ಲೋಕದರ್ಶನ ವರದಿ
ಬೆಳಗಾವಿ 23: ದಿ. 22. ರಂದು ಬೆಂಗಳೂರಿನಿಂದ ಜ್ಯೋಧಪೂರಕೆ ತೆರಳುತ್ತಿರುವ 35-40 ಪ್ರಯಾನಿಕರಿರುವಎಮ್.ಆರ್.ಟ್ರ್ಯಾವೆಲ ಬಸ್ಸು ಚಾಲಕನ ನಿರ್ಲಕ್ಷದಿಂದ ನಿಯಂತ್ರನತಪ್ಪಿಎಮ್.ಕೆ. ಹುಬ್ಬಳ್ಳಿಯ ದಾಸ್ತಿಕೋಪ್ಪ ಹತ್ತಿರ ಮುಂಜಾನೆ 9.30 ಕ್ಕೆ ಅಪಘಾತಕ್ಕಿಡಾಗಿ 28 ಜನ ಪ್ರಯಾನಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸದರಿ ಗಾಯಾಳುಗಳನ್ನು ಬೆಳಗಾವಿಯ ಜಿಲ್ಲಾಆಸ್ಪತ್ರೆಯಲ್ಲಿ ದಾಖಲಿಸಲಾಯಿತು.
ಈ ಸಂದರ್ಭದಲ್ಲಿ ವಿಷಯ ತಿಳಿದು ಬೆಳಗಾವಿ ಉತ್ತರ ಶಾಸಕರಾದ ಅನಿಲ ಬೆನಕೆರವರು ಆಸ್ಪತ್ರೆಗೆ ಭೆಟಿ ನೀಡಿಗಾಯಾಳುಗಳನ್ನು ವಿಚಾರಿಸಿ ಗಾಯಾಳುಗಳಿಗೆ ನೀರು ಹಾಗೂ ಹಣ್ಣು ಹಂಪಲವನ್ನು ವಿತರಿಸಿ ಜಿಲ್ಲಾಆಸ್ಪತ್ರೆಯ ವೈದ್ಯರಿಗೆ ವಿಶೇಷ ಕಾಳಜಿಯನ್ನು ವಹಿಸಿ ಚಿಕಿತ್ಸೆಯನ್ನು ನೀಡಬೇಕೆಂದು ಆದೇಶಿಸಿದರು ಹಾಗೂ ಹಲವು ಗಾಯಾಳುಗಳು ಬೇರೆರಾಜ್ಯದವರುಇದ್ದುಅವರ ಪಾಲಕರು ಬರುವವರೆಗೆಅವರಜವಾಬ್ದಾರಿಯನ್ನು ನಾವು ಹಾಗೂ ಜಿಲ್ಲಾಆಸ್ಪತ್ರೆಯವರು ವಹಿಸಿಕೊಳ್ಳುವುದಾಗಿ ಹೇಳಿದರು.ಸದರಿ ಗಾಯಾಳುಗಳ ಸಾಮಾನುಗಳನ್ನು ಕಿತ್ತೂರುಪೋಲಿಸ ಠಾಣೆಯ ಸುಪದರ್ಿಗೆತಲುಪಿಸಲು ಸೂಚಿಸಿದರು.