ಪ್ರಯತ್ನಶೀಲರಿಗೆ ಗೆಲುವು ಸುಲಭ -ಸವಿತಾ ರಾಠೋಡ. ಪಿಯೂಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ

Victory is easy for those who strive -Savita Rathoda. Farewell program for PUC students

ಪ್ರಯತ್ನಶೀಲರಿಗೆ ಗೆಲುವು ಸುಲಭ -ಸವಿತಾ ರಾಠೋಡ. ಪಿಯೂಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ  

ಚಿಮ್ಮಡ 2: ಇಂದಿನ  ಆಧುನಿಕ  ಯುಗದಲ್ಲಿ  ಪ್ರಯತ್ನಶಿಲರಿಗೆ  ಗೆಲುವು ಯಾವತ್ತಿಗೂ ಕಟ್ಟಿಟ್ಟ ಬುತ್ತಿ ಇದ್ದಂತೆ, ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಪ್ರತಿಹಂತದಲ್ಲೂ ಗೆಲುವು ಸಾಧ್ಯವೆಂದು ಸರಕಾರಿ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಸವಿತಾ ರಾಠೋಡ ಹೇಳಿದರು. 

ಗ್ರಾಮದ  ಸರಕಾರಿ  ಪದವಿಪೂರ್ವ ವಿದ್ಯಾಲಯದಲ್ಲಿ ಶನಿವಾರದಂದು ಹಮ್ಮಿಕೊಂಡಿದ್ದ ಪ್ರಥಮ ಪಿಯೂಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ  ಕ್ರೀಢೆ,  ಸಾಂಸ್ಕ್ರತಿಕ  ಚಟುವಟಿಕೆಗಳ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ವಿದ್ಯಾಲಯದಲ್ಲಿ ಸಹಪಾಠಿಗಳೊಂದಿಗೆ ಮಾತ್ರ ಪೈಪೋಟಿ ಇರುತ್ತದೆ, ಪರೀಕ್ಷೆಯಲ್ಲಿ ಇಡೀ ರಾಜ್ಯದ ವಿದ್ಯಾರ್ಥಿಗಳೊಂದಿಗೆ ಪೈಪೋಟಿ ನಡೆಬೇಕಾಗುತ್ತದೆ, ಓದುವ ಸಮಯದಲ್ಲಿ ತಮ್ಮ ಗಮನವನ್ನು ಬೇರೆಡೆ ತಿರುಗಿಸದೆ ನೇರ ಗುರಿಯೊಂದಿಗೆ ಸತತ ಅಧ್ಯಯನ ಮಾಡಿದಲ್ಲಿ ಜೀವನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಾಧನೆ ಮಾಡಬಹುದು, ಉತ್ತಮ ಮನೋಭಾವ, ಒಳ್ಳೆಯ ನಡುವಳಿಕೆಯಿಂದ ತಂದೆ ತಾಯಿಯರಿಗೆ ವಿಧೇಯರಾಗಿ ಅದ್ಯಯನ ಮಾಡಿದಲ್ಲಿ ಒಳ್ಳೆಯ ಫಲ ದೊರೆಯಲಿದೆ ಎಂದರು. 

ಹಿಂದಿನ ಪ್ರಾಚಾರ್ಯ ಶರತ್ಚಂದ್ರ ಜಂಬಗಿ ಮಾತನಾಡಿ ಗ್ರಾಮಸ್ಥರ, ಕಾಲೇಜು ಅಭಿವೃದ್ದಿ ಸಮೀತಿಯ ಸಹಕಾರದಿಂದ ಹಲವಾರು ಕೊರತೆಗಳ ನಡುವೆಯೂ ವಿದ್ಯಾಲಯ ಪ್ರಸಕ್ತ ಸಾಲಿನ ಫಲಿತಾಂಶ ಶೇ. 100 ಸಾಧನೆ ಮಾಡಿದ್ದು ಗ್ರಾಮಕ್ಕೆ ಹೆಮ್ಮಯ ವಿಚಾರವಾಗಿದ್ದು ಈ ಸಾಧನೆ ಮುಂದಿನ ಫಲಿತಾಶ ವೃದ್ದಿಸುವ ಜವಾಬ್ದಾರಿಯನ್ನು ನಮ್ಮ ಉಪನ್ಯಾಸಕರಿಗೆ ನೀಡಿದೆ ಎಂದರು. 

ವಿದ್ಯಾಲಯದ  ಅಭಿವೃದ್ದಿ  ಸಮೀತಿಯ ಪ್ರಭು ಪಾಲಭಾವಿ, ಉಪನ್ಯಾಸಕರಾದ ಬಿ.ಬಿ.ಕುದರಿಮನಿ ಮಾತನಾಡಿದರು.     

ಅಭಿವೃದ್ದಿ ಸಮೀತಿಯ ಅಧ್ಯಕ್ಷ ಬಸವರಾಜ ಕುಂಚನೂರ, ಉಪಾಧ್ಯಕ್ಷ ಅವ್ವನಪ್ಪಾ ಮುಗಳಖೋಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಪರಾ​‍್ಪ ನೇಸೂರ, ಬೀರಾ​‍್ಪ ಹಳೆಮನಿ, ರಾಚಯ್ಯ ಮಠಪತಿ, ಶಂಕರ ಬ. ಪಾಟೀಲ, ಕಾಳಪ್ಪ ಬಡಿಗೇರ, ಹುಸೇನ ಗೊಳಸಂಗಿ, ಶಂಕರ ಬಿಳ್ಳೂರ, ಮಂಜು ಸಿಡ್ಲೆವಗೋಳ ಸೇರಿದಂತೆ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಇದೇ ಸಂಧರ್ಬದಲ್ಲಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾದ್ಯಾಯೆ ಎಂ.ಎಸ್‌. ಜಿಟ್ಟಿ, ವಿದ್ಯಾಲಯದ ಹಿಂದಿನ ಪ್ರಾಚಾರ್ಯ ಶರತ್ಚಂದ್ರ ಜಂಬಗಿ, ಹಾಗೂ ಸಾಧನೆಗೈದ  ವಿದ್ಯಾರ್ಥಿನಿಯರನ್ನು  ನಗದು  ಪುರಸ್ಕಾರದೊಂದಿಗೆ ಸತ್ಕರಿಸಿ ಗೌರವಿಸಲಾಯಿತು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.