ವಸತಿ ಸಮೂಚ್ಛಯ ಕಾಮಗಾರಿಗಳ ವೀಕ್ಷಣೆ

ಗದಗ 29: ನಗರದ ಗಂಗಿಮಡಿಯಲ್ಲಿ ನಿಮರ್ಾಣವಾಗುತ್ತಿರುವ 3630 ವಸತಿ ಸಮೂಚ್ಛಯಗಳ ನಿಮರ್ಾಣ ಕಾಮಗಾರಿಯನ್ನು ಶಾಸಕರಾದ ಎಚ್.ಕೆ.ಪಾಟೀಲ ಅವರಿಂದು ವೀಕ್ಷಿಸಿದರು. ವಸತಿ ಸಮೂಚ್ಛಯದ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಮಾದರಿ ಕಾಮಗಾರಿಯನ್ನಾಗಿಸುವ ನಿಟ್ಟಿನಲ್ಲಿ ಶಾಸಕರಾದ ಎಚ್.ಕೆ.ಪಾಟೀಲ ಅವರು ಸಂಬಂಧಿತ ಅಧಿಕಾರಿಗಳಿಗೆ ಅಗತ್ಯದ ಸಲಹೆಗಳನ್ನು ನೀಡಿದರು. ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ ಸುರೇಶ ಕಟ್ಟಿಮನಿ, ಜಿ.ಪಂ. ಸದಸ್ಯ ಸಿದ್ದು ಪಾಟೀಲ, ನಗರ ಸಭೆ ಸದಸ್ಯ ಎಂ.ಸಿ. ಶೇಖ್, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಪೌರಾಯುಕ್ತ ಮನ್ಸೂರ ಅಲಿ ಗಣ್ಯರಾದ ಪ್ರಭು ಬುರಬುರೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.