ಲೋಕದರ್ಶನ ವರದಿ
ಹುಬ್ಬಳ್ಳಿ 02: ಸ್ವಾತಂತ್ರ್ಯಕ್ಕಾಗಿ ಬ್ರಿಟೀಶರ ವಿರುದ್ಧ ಹೋರಾಡಿದ ಪ್ರಪ್ರಥಮ ಮಹಿಳೆ ವೀರರಾಣಿ ಕಿತ್ತೂರ ಚನ್ನಮ್ಮಾಜಿಯ ವೀರ ಪುಣ್ಯಸ್ಮರಣೆಯ ನಿಮಿತ್ತ ಹುಬ್ಬಳ್ಳಿಯ ಮಧ್ಯಭಾಗದಲ್ಲಿರುವ ರಾಣಿ ಚನ್ನಮ್ಮಾ ಪ್ರತಿಮೆಗೆ ಬಸವ ಪರಿಸರ ಸಂರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ವಾಕರಸಾ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಅವರ ನೇತೃತ್ವದಲ್ಲಿ ಚನ್ನಮ್ಮಾಜಿಯ ಪ್ರತಿಮೆಗೆ ಪೂಜೆ, ಮಾಲಾರ್ಪಣೆ ಮಾಡಿ ಗೌರವ ಸೂಚಿಸಲಾಯಿತು. ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದಶರ್ಿ, ಕನರ್ಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕನರ್ಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾಯರ್ಾಧ್ಯಕ್ಷ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ, ಕನರ್ಾಟಕ ಜ್ಞಾನ ವಿಜ್ಞಾನ ಸಮಿತಿ, ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ ಎಸ್. ಎಂ. ಸಾತ್ಮಾರ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಪ್ರೊ ಎಸ್. ವಿ.ಪಟ್ಟಣಶೆಟ್ಟಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಪ್ರೊ ಕೆ.ಎ.ದೊಡ್ಡಮನಿ, ಲಿಂಗಾಯತ ಸಮಾಜದ ಯುವ ಮುಖಂಡರಾದ ದೇವರಾಜ ದಾಡಿಭಾವಿ, ಶಿವಕುಮಾರ ಬಳಿಗಾರ, ಜಯದೇವ ಹಿರೇಮಠ, ಡಾ. ಎಂ.ಎಂ.ನುಚ್ಚಿ, ಡಾ.ಬಸವಕುಮಾರ ತಲವಾಯಿ, ಬಸವರಾಜ ಸಗರದ, ಜೈನ್ ಸಮಾಜದ, ಅಗ್ರಸೇನಾ ಬ್ಯಾಂಕ ಅಧ್ಯಕ್ಷ ಅಮಿತ ಮಹಾಜನ್, ಆನಂದ ಘಟಪನದಿ, ಕುಮಾರಗೌಡ ಪಾಟೀಲ, ವಾಲ್ಮಿಕಿ ಸಮಾಜದ ಡಾ. ತ್ಯಾಗರಾಜ, ಪ್ರಭುಲಿಂಗ ನಾಟೇಕರ, ಚನ್ನಬಸಪ್ಪ ಧಾರವಾಡಶೆಟ್ಟರ, ಚಿಂತಾಮನಿ ಸಿಂದಗಿ, ಬಸವರಾಜ ಹುಲ್ಲೋಳ್ಳಿ, ಮಲ್ಲೀಕ್ ಸಿಖಂದರ್, ಹಸೆನ್, ಶೇಖ್, ನಾಗಾಜರ್ುನ ಖತ್ರಿಮಲ್ಲ, ಸುನೀಲ ಕುಡರ್ೆಕರ, ಮಂಜುನಾಥ ಹಡಪದ, ಮಹಾಂತೇಶ ರಾ. ಇದ್ಲಿ, ಶಿದ್ದೇಶ ಕಬಾಡದ, ಮಲ್ಲಿಕಾಜರ್ುನ ದೇವರಮಠ, ಸುನಿಲ್ ಕೊಟೇಕರ ಮುಂತಾದವರು ಇದ್ದರು. ಅತಿಥಿಗಳು ಮಾತನಾಡಿ ವೀರರಾಣಿ ಕಿತ್ತೂರ ಚನ್ನಮ್ಮನ ಸಾಹಸ, ದೈರ್ಯ, ದಿಟ್ಟತನ, ಮುಂತಾದ ಗುಣಗಳನ್ನು ಮುಕ್ತ ಕಂಠದಿಂದ ಸ್ಮರಿಸಿದರು.