ವಿರಕ್ತಮಠ ಸರ್ವಜನಾಂಗದ ಶಾಂತಿ ಕೇಂದ್ರವಾಗಿ ಹೊರಹೊಮ್ಮಿದೆ: ನಿಜಗುಣ ಶಿವಯೋಗಿಗಳು

ಲೋಕದರ್ಶನ ವರದಿ

ಶಿಗ್ಗಾವಿ 08:  ಇಂದಿನ ಜಾತಿ ವ್ಯವಸ್ಥೆಯಲ್ಲಿ ಬೇರೆ ಬೇರೆ ಜಾತಿಗಳನ್ನು ಕನಿಷ್ಟ ರೀತಿಯಲ್ಲಿ ಕಾಣುವುದು ತರವಲ್ಲ ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶಿಗ್ಗಾವಿ ವಿರಕ್ತಮಠ ಸರ್ವಜನಾಂಗದ ಶಾಂತಿ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಹತ್ತಿಮತ್ತೂರಿನ ನಿಜಗುಣ ಶಿವಯೋಗಿಗಳು ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ವಿರಕ್ತಮಠದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವ, ಲಿಂ. ಸಂಗನಬಸವ ಮಹಾಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದ ಶ್ರೀಗಳು, ಧರ್ಮವು ಸಾಮಾಜಮುಖಿ ಕಾರ್ಯಗಳಿಗೆ ಪ್ರೇರಣೆಯಾಗಿರಬೇಕು, ನಮಗೆ ಜಾತಿ ಮುಖ್ಯವಲ್ಲ ಜ್ಞಾನದ ಹಸಿವನ್ನು ನೀಗಿಸುವ ಗುರುಗಳು ಮುಖ್ಯವಾಗಿದ್ದಾರೆ ಅಂಥಹ ಗುರುಗಳನ್ನು ಶಿಗ್ಗಾವಿ ವಿರಕ್ತಮಠದಲ್ಲಿ ಕಾಣುತ್ತಿದ್ದೇವೆ ಅಂತಹ ಗುರುಗಳನ್ನು ಪಡೆದ ನೀವೇ ಧನ್ಯ ಎಂದ ಶ್ರೀಗಳು ಮಾತು ಮಾತನಾಡುವಾಗ ಅತೀ ಚನ್ನಾಗಿರುತ್ತೆ ಆದರೆ ಕೆಲ ಮಾತಿನಿಂದ ಆದ ಪರಿವರ್ತನೆಗಳನ್ನು ಊಹಿಸಲು ಸಾಧ್ಯವಿಲ್ಲದವುಗಳಾಗಿವೆ ಅಂತ ಮಾತುಗಳಿಗೆ ಹಿಡಿತ ಬೇಕು ಜೊತೆಗೆ ಮಾತಿನ ಅರಿವಿರಬೇಕು ಎಂದರು.

ಪುರಸಭೆ ಸದಸ್ಯ ಸುಭಾಸ್ ಚೌಹಾಣ್ ಮಾತನಾಡಿ, ಗುರುವಿನ ಅನುಗ್ರಹ ಮುಖ್ಯವಾಗಿ ಬೇಕು, ಆ ಗುರುವಿನ ಮಾರ್ಗದರ್ಶನವಿದ್ದರೆ ಎಲ್ಲವೂ ಸಾದ್ಯವಿದೆ, ಶಿಗ್ಗಾವಿ ವಿರಕ್ತಮಠ ಧರ್ಮದ ತಳಹದಿಯಲ್ಲಿ ಜ್ಞಾನದ ದಾಹವನ್ನು ನೀಗಿಸುವ ಜೊತೆಗೆ ಹೊಸ ಹೊಸ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವ ಕಲ್ಯಾಣದ ಸಂಗಮೇಶ ದೇವರು ಪ್ರವಚನ ನೀಡಿದರು. ವಿಜಯಲಕ್ಷ್ಮಿ ಸಾರಂಗಮಠ ಅವರ ಸಂಗೀತ ಸೇವೆ ಹಾಗೂ ಕು. ಭೂಮಿ ಬಿಸನಳ್ಳಿ ಮಾಡಿದ ಭರತನಾಟ್ಯ ಭಕ್ತರನ್ನು ರಂಜಿಸಿತು. ಪುರಸಭೆ ಸದಸ್ಯ ಶ್ರೀಕಾಂತ ಬುಳ್ಳಕ್ಕನವರ, ವರದಿಗಾರರಾದ ಪಿ ಎಮ್ ಸತ್ಯಪ್ಪನವರ, ಪರಮೇಶ ಲಮಾಣಿ, ಅಂದಿನ ಪ್ರಸಾದ ಸೇವೆ ನೀಡಿದ ರಘು ಪತ್ತಾರ ವೇದಿಕೆ ಮೇಲಿದ್ದರು. ಆರ್ ಜಿ ಹಿರೇಮಠ ಸ್ವಾಗತಿಸಿದರು. ಶಶಿಕಾಂತ ರಾಠೋಡ ನಿರೂಪಿಸಿದರು, ಎಂ ವಿ ಗಾಡದ ವಂದಿಸಿದರು.