ವಿಜಯಪುರ: ಸಾಧಕರನ್ನು ಗುರುತಿಸುವುದು ಸಾಮಾನ್ಯ ಕೆಲಸವಲ್ಲ: ನೇತ್ರತಜ್ಞರಾದ ಡಾ.ಪ್ರಭುಗೌಡ ಪಾಟೀಲ ಹೇಳಿದರು

ಲೋಕದರ್ಶನ ವರದಿ

ವಿಜಯಪುರ 25: ಸದೃಢ ಸಮಾಜವನ್ನುನಿರ್ಮಾಣ  ಮಾಡುವ ಗುರುತರ ಜವಾಬ್ದಾರಿ ಇಂದು ಪ್ರತಿಯೊಬ್ಬರ ಮೇಲಿದೆ. ಅದಕ್ಕೆ ಪೂರಕ ಎನ್ನುವಂತೆ ನಾಡು ನುಡಿಯ ಸೇವೆ ಮಾಡಿ ರಾಜ್ಯ ಹಾಗೂ ರಾಷ್ಟ್ರದ ಹೆಸರನ್ನು ಬೆಳಗಿಸುವ ಕಾರ್ಯ ಮಾಡುತ್ತಿರುವ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿರುವುದು ಕೂಡ ಅಷ್ಟೇ ಮುಖ್ಯವಾಗಿದೆ. ಸಾಧಕರನ್ನು ಸನ್ಮಾನಿಸುವುದೆಂದರೆ ಮತ್ತೋಬ್ಬರು ಅಂಥ ಸಾಧನೆಯಲ್ಲಿ ತೊಡಗುವಂತೆ ಪ್ರೇರಣೆ ನೀಡುವುದಾಗಿದೆ ಎಂದು ನಗರದ ಖ್ಯಾತ ನೇತ್ರತಜ್ಞರಾದ ಡಾ.ಪ್ರಭುಗೌಡ ಪಾಟೀಲ ಹೇಳಿದರು.

ನಗರದ ಕಂದಗಲ್ ಹಣುಮಂತರಾಯ ರಂಗಮಂದಿರದ ಆವರಣದಲ್ಲಿ ತನು ಪೌಂಡೇಶನ್ ಆಯೋಜಿಸಿದ ತನು ಕನ್ನಡ ಮನ ಕನ್ನಡ ಪ್ರಶಸ್ತಿ ಪ್ರಧಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ ಇಂದು ಪ್ರಶಸ್ತಿಗಳು ಒಂದು ತರಹದ ಮಾರಾಟದ ಸರಕಾಗಿವೆ. ಇಲ್ಲವೇ ದೂರದ ದೃಷ್ಠಿಕೋನದ ಫಲವಾಗಿವೆ. ಹೀಗಾಗಿ ನಿಜವಾದ ಸಾಧಕರನ್ನು ಗುರುತಿಸುವುದೇ ಕಷ್ಟಕರವಾಗಿದೆ. ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಂದಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ಧಲಿಂಗ ಚೌಧರಿಯವರು; ತನು ಕನ್ನಡ ಮನ ಕನ್ನಡ ಎನ್ನುವುದು ಇಲ್ಲಿಯವರೆಗೂ ಬರಿ ಘೋಷವಾಖ್ಯವಾಗಿ ಬಳಸುತ್ತಿದ್ದೇವು. ಆದರೆ ಇಂದು ಆ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುವ ಮೂಲಕ ತನು ಫೌಂಡೇಷನ್ ಅದಕ್ಕೆ ಹೊಸ ಅರ್ಥವನ್ನೇ ತಂದುಕೊಟ್ಟಿದ್ದಾರೆ. ಇಂದು ಕಾರ್ಯಕ್ರಮಗಳು ಎಂದರೆ ಅದು ಬರೀ ತೋರಿಕೆಗೆ ಮಾತ್ರ ಆಗುತ್ತಿವೆ. ಇಲ್ಲವೇ ಪ್ರತಿಷ್ಠೆಯ ಪ್ರತೀಕವಾಗುತ್ತಿವೆ. ಅವುಗಳ ಮಧ್ಯದಲ್ಲಿ ಇಂಥ ಸಂಘಟನೆಗಳು ಮುಕ್ತ ಮನಸ್ಸಿನಿಂದ ಸಾಧಕರನ್ನು ಗುರುತಿಸಿ ಎಲೆ ಮರೆಯ ಕಾಯಂತೆ ಸದಾ ಸೇವೆ ಮಾಡುವವರನ್ನು ಸಮಾಜ ಜನರಿಗೆ ಪರಿಚಯಿಸುವ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಎಂದು ಹೇಳಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಮಾಜ ಸೇವಕಿ ವಿಜಯಾ ಬಾಳಿ; ಸಮಾಜ ನನಗೇನು ಕೊಟ್ಟಿತು ಎನ್ನುವುದಕ್ಕಿಂತ ಸಮಾಜಕ್ಕಾಗಿ ನಾವೇನು ಕೊಟ್ಟೆವು ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇಂತ ಪೌಂಡೇಷನ್ಗಳು ತಮ್ಮ ಕಾರ್ಯ ಕ್ಷೇತ್ರವನ್ನು ಮತ್ತಷ್ಟು ವಿಸ್ತಿರಿಸಿಕೊಂಡು ಹೆಚ್ಚಿನ ಸೇವೆಯನ್ನು ಮಾಡಬೇಕು. ಹಾಗೂ ಸದೃಢ ಸಮಾಜದ ನಿಮರ್ಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶ್ರೀಪಾದ ಜ್ಯೋಷಿ, ಡಾ. ಗುರುರಾಜ ಕುಲಕಣರ್ಿ, ಡಾ.ಸಮೀರ ಹಾದಿಮನಿ, ಮನೋಹರ ದೊಡ್ಡಮನಿ, ಭಾಗೇಶ ಮುರಡಿ, ಮಲ್ಲಿಕ್ರಿಯಾನ ಅತ್ತಾರ, ರಾಜೇಶ ಪವಾರ, ರವಿ ಬಾರಾಡಿ, ಈರಣ್ಣ ಹಂದಿಗನೂರ, ಗುರುಲಿಂಗಪ್ಪ ಲಾಯಗುಂದಿ, ಶ್ರೀಮಂತ ಬೂದಿಹಾಳ, ಅನೂಷಾ ಹಿರೇಮಠ, ಸ್ನೇಹ ಬಾಲಗಾಂವ, ಸಾನ್ವಿ ಗುಜಾರ, ಸೋಮನಗೌಡ ಕಲ್ಲೂರ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ತನು ಪೌಂಡೇಷನ್ ಅಧ್ಯಕ್ಷ ವಿಜುಗೌಡ ಕಾಳಶೆಟ್ಟಿ, ಗಣಪತಿ ರಜಪುತ, ಶ್ರೀಧರ ಸುರಗಿಹಳ್ಳಿ, ಸಂಗನಬಸವರಾಜ, ಸದು ರೂಡಗಿ, ಸಂಪತ್ಕುಮಾರ ಉಪಸ್ಥಿತಿರಿದ್ದರು. ಪ್ರೋ.ಮಂಜುನಾಥ ಜುನಗೊಂಡ ಸ್ವಾಗತಿಸಿ ನೀರೂಪಿಸಿದರು.