ರಾಣೇಬೆನ್ನೂರಿನ ವೆಂಕಟೇಶ ಈಡಿಗರ ಅವರಿಗೆ ಮರೆಯದ ಮಾಣಿಕ್ಯ ರಾಜ್ಯ ಪ್ರಶಸ್ತಿ ಪ್ರದಾನ

Venkatesh Eedigara of Ranebennur presented with the Unforgettable Ruby State Award

ರಾಣೇಬೆನ್ನೂರಿನ ವೆಂಕಟೇಶ ಈಡಿಗರ ಅವರಿಗೆ ಮರೆಯದ ಮಾಣಿಕ್ಯ ರಾಜ್ಯ ಪ್ರಶಸ್ತಿ ಪ್ರದಾನ  

ರಾಣೇಬೆನ್ನೂರು 24 :  ನಗರದ ಸಾಹಿತಿ, ಶಿಕ್ಷಕ, ರಂಗ ಕರ್ಮಿ ವೆಂಕಟೇಶ ಈಡಿಗರ ಅವರು, ಮರೆಯದ ಮಾಣಿಕ್ಯ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.     ವಿವಿಧ ಕ್ಷೇತ್ರ ಸಾಧಕ ಗಣ್ಯರಿಗೆ ಬೆಂಗಳೂರು ಆಶಾಕಿರಣ ಕಲಾ ಟ್ರಸ್ಟ್‌ ಕೊಡ ಮಾಡುವ ಈ ಪ್ರತಿಷ್ಠಿತ" ಮರೆಯದ ಮಾಣಿಕ್ಯ ರಾಜ್ಯ ಪ್ರಶಸ್ತಿ  ಪ್ರಧಾನ ಸಮಾರಂಭವು ಏಪ್ರಿಲ್ 19, 2025 25ರಂದು ಶನಿವಾರ ಮೈಸೂರಿನ ಶನೇಶ್ವರ ದೇವಾಲಯದ ಸೇವಾ ಸಮಿತಿ ಸಭಾಭವನದಲ್ಲಿ ಅವರು ಸಾರ್ವಜನಿಕವಾಗಿ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಆಶಾ ಕಿರಣದ ಅಧ್ಯಕ್ಷ ಶ್ರೀಮತಿ ಮಾಲತಿ ಶ್ರೀ, ಚಲನಚಿತ್ರ ನಿರ್ಮಾಪಕ ಆದಿತ್ಯ ಚಿಕ್ಕಣ್ಣನವರು, ಶನೀಶ್ವರ ದೇವಳದ ಅಧ್ಯಕ್ಷ ಶ್ರೀಮತಿ ವಿಜಯ ನಂಜುಂಡಯ್ಯ, ಕನ್ನಡ ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಜಿ.ಎನ್‌. ಮಲ್ಲಿಕಾರ್ಜುನ ಸ್ವಾಮಿ, ಸೇರಿದಂತೆ ಮತ್ತಿತರ ಗಣ್ಯರು ಇತರೆ ವಿವಿಧ  ಪ್ರಶಸ್ತಿ ಪುರಸ್ಕೃತರು, ಅಭಿಮಾನಿಗಳು ಪಾಲ್ಗೊಂಡಿದ್ದರು. ಪ್ರಶಸ್ತಿ ಪುರಸ್ಕೃತ ವೆಂಕಟೇಶ ಈಡಿಗರ ಅವರಿಗೆ, ನಗರವು ಸೇರಿದಂತೆ, ಜಿಲ್ಲೆಯ ಮತ್ತು ನಾಡಿನ ಅನೇಕ ಸಾಂಸ್ಕೃತಿಕ ಸಂಘಟನೆಗಳು ಅಭಿನಂದಿಸಿವೆ.