಮೌಲ್ಯ ಶಿಕ್ಷಣ ಸರಣಿ ಉಪನ್ಯಾಸ ಮಾಲಿಕೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಗುರುವಿನ ಮಾರ್ಗದರ್ಶನ ತಂದೆ-ತಾಯಿಗಳ ಆರೈಕೆ, ಸಮಾಜದ ಬಂದುಗಳ ಹಾರೈಕೆಯಲ್ಲಿ ಮಗುವಿನ ಭವಿಷ್ಯ ಬೆಳಗಬೇಕು, ನೀನು ಜ್ಯೋತಿಯಾಗು ಅದರ ಅಡಿಯಲ್ಲಿ ಹಲವರು ಬೆಳಕನ್ನು ಕಾಣುತ್ತಾರೆ. ವಿದ್ಯಾರ್ಜನೆಯ ಸಮಯದಲ್ಲಿ ಮನದ ಹತೋಟಿಯಲ್ಲಿ ನೀವಿರಬಾರದು ಬದಲಾಗಿ ನಿಮ್ಮ ಹತೋಟಿಯಲ್ಲಿ ಮನಸ್ಸು ಇರಬೇಕು ಎಂದ ಅವರು ಕಷ್ಟಗಳು ನಮ್ಮನ್ನು ಪಕ್ವಗೊಳಿಸುತ್ತವೆ ಕಷ್ಟಗಳೇ ಬರಬಾರದು ಎಂದರೆ ಸಾಧ್ಯವಿಲ್ಲ, ಕಲಿಕೆಗೆ ಹಲವಾರು ಆಯಾಮಗಳಿದ್ದು ಭಕ್ತಿ, ಶಕ್ತಿ, ವಿಶ್ವಾಸ, ನಂಬಿಕೆ, ಸತ್ಯ, ಆದರ್ಶ ಇವು ಕೇವಲ ಅಲಂಕಾರಿಕ ಪದಗಳಲ್ಲ ಬದಲಾಗಿ ವಿಧ್ಯಾಥರ್ಿ ಜೀವನದ ಆಯುಧಗಳಿದ್ದಂತೆ, ಒಳ್ಳೆಯ ಕನಸನ್ನು ಇಟ್ಟುಕೊಂಡು ಅದನ್ನು ಸಾಕಾರಗೊಳಿಸಲು ಪ್ರಯತ್ನಿಸಿದರೆ ಜೀವನದಲ್ಲಿ ಯಶಸ್ಸು ಕೈವಶವಾಗುತ್ತದೆ. ಶಾಲೆಯಿಂದ ಹೋಗುವಾಗ ಉತ್ತಮ ವಿದ್ಯೆಯ ಜೊತೆಗೆ ಒಳ್ಳೆಯ ಸದ್ಗುಣ ಹಾಗೂ ಸಚ್ಛಾರಿತ್ರ್ಯವಂತರಾಗಿ ಹೋದಾಗ ಮಾತ್ರ ತಾವೆಲ್ಲಾ ಪರಿಪೂರ್ಣ ಶಿಕ್ಷಣ ಪಡೆದಂತೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮಾಧ್ಯಮ ಪ್ರಾಚಾರ್ಯರಾದ ಎ ಎನ್ ಮೋದಗಿ ಮತ್ತು ಆಂಗ್ಲ ಮಾಧ್ಯಮ ಪ್ರಾಚಾರ್ಯರಾದ ರಜನೀಶ ಗೌತಮ ಉಪಸ್ಥಿತರಿದ್ದರು. ಎಸ್. ಎ. ಹಿರೇಮಠ ನಿರೂಪಿಸಿದರು, ಎಫ್ ಎಲ್ ಮದಹಳ್ಳಿ ವಂದಿಸಿದರು.