ಧಾರವಾಡ 30: ಸಮಸ್ಯೆಗಳನ್ನು ಎದುರಿಸಿ ಛಲದಿಂದ ಗುರಿಯನ್ನು ಸಾಧಿಸುವ ಮನೋಭಾವನೆ ಹೊಂದಿದಾಗ ಮಾತ್ರ ವಿದಾರ್ಥಿ ಜೀವನ ಯಶಸ್ವಿಯಾಗುತ್ತದೆ ಎಂದು ವಿಜಯಪುರದ ವೃತ್ತ ನಿರೀಕ್ಷಕ ಕುಬೇರ ರಾಯಮಾನೆ ಹೇಳಿದರು.
ಅವರು ಕನರ್ಾಟಕ ಕಲಾ ಮಹಾವಿದ್ಯಾಲಯದ ಸೃಜನಾ ರಂಗಮಂದಿರದಲ್ಲಿ 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಜಿಮಖಾನಾದ ಸಾಂಸ್ಕೃತಿಕ ಮತ್ತು ಇತರ ಕಾರ್ಯಚಟುವಟಿಕೆಗಳ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿದ್ಯಾಥರ್ಿಗಳು ಜೀವನದಲ್ಲಿ ಗುರಿಯನ್ನು ಹೊಂದುವದರ ಜೊತೆಗೆ ಶಿಸ್ತು, ಸಂಯಮ ನಯ, ವಿನಯತೆ ಮತ್ತು ಹಿರಿಯರಿಗೆ ಗೌರವಿಸುವ ಗುಣವನ್ನು ಬೆಳಸಿಕೊಳ್ಳಬೇಕು ಎಂದ ಅವರು ಸಮಯದ ಪರಿಪಾಲನೆ ಬಹಳ ಮುಖ್ಯ ಎಂದರು. ಇತಿಹಾಸದಲ್ಲಿ ಆಗಿ ಹೋದ ಅನೇಕ ಮಹಾನ್ ಆದರ್ಶವ್ಯಕ್ತಿಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ಜಿಮಖಾನಾದ ಉಪಾಧ್ಯಕ್ಷ ಡಾ. ಅಮೃತ್ ಯಾದರ್ಿ ಮಾತನಾಡಿ ವಿದ್ಯಾಥರ್ಿಗಳು ಶಿಕ್ಷಣದ ಜೊತೆಗೆ ಪರಿಸರ ಸಂರಕ್ಷಣೆಗೆ ಮಹತ್ವ ಕೊಡಬೇಕು ಮತ್ತು ಇತರೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರ ಪ್ರಶಸ್ತಿ ಪಡೆದ ಕೆಸಿಡಿಯ ಎನ್.ಎಸ್.ಎಸ್ ಅಧಿಕಾರಿ ಡಾ. ಬಿ.ಎಸ್.ಭಜಂತ್ರಿ ಮಾತನಾಡಿ ನಾಯಕತ್ವ, ವ್ಯಕ್ತಿತ್ವ ವಿಕಸನ ಮತ್ತು ಸಾಮಾಜಿಕ ಮತ್ತು ಗ್ರಾಮೀಣ ಅಭಿವೃದ್ಧಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಎನ್.ಎಸ್.ಎಸ್ ಯೋಜನೆ ಸಹಾಯಕವಾಗಿದೆ ಎಂದರು.
ಕೆಸಿಡಿಯ ಪ್ರಾಚಾರ್ಯ ಡಾ. ಬಿ.ಎಫ್.ಚಾಕಲಬ್ಬಿ ಮಾತನಾಡಿ ಉನ್ನತ ಹುದ್ದೆಗೆ ತಲುಪಲು ಪಠ್ಯೇತರ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾಥರ್ಿ ಜೀವನದಲ್ಲಿ ಬಹಳ ಮುಖ್ಯವಾಗಿರುವದರಿಂದ ಎಲ್ಲ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿರಿ ಎಂದರು.
ಡಾ. ಮಂಜುಳಾ ಚುಲುವಾದಿ, ಡಾ. ಎಸ್. ಅನ್ನಪೂರ್ಣ, ಡಾ. ಎಸ್.ಜಿ.ಜಾಧವ, ಡಾ. ಎಸ್.ಎನ್ ಹುಲ್ಲಣ್ಣವರ್, ಡಾ. ಆಯ್.ಸಿ.ಮುಳಗುಂದ, ಡಾ. ಎಂ.ಎನ್. ಮ್ಯಾಗೇರಿ, ಡಾ. ಅಶೋಕ ಐನಾಪೂರ, ಡಾ. ಎಸ್.ಎ.ಜಾಲಿಹಾಳ್, ಡಾ. ಡಿ.ಬಿ.ಕರಡೋಣಿ, ಡಾ. ಮುಕುಂದ ಲಮಾಣಿ, ಡಾ. ಕಿರಣಕುಮಾರ, ಡಾ. ವಾಯ್.ಎಸ್ ರಾವುತ್, ಡಾ. ಎಸ್.ಎ.ಕೊಳೂರ್, ಡಾ. ಬಿ.ಎಸ್.ಭಜಂತ್ರಿ, ಡಾ.ಸ್ಟೇಲ್ಲಾ ಸ್ಟಿವನ್, ಸೇರಿದಂತೆ ಪ್ರಾಧ್ಯಾಪಕರು ವಿದ್ಯಾಥರ್ಿಗಳು ಹಾಜರಿದ್ದರು,