ಲೋಕದರ್ಶನ ವರದಿ
ಸಿಂದಗಿ 14: ವಿದ್ಯಾಥರ್ಿ ಜೀವನ ಅತ್ಯಂತ ಮಹತ್ವದ್ದಾಗಿದೆ. ಈ ಹಂತವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎಚ್.ಎಸ್.ನಗನೂರ ಹೇಳಿದರು. ಪಟ್ಟಣದ ಅಂಜುಮನ್ ಪ್ರೌಢಶಾಲೆಯ ಆವರಣದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಥರ್ಿಗಳ ಶುಭಕೋರುವ ಸಮಾರಂಭದಲ್ಲಿ ಸನ್ಮಾನೋತ್ತರವಾಗಿ ಮಾತನಾಡಿದರು.
ವಿದ್ಯಾಥರ್ಿಗಳಲ್ಲಿ ಪರೀಕ್ಷೆಯ ಆತಂಕ ಬೇಡ. ಸತತ ಅಧ್ಯಯನ ಮಾಡಿದಲ್ಲಿ ಪರೀಕ್ಷೆ ಎದರಿಸುವ ಸಾಮಥ್ರ್ಯ ಬರುತ್ತದೆ. ಸರಣಿ ಪರೀಕ್ಷೆ ಪ್ರಶ್ನೆ ಪತ್ರಿಕೆಗಳನ್ನು ಹಾಗೂ ಸಮಗ್ರ ವಿಷಯವನ್ನು ಪುನರಾವಲೋಕನ ಮಾಡಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿದರ್ೇಶಕ ಮಹೇಶ ಪೋದ್ದಾರ ಮಾತನಾಡಿ, ವಿದ್ಯಾಭ್ಯಾಸದಲ್ಲಿ ಹಿಂಜರಿಕೆ ಬೇಡ. ವಿದ್ಯಾಥರ್ಿಗಳು ಕೇವಲ ಪರೀಕ್ಷೆಯಲ್ಲಿ ಅಂಕಗಳನ್ನು ಪಡೆಯಲು ಅಧ್ಯಯನ ಮಾಡದೇ ವ್ಯಕ್ತಿತ್ವ ವಿಕಸನಕ್ಕಾಗಿ ಅಧ್ಯಯನ ಮಾಡಬೇಕು ಎಂದರು. ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಪ್ರಧಾನಕಾರ್ಯದಶರ್ಿ ಎಸ್.ಎಂ.ಪಾಟೀಲ ಗಣಿಹಾರ ಮಾತನಾಡಿ, ಸಂಸ್ಥೆಯಲ್ಲಿ ವಿದ್ಯಾಥರ್ಿಗಳಿಗೆ ಶಿಕ್ಷಣ ನೀಡುವ ಜೊತೆಗೆ ಅವರಿಗೆ ಸಂಸ್ಕಾರ ನೀಡಲಾಗುತ್ತಿದೆ. ಪಠ್ಯದ ಜೊತೆಗೆ ಪಠ್ಯಪೂರಕ ಚಟುವಟಿಕೆಗಳಲ್ಲಿ ವಿದ್ಯಾಥರ್ಿಗಳನ್ನು ತೊಡಗಿಸಿಕೊಳ್ಳುವ ಮೂಲಕ ಅವರ ವ್ಯಕ್ತಿತ್ವ ವಿಕಸನಕ್ಕೆ ಪ್ರೋತ್ಸಾಹಿಸಲಾಗುತ್ತಿದೆ ಎಂದರು. ಹೋತರ್ಿ ರೇವಣಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ವಿ.ಎಂ.