ನವದೆಹಲಿ, ೧೧ ದೇಶದ
ಪ್ರಮುಖ ಪಾವತಿ ಸಂಸ್ಥೆ ಪೇಟಿಎಂ ಸಂಸ್ಥಾಪಕ
ವಿಜಯ್ ಶೇಖರ್ ಶರ್ಮಾ ಅನಿರೀಕ್ಷಿತ ನಿರ್ಧಾರ ಕೈಗೊಂಡಿದ್ದಾರೆ. ಪೇಟಿಯಂ ಹಣಕಾಸು ಸೇವೆಗಳ ನಿರ್ದೇಶಕ ಸ್ಥಾನದಿಂದ ಕೆಳಗಿಳಿದಿದ್ದಾರೆ.ಈ ಸಂಬಂಧ ಅವರು
ಡಿಸೆಂಬರ್ ೨ ರಂದು ಪೇಟಿಎಂ ಹಣಕಾಸು ಸೇವೆಗಳ ಮಂಡಳಿಗೆ ಪತ್ರ ಬರೆದಿದ್ದಾರೆ ಎಂದು ಫೈನಾನ್ಷಿಯಲ್
ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇನ್ನಿತರ ಜವಾಬ್ದಾರಿಗಳಿಂದಾಗಿ ನಿರ್ದೇಶಕ
ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ
ಎಂದು ವಿಜಯ್ ಶೇಖರ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸ ನಿಬಂಧನೆಗಳ
ಹಿನ್ನೆಲೆಯಲ್ಲಿ ಅವರು ಹಣಕಾಸು ಸೇವೆಗಳ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಪಾವತಿ ಬ್ಯಾಂಕ್ ಅಧ್ಯಕ್ಷರು
ಎನ್‌ಬಿಎಫ್‌ಸಿ (ಬ್ಯಾಂಕೇತರ ಹಣಕಾಸು ಕಂಪನಿ) ನಿರ್ದೇಶಕ ಸ್ಥಾನ ಹೊಂದುವುದನ್ನು ನಿಷೇಧಿಸಿತ್ತು. ಬ್ಯಾಂಕ್ ಗೆ ಸೇರಿದ ಅಂಗಸಂಸ್ಥೆಯಾಗಿರದ ಹೊರತು ಬ್ಯಾಂಕಿನ ಅಧ್ಯಕ್ಷರು ನಿರ್ದೇಶಕರಾಗಬಾರದು
ಎಂದು ಸ್ಪಷ್ಟಪಡಿಸಿತ್ತು. ಈ ನಡುವೆ, ಸಂಸ್ಥೆಯ ಉಪಾಧ್ಯಕ್ಷ ರೋಹಿತ್ ಲೋಹಿಯಾ ಅವರನ್ನು ನಿರ್ದೇಶಕರನ್ನಾಗಿ ಆಡಳಿತ
ಮಂಡಳಿ ನೇಮಿಸಿದೆ. ಪೇಟಿಎಂ ತನ್ನ ಪಾವತಿ
ಬ್ಯಾಂಕ್ ಅನ್ನು ಭಾರತದಲ್ಲಿ ೨೦೧೭ ರ ಮೇನಲ್ಲಿ ಆರಂಭಿಸಿತ್ತು.