ಮುಗಳಖೋಡ: ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಗೆಲುವು ಸಂಭ್ರಮಾಚರಣೆ

ಲೋಕದರ್ಶನ ವರದಿ

ಮುಗಳಖೋಡ 09: ಬಹುನಿರೀಕ್ಷಿತ, ಕುತೂಹಲ ಕೆರಳಿಸಿದ ಉಪಚುನಾವಣೆ ಮಹಾಸಮರದಲ್ಲಿ ಬಿಜೆಪಿ ಅಭ್ಯಥರ್ಿಗಳಾದ ಗೋಕಾಕ ಕ್ಷೇತ್ರದ ರಮೇಶಅಣ್ಣಾ ಜಾರಕೀಹೋಳೆ, ಅಥಣಿ ಕ್ಷೇತ್ರದ ಮಹೇಶ ಕುಮಟಳ್ಳಿ, ಕಾಗವಾಡ ಕ್ಷೇತ್ರದ ಶ್ರೀಮಂತ ಪಾಟೀಲ ಗೆಲುವಿನ ನಗೆ ಬೀರಿದ್ದು, ಹಾಗೂ ಜಿಜೆಪಿಯ 12 ಕ್ಷೇತ್ರದಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಪಟ್ಟಣದದಲ್ಲಿ ಇಂದು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವವನ್ನು ಆಚರಿಸಲಾಯಿತು. 

ಈ ಸಂದರ್ಭದಲ್ಲಿ ಪಟ್ಟಣದ ಹಿರಿಯರು, ಮಾಜಿ ಜಿ.ಪಂ ಸದಸ್ಯರು ಹಾಗೂ ರಮೇಶಅಣ್ಣಾ ಜಾರಕಿಹೋಳೆ ಅವರ ಅಭಿಮಾನಿಗಳಾದ ಡಾ.ಸಿ.ಬಿ.ಕುಲಿಗೋಡ ಅವರು ಮಾತನಾಡಿ ಇಂದು ನಮ್ಮೇಲ್ಲರ ಮಾರ್ಗದರ್ಶಕರಾದ ರಮೇಶಅಣ್ಣಾ ಜಾರಕಿಹೋಳೆ ಅವರ ಗೆಲವು ನಮ್ಮೇಲ್ಲರಿಗೆ ತುಂಬಾ ಸಂತೋಷವನ್ನುಂಟು ಮಾಡಿದೆ. ಅದರೊಂದಿಗೆ ಮಹೇಶ ಕುಮಟಳ್ಳಿ ಹಾಗೂ ಶ್ರೀಮಂತ ಪಾಟೀಲ ಅವರ ಗೆಲುವು ಕೂಡಾ ಸಂತಸ ತಂದಿದ್ದು, ಇಂದು ನಾವು ಈ ಎಲ್ಲ ಅಭ್ಯಥರ್ಿಗಳ ಗೆಲುವಿನ ಹಾಗೂ ಬಿಜೆಪಿಯು 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಸಿಹಿ ಹಂಚಿ ವಿಜಯೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದರು. 

ಈ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅಭಿಮಾನಿ ಬಳಗದವರಾದ ಡಾ.ಸಿ.ಬಿ.ಕುಲಿಗೋಡ, ಪ್ರಕಾಶ ಆದಪ್ಪಗೋಳ, ಪಿ.ಬಿ.ಖೇತಗೌಡರ, ವಿಠ್ಠಲ ಯಡವನ್ನವರ, ಮಯೂರ ಕುರಾಡೆ, ರಮೇಶ ಯಡವನ್ನವರ, ಕರೇಪ್ಪ ಮಂಟೂರ, ಚಂದ್ರಕಾಂತ ಗೌಲತ್ತಿನವರ, ಅಶೋಕ ಬಾಗಿ, ರಾಮಣ್ಣ ಪತ್ತಾರ, ನೇಮಣ್ಣ ಬಾಬನ್ನವರ, ಮಲ್ಲಪ್ಪ ಮುಧೋಳ, ಕಪೀಲ ಕರಿಭೀಮಗೋಳ, ಗೋಪಾಲ ಯಡವನ್ನವರ, ಪಿ.ಎಂ.ಕುಲಿಗೋಡ, ಶಿವಪುತ್ರ ಯಡವನ್ನವರ, ಲಕ್ಷ್ಮಣ ಗೋಕಾಕ ಮುಂತಾದವರು ಪಾಲ್ಗೊಂಡಿದ್ದರು.