ವಿಜಯನಗರ ಕಾಲುವೆಗೆ ಕಾಯಕಲ್ಪ: ಶಾಸಕ ಮುನವಳ್ಳಿ ಭೂಮಿಪೂಜೆ

ಲೋಕದರ್ಶನ ವರದಿ

ಗಂಗಾವತಿ 24: ಅತ್ಯಂತ ಪುರಾತನವಾದ ಪ್ರೌಢದೇವರಾಯನ ಕಾಲದ ವಿಜಯನಗರ ಕಾಲುವೆ ದುರಸ್ತಿ ಮತ್ತು ಆಧುನಿಕರಣಕ್ಕೆ ವಡರ್್ ಬ್ಯಾಂಕ್ ಮೂಲಕ ಸರಕಾರ ಅನುದಾನ ಬಿಡುಗಡೆ ಮಾಡಿದೆ.  ಈಗ ಅದರ ದುರಸ್ತಿ ಕಾರ್ಯಕ್ಕೆ ಕಾಲ ಕೂಡಿಬಂದಿದ್ದು, ಗುಣಮಟ್ಟದ ಕಾಮಗಾರಿಗೆ ಈ ಭಾಗದ ರೈತರು ಸಂಪೂರ್ಣ ಸಹಕಾರ ನೀಡಬೇಕು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು. 

ತುಂಗಭದ್ರಾ ನದಿ ನೀರನ್ನು ರೈತರ ಭೂಮಿಗೆ ಹರಿಸುವ ಮತ್ತು ನಿರಂತರ 11 ತಿಂಗಳು ಹರಿಯುವ ವಿಜಯನಗರ ಕಾಲುವೆ ದುರಸ್ತಿ ಕಾಮಗಾರಿಗೆ ಸೋಮವಾರ ಮೋತಿಘಾಟ ಬಳಿ ಭೂಮಿಪೂಜೆ ನಡೆಸಿ ಅವರು ಮಾತನಾಡಿದರು.  ಕಳೆದ 2008-13ನೇ ಸಾಲಿನಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಗುಲಬಗ್ರ್ಫ ಸಚಿವ ಸಂಪೂಟದಲ್ಲಿ ಈ ಕಾಲುವೆ ದುರಸ್ತಿಗೆ ಅನುಮೋದನೆ ನೀಡಿದ್ದರು.  ಆದರೆ ಕೆಲವು ತಾಂತ್ರಿಕ ಕಾರಣಗಳು ಹಾಗೂ ಹಿಂದಿನ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಅಭಿವೃದ್ಧಿ ಕೆಲಸ ನೆನೆಗುದಿಗೆ ಬಿದ್ದಿತ್ತು.  ಈಗ ಎಲ್ಲಾ ವಿಘ್ನಗಳು ಪರಿಹಾರವಾಗಿದ್ದು, ರೈತರ ಬೆಡಿಕೆಯಂತೆ  ಕಾಮಗಾರಿ ಹಮ್ಮಿಕೊಳ್ಳಲಾಗುತ್ತದೆ.  ವಿಜಯನಗರ ಕಾಲುವೆಯ ಎರಡು ಭಾಗದ ದುರಸ್ತಿಗೆ ರೂ.370 ಕೋಟಿ ಮಂಜೂರಾಗಿದ್ದು, ಅದರಲ್ಲಿ ಗಂಗಾವತಿ ಮೇಲ್ಮಟ್ಟ ಮತ್ತು ಕೆಳಮಟ್ಟಕ್ಕೆ ಪ್ರತ್ಯೇಕಿಸಿ ರೂ.94 ಕೋಟಿ ಅನುದಾನ ನೀಡಲಾಗಿದೆ.  ಪ್ರೌಢದೇವರಾಯ ಕಾಲದ ಈ ಕಾಲುವೆ ಆಧುನಿಕ ರೀತಿಯಲ್ಲಿ ದುರಸ್ತಿಗೊಳಿಸಬೇಕಿದೆ.  ಖ್ಯಾತ ಆರ್ಎನ್ಶೆಟ್ಟಿ ಕಂಪನಿಗೆ ಇದರ ಗುತ್ತಿಗೆ ನೀಡಲಾಗಿದೆ.  ಅತ್ಯಂತ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು. ರೈತರು ಕೂಡಾ ಕೆಲವೊಂದು ಸಣ್ಣ ಪುಟ್ಟ ಸಮಸ್ಯೆಗಳಿಗೆ ಅಡ್ಡಿಪಡಿಸದೆ ಸಹಕರಿಸಬೇಕು.  ಸುಮಾರು 3500 ಎಕರೆ ಪ್ರದೇಶದ ಭೂಮಿಗೆ ಈ ಕಾಲುವೆಯಿಂದ ನೀರು ಹರಿಸಲಾಗುತ್ತಿದೆ.  ಬಹುದಿನದ ಕನಸು ನನಸಾಗಿದೆ ಎಂದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ಮುಖಂಡ ಗೌರೀಶ ಬಾಗೋಡಿ, ಸಿದ್ಧರಾಮಸ್ವಾಮಿ, ನಾರಾಯಣಪ್ಪ, ಬಿಚ್ಚಾಲಿ ಮಲ್ಲಿಕಾರ್ಜುನ್ , ಶೇಷರಾವ್, ಚೆನ್ನಪ್ಪ ಮಳಗಿ, ಆರ್ಎನ್ ಶೆಟ್ಟಿ ಕಂಪನಿಯ ಜಿಎಂ ಕೆ.ಟಿ.ಶೆಟ್ಟಿ, ಅಭಿಯಂತರ ಕೆಶವ ಭಟ್, ಪ್ರಕಾಶಶೆಟ್ಟಿ, ನೀರಾವರಿ ಇಲಾಖೆ ಇಇ ರಾಜಶೇಖರ ಶೆಟ್ಟರ್, ಎಇ ವಿ.ಮೋಹನ್ ಸೇರಿದಂತೆ ನೂರಾರು ರೈತರು ಇದ್ದರು.