ಧಾರವಾಡ 20: ಪ್ರಸ್ತುತ ಮೊರಬ ಜಿಲ್ಲಾ ಪಂಚಾಯತ್ ಮತಕ್ಷೇತ್ರ ಪ್ರತಿನಿಧಿಸುತ್ತಿರುವ ವಿಜಯಲಕ್ಷ್ಮೀ ಕೆಂಪೇಗೌಡ ಪಾಟೀಲ ಅವರು ಇಂದು ಜರುಗಿದ ಧಾರವಾಡ ಜಿಲ್ಲಾ ಪಂಚಾಯತದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ನಾಮಪತ್ರ ಸಲ್ಲಿಸುವ ಅವಧಿಯಲ್ಲಿ ವಿಜಯಲಕ್ಷ್ಮೀ ಪಾಟೀಲ ಅವರು ಮಾತ್ರ ಎರಡು ನಾಮಪತ್ರಗಳನ್ನು ಪ್ರತ್ಯೇಕವಾಗಿ ಸಲ್ಲಿಸಿದ್ದರು. ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಹೆಚ್ಚುವರಿ ಆಯುಕ್ತರಾಗಿರುವ ಅಶೋಕ ದುಡಗುಂಟಿ ಅವರು ಅಭ್ಯಥರ್ಿಗಳ ನಾಮಪತ್ರ ಸ್ವೀಕರಿಸುವ ಕರ್ತವ್ಯ ನಿರ್ವಹಿಸಿದರು.
ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ವಿಜಯಲಕ್ಷ್ಮಿ ಪಾಟೀಲ ಅವರ ಮೊದಲ ನಾಮಪತ್ರಕ್ಕೆ ಜಿ.ಪಂ.ಸದಸ್ಯರಾದ ರೇಣುಕಾ ಇಬ್ರಾಹಿಂಪುರ ಮತ್ತು ಎರಡನೇಯ ನಾಮಪತ್ರಕ್ಕೆ ಜಿ.ಪಂ.ಸದಸ್ಯರಾದ ಕರಿಯಪ್ಪ ಮಾದರ ಅವರು ಸೂಚಕರಾಗಿದ್ದರು.
ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಪಿ.ಎ. ಮೇಘಣ್ಣವರ ಅವರು ಜಿ.ಪಂ. ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ಕಾರ್ಯ ಜರುಗಿಸಿದರು. ಸಭೆ ಆರಂಭದಲ್ಲಿ ಮಾತನಾಡಿದ ಆಯುಕ್ತರು, ಧಾರವಾಡ ಜಿಲ್ಲಾ ಪಂಚಾಯತ 22 ಸದಸ್ಯ ಸ್ಥಾನ ಬಲ ಹೊಂದಿದ್ದು, ಇಂದಿನ ಅಧ್ಯಕ್ಷ ಚುನಾವಣೆಗೆ 12 ಸದಸ್ಯರು ಹಾಜರಿದ್ದು, ಕೋರಂ ಭತರ್ಿ ಇದೆ. ಚುನಾವಣೆ ಪ್ರಕ್ರಿಯೆಯನ್ನು ಆರಂಭಿಸುತ್ತಿದ್ದೇನೆ. ಈಗಾಗಲೇ ಅಭ್ಯಥರ್ಿಯಾಗಿ ವಿಜಯಲಕ್ಷ್ಮಿ ಪಾಟೀಲ ಅವರು ಸಲ್ಲಿಸಿರುವ ಎರಡು ನಾಮಪತ್ರಗಳು ಪರಿಶೀಲಿಸಲಾಗಿ, ಕ್ರಮಬದ್ಧವಾಗಿ ಸಲ್ಲಿಕೆಯಾಗಿವೆ ಎಂದು ಹೇಳಿದರು.
ನಂತರ ಅವರು ನಾಮಪತ್ರ ಹಿಂಪಡೆಯಲು 5 ನಿಮಿಷಗಳ ಕಾಲ ಅವಕಾಶ ನೀಡಿದರು. ಕೊಟ್ಟ ಸಮಯ ಮುಗಿದ ನಂತರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಪಾಟೀಲ ವಿಜಯಲಕ್ಷ್ಮಿ ಕೆಂಪೇಗೌಡ ಅವರು ಧಾರವಾಡ ಜಿಲ್ಲಾ ಪಂಚಾಯತ ಅಧ್ಯಕ್ಷ ಸ್ಥಾನದ 5 ವರ್ಷಗಳ ಉಳಿದ ಅವಧಿಗೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಆಗಿದ್ದಾರೆ ಎಂದು ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ ಘೋಷಿಸಿದರು.
ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿ ಹೆಚ್ಚುವರಿ ಆಯುಕ್ತ ಅಶೋಕ ದುಡಗುಂಟಿ, ಧಾರವಾಡ ಜಿಲ್ಲಾ ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿಗಳು ಡಾ. ಬಿ.ಸಿ. ಸತೀಶ್, ಉಪಕಾರ್ಯದಶರ್ಿ ಎಸ್.ಜಿ. ಕೊರವರ ವೇದಿಕೆಯಲ್ಲಿದ್ದರು