ವಿಜಯ ದಿವಸ ಕಾರ್ಯಕ್ರಮ ಆಚರಣೆ
ಬಳ್ಳಾರಿ 17: ನೆಹರು ಯುವ ಕೇಂದ್ರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಸಮಾಜ ಕಲ್ಯಾಣ ಇಲಾಖೆ ಕಲ್ಯಾಣ ಕರ್ನಾಟಕ ಹಾಗೂ ಮಾಜಿ ಅರೆ ಸೇನಾಪಡೆಗಳ ಕ್ಷೇಮಾಭಿವೃದ್ಧಿ ಇವರ ಸಹಯೋಗದಲ್ಲಿ ನಗರದ ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ (ನಂಬರ್ ಒನ್) ಸೋಮವಾರದಂದು ವಿಜಯ ದಿವಸ ಕಾರ್ಯಕ್ರಮ ಏರಿ್ಡಸಲಾಗಿತ್ತು.
ಭಾರತವು 1971 ಡಿಸೆಂಬರ್ 03 ರಿಂದ 16 ಹೊರಗೆ ನಡೆದಂತ ಯುದ್ಧದಲ್ಲಿ ಕೇವಲ 13 ದಿನಗಳಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಅಂಗವಾಗಿ ವಿಜಯ ದಿವಸ ಆಚರಿಸಲಾಗುತ್ತದೆ.
ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆ ಹಾಗೂ ನೆಹರು ಯುವ ಕೇಂದ್ರ ವತಿಯಿಂದ ಮಾಜಿ ಅರೆ ಸೈನಿಕರಿಗೆ ಮತ್ತು ಮುಖ್ಯ ಅತಿಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಿ.ಮಲ್ಲಿಕಾರ್ಜುನ, ಟ್ರಾಫಿಕ್ ಪೊಲೀಸ್ ಇನ್ಸ್‌ಪೆಕ್ಟರ್ ಅಯ್ಯನಗೌಡ ಪಾಟೀಲ್, ಮತ್ತು ಮಾಜಿ ಸೈನಿಕರಾದ ಎಂ.ಎಸ್.ರಾವ್, ಇಂದಿರಾ ನಗರದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಲತಾ, ಕಲ್ಯಾಣ ಕರ್ನಾಟಕ ಮಾಜಿ ಅರೆ ಸೇನೆ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್ ಪ್ರಹ್ಲಾದ ರೆಡ್ಡಿ, ಉಪಾಧ್ಯಕ್ಷ ಈಶ್ವರ ರೆಡ್ಡಿ ಸೇರಿದಂತೆ ನಿರ್ದೇಶಕರು, ವಸತಿ ನಿಲಯದ ವಾರ್ಡನ್, ವಿದ್ಯಾರ್ಥಿಗಳು ಇದ್ದರು.