ಭಾಗಾಯತ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ನೂತನ ಕ್ಷೇತ್ರಶಿಕ್ಷಣಾಧಿಕಾರಿ ಎಚ್.ಎಸ್.ನಗನೂರ, ಕ್ಷೇತ್ರಸಮನ್ವಯಾಧಿಕಾರಿ ಸಂತೋಷಕುಮಾರ ಬಿಳಗಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿದರ್ೇಶಕ ಮಹೇಶ ಪೋದ್ದಾರ, ವಿಶ್ರಾಂತ ಪ್ರಾಧ್ಯಾಪಕ ವಿ.ಎಂ.ಭಾಗಾಯತ್ ಹಾಗೂ ಸಂಸ್ಥೆಯಲ್ಲಿ ನಿವೃತ್ತಿಹೊಂದಿದ ಸಿಬ್ಬಂಧಿಗಳಾದ ಎಂ.ಎಚ್.ಪಾನಫರೋಶ್, ಎಚ್.ಎಚ್.ಮಸಳಿ, ಜಿ.ಎ.ಅತ್ತಾರ, ಎಸ್.ಜಿ.ಚೌಧರಿ, ಎಫ್.ಎಂ.ಗಿರಿಗಾಂವ್ ಅವರನ್ನು ಸಂಸ್ಥೆ ವತಿಯಿಂದ ಸಂಸ್ಥೆಯ ಪ್ರಧಾನಕಾರ್ಯದಶರ್ಿ ಎಸ್.ಎಂ.ಪಾಟೀಲ ಗಣಿಹಾರ ಅವರು ಸನ್ಮಾನಿಸಿ ಗೌರವಿಸಿದರು. ಸನ್ಮಾನೋತ್ತರ ಎಂ.ಎಚ್.ಪಾನಫರೋಶ್, ಎಫ್.ಎಂ.ಗಿರಿಗಾಂವ್ ಮಾತನಾಡಿದರು. ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಪಾರಿತೋಷಕ ನೀಡಿ ಪ್ರೋತ್ಸಾಹಿಸಿದರು. ಉಪಪ್ರಾಚಾರ್ಯೆ ಎಸ್.ಎ.ದೊಡಮನಿ, ಸಂಸ್ಥೆ ಅಧ್ಯಕ್ಷ ಎ.ಎ.ದುದನಿ, ಪ್ರಾಚಾರ್ಯ ಎಂ.ಡಿ.ಬಳಗಾನೂರ, ನಿದರ್ೇಶಕ ಮಹಿಬೂಬ ಹಸರಗುಂಡಗಿ, ಎ.ಐ.ಮುಲ್ಲಾ, ಐಟಿಐ ಕಾಲೇಜಿನ ಪ್ರಾಚಾರ್ಯ ಝಡ್.ಐ.ಅಂಗಡಿ, ಕಾಯರ್ಾಧ್ಯಕ್ಷ ಎಮ್.ಎಚ್.ಪಾನಫರೋಶ್, ವಿದ್ಯಾಥರ್ಿ ಪ್ರತಿನಿಧಿಗಳಾದ ಫೈರೋಜ್ ಮನಿಯಾರ, ಸಾನಿಯಾ ಬಮ್ಮನಜೋಗಿ, ಸಾನಿಯಾ ಸಿಕ್ಕಲಗಾರ ಅವರು ವೇದಿಕೆ ಮೇಲೆ ಇದ್ದರು. ಮೌಲಾನಾ ಮಹ್ಮದಅಲಿ ಇಟಗಿ ಕುರಾನ ಪಠಿಸಿದರು. ಮುಸ್ಕಾನ್ ಮಕಾನಾದರ ನಾಥ ಪಠಿಸಿದರು. ಉಜಮಾ ಬಡಿಗೇರ ಪ್ರಾಥರ್ಿಸಿದರು. ಪ್ರಾಚಾರ್ಯ ಎಂ.ಡಿ.ಬಳಗಾನೂರ ಸ್ವಾಗತಿಸಿದರು. ಪ್ರಭುಲಿಂಗ ಲೋಣಿ ನಿರೂಪಿಸಿದರು. ಎಸ್.ಎ.ದೊಡಮನಿ ವಂದಿಸಿದರು.