ವೀರಭದ್ರೇಶ್ವರ ಗುಗ್ಗಳ ಮಹೋತ್ಸವ

Veerabhadreshwara Googgala Mahotsav

ವೀರಭದ್ರೇಶ್ವರ ಗುಗ್ಗಳ ಮಹೋತ್ಸವ    

ಶಿಗ್ಗಾವಿ 12 : ಪಟ್ಟಣದ ವೀರಗಲ್ಲಿಯ ವೀರಭದ್ರೇಶ್ವರ ಗುಗ್ಗಳ ಮಹೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಶ್ರದ್ದಾ ಭಕ್ತಿಯಿಂದ ನೆರವೇರಿತು. ಬೆಳಗ್ಗೆ 8 ಗಂಟೆಯಿಂದ ಪ್ರಾರಂಭಗೊಂಡ ವೀರಭದ್ರೇಶ್ವರ ಗುಗ್ಗಳ ಮಹೋತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಬೀದಿಗಳಲ್ಲಿ ಗುಗ್ಗಳ ಆಗಮಿಸುವ ಮುನ್ನ ಮನೆಗಳ ಎದುರು ನೀರು ಸಿಂಪಡಣೆ ಮಾಡಿ ರಂಗೋಲಿ ಹಾಕಿ ಭಕ್ತಿಯಿಂದ ಗುಗ್ಗಳವನ್ನು ಸ್ವಾಗತಿಸಿದರು. ಪುರವಂತರು ವೀರಭದ್ರೇಶ್ವರ ಸ್ವಾಮಿಯ ನಾಮ ಸ್ಮರಣೆಯನ್ನು ಒಡಪಿನ ರೂಪದಲ್ಲಿ ಭಕ್ತರಿಗೆ ತಿಳಿಸುತ್ತಾ ಸಾಗಿದರು. ಭಕ್ತರು ಪುರವಂತರು ಹೇಳುವ ಒಡವನ್ನು ಭಕ್ತಿಯಿಂದ ಆಲಿಸಿದರು. ನಂತರ ವೀರಭದ್ರೇಶ್ವರ ದೇವಸ್ಥಾನಕ್ಕೆ ಬಂದು ಗುಗ್ಗಳ ಕಾರ್ಯಕ್ರಮ ಸಂಪನ್ನಗೊಂಡಿತು.  

  ಗುಗ್ಗಳ ಕಾರ್ಯಕ್ರಮದಲ್ಲಿ ದೇವರ ಪಾಲಿಕೆಯನ್ನು ಹೊತ್ತು ದೇವರ ಕೃಫೆಗೆ ಪಾತ್ರರಾದ ಭಾಜಪ ಯುವ ಮುಖಂಡ ಭರತ ಬೊಮ್ಮಾಯಿ, ಗಡಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ವೀರಭದ್ರೇಶ್ವರ ದೇವಸ್ಥಾನ ಸೇವಾ ಸಮಿತಿ ಸದಸ್ಯರಾದ ರಮೇಶ ವನಹಳ್ಳಿ, ಮಲ್ಲಯ್ಯ ಹಿರೇಮಠ, ಶಿವಪ್ಪ ಗಂಜೀಗಟ್ಟಿ, ಶಂಕರಗೌಡ್ರ ಪಾಟೀಲ, ಭಾಪನಗೌಡ್ರ, ಮಾಲತೇಶ ಯಲಿಗಾರ, ಅಣ್ಣಪ್ಪ ನವಲಗುಂದ, ಮುತ್ತು ಯಲಿಗಾರ, ಈರಣ್ಣ ಯಲಿಗಾರ, ಮಾಲತೇಶ ಹಾವಣಗಿ, ನಿಂಗಪ್ಪ ದುಂಡಶಿ, ಸಂಗಪ್ಪ ಹರವಿ, ಪ್ರಕಾಶ ಹರವಿ, ಸೋಮಣ್ಣ ನವಲಗುಂದ,ಈರ​‍್ಪ ಸಾವಳಗಿ,ಚನ್ನಪ್ಪ ಯಲಿಗಾರ, ಮಂಜುನಾಥ ಮಣ್ಣಣ್ಣವರ, ವಿಶ್ವನಾಥ ಹರವಿ, ಆನಂದ ಸುಭೇದಾರ, ಮಂಜುನಾಥ ಬ್ಯಾಹಟ್ಟಿ, ಸಿದ್ದು