ಲಂಡನ್: ಉದ್ಯಮಿ ವಿಜಯ್ ಮಲ್ಯಗೆ ಮತ್ತೆ ಹಿನ್ನಡೆ ಉಂಟಾಗಿದ್ದು, ಲಂಡನ್ ಕೋರ್ಟ್ ನೀಡಿದ್ದ ಹಸ್ತಾಂತರ ಆದೇಶದ ವಿರುದ್ಧ ಮಲ್ಯ ಸಲ್ಲಿಸಿದ್ದ ಮೇಲ್ಮನವಿಯನ್ನು ಯುನೈಟೆಡ್ ಕಿಂಗ್ಡಮ್ ಹೈಕೋರ್ಟ್ ವಜಾಗೊಳಿಸಿದೆ.
ಈ ಹಿನ್ನಲೆಯಲ್ಲಿ ಭಾರತಕ್ಕೆ ಮಲ್ಯ ಹಸ್ತಾಂತರ ಶೀಘ್ರ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತೀಯ ಸ್ಟೇಟ್ ಬ್ಯಾಂಕ್ ಸೇರಿ ಹಲವು ಬ್ಯಾಂಕ್ಗಲ್ಲಿ ಸಾಲ ಪಡೆದಿದ್ದ ಮಲ್ಯ ಅದನ್ನು ಪಾವತಿಸದೇ ವಿದೇಶಕ್ಕೆ ಪರಾರಿಯಾಗಿದ್ದರು. ಸುಸ್ತಿದಾರರಾಗಿದ್ದ ವಿಜಯ್ ಮಲ್ಯ ಅವರನ್ನು ಆಥರ್ಿಕ ಅಪರಾಧಿ ಎಂದು ಘೋಷಣೆ ಕೂಡ ಆಗಿದೆ. ಭಾರತಕ್ಕೆ ಈಗ ಮೋಸ್ಟ್ ವಾಂಟೆಡ್ ಆಗಿದ್ದಾರೆ.
ಭಾರತದ ಜಾರಿ ನಿದರ್ೆಶನಾಲಯ ಸಲ್ಲಿಸಿದ್ದ ಅಜರ್ಿ ವಿಚಾರಣೆ ನಡೆಸಿದ ಲಂಡನ್ ಕೋರ್ಟ್ ಕಳೆದ ಡಿಸೆಂಬರ್ನಲ್ಲಿ ತೀಪು ನೀಡಿ ಹಸ್ತಾಂತರ ಮಾಡಲು ಆದೇಶ ನೀಡಿತ್ತು.
ಇದನ್ನು ಪ್ರಶ್ನಿಸಿ ವಿಜಯ್ ಮಲ್ಯ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಹೈಕೋಟರ್್ನಲ್ಲೂ ವಿಜಯ್ ಮಲ್ಯಗೆ ಹಿನ್ನಡೆಯಾಗಿದೆ. ವಿಜಯ್ ಮಲ್ಯ ಹಸ್ತಾಂತರಕ್ಕೆ ಪ್ರಯತ್ನಿಸುತ್ತಿರುವ ಭಾರತಕ್ಕೆ ಮತ್ತೊಂದು ಯಶಸ್ಸು ದೊರೆತಂತಾಗಿದೆ.