ವಿಜಯಾ ಆಥರ್ೋ ಕಾರ್ಯ ಶ್ಲಾಘನೀಯ: ಡಾ. ಸಿದ್ದರಾಮ ಸ್ವಾಮೀಜಿ

ಬೆಳಗಾವಿ28: ಗೋಶಾಲೆಗೆ ಹತ್ತಾರೂ ನೀರಿನ ಟ್ಯಾಂಕರ್ಗಳನ್ನು ನೀಡಿವದರ ಜೊತೆಗೆ ಸಮಾಜದ ಸೇವೆಗೆ ವಿಜಯಾ ಆಥರ್ೋ ಆಸ್ಪತ್ರೆಯು ಮುಂದಾಗಿದೆ. ಬೆಳಗಾವಿಯಲ್ಲಿ, ತನ್ನದೇಯಾದ ಒಂದು ಛಾಪು ಮೂಡಿಸಿ. ತನ್ನ ಶ್ರಮದಿಂದ ವಿಜಯಾ ಆಥರ್ೋ ಈಷ್ಟೇತ್ತರಕ್ಕೆ ಬೆಳೆದುನಿಂತಿದೆ ಎಂದು ನಾಗನೂರು ರುದ್ರಾಕ್ಷಿಮಠದ ಮಠಾಧೀಶರಾದ ಡಾ. ಸಿದ್ದರಾಮ ಸ್ವಾಮೀಜಿ ಉದ್ಘಾಟಿಸಿದರು.

ನಗರದ ವಿಜಯಾ ಆಥರ್ೋ ಆಸ್ಪತ್ರೆ ವತಿಯಿಂದ ನೂತನ 'ನಸಿರ್ಂಗ್ ಸೈನ್ಸ್' ಮಹಾವಿದ್ಯಾಲಯ ಕಾರ್ಯಕ್ರಮವನ್ನು ರವಿವಾರ ಉದ್ಘಾಟಿಸಿ ಮಾತನಾಡಿದ ಅವರು.

ನೂರಾರೂ ರೋಗಿಗಳಿಗೆ ಉತ್ತಮ ಚಿಕ್ಸಿತೆ ನೀಡುವದ ಮೂಲಕ ಸಮಾಜ ಸೇವೆಯ ಕಾರ್ಯವನ್ನು ಮಾಡಿತೊರಿಸುತ್ತಿದೆ. ಈ ನಸಿರ್ಂಗ್ ಸೈನ್ಸ್ ಮಹಾವಿದ್ಯಾಲಯದಲ್ಲಿ ನೂರಾರೂ ವಿದ್ಯಾಥರ್ಿಗಳು ಜ್ಞಾನ ಪಡೆದು ವಿಜಯಾ ಆಥರ್ೋ ಆಸ್ಪತ್ರೆಯ ಹೆಸರನ್ನು ಇನ್ನಷ್ಟೂ ಬೆಳಗಿಸಬೇಕೆಂದರು.

ಈ ಸಂದರ್ಭದಲ್ಲಿ ಕಾರಂಜಿಮಠದ ಗುರುಸಿದ್ದ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದರು. ಬೆಳಗಾವಿ ಮಹಾಪೌರ ಬಸವರಾಜ ಚಿಕ್ಕಲದಿನ್ನಿ, ಸಂಸ್ಥೆಯ ಅಧ್ಯಕ್ಷ ಡಾ. ರವಿ ಪಾಟೀಲ, ಎಂ. ಜಿ. ಪಾಟೀಲ, ನಿವೃತ್ತ ಕೆಎಎಸ್ ಅಧಿಕಾರಿ ಎಸ್. ಜಿ. ಪಾಟೀಲ, ಜಯಶ್ರೀ ಮಾಳಗಿ, ದೀಪಾಲಿ ಕುಡರ್ೇಕರ, ನ್ಯಾಯವಾದಿ ಬಸವರಾಜ ರೊಟ್ಟಿ  ಹಾಗೂ ಉಪಸ್ಥಿತರಿದ್ದರು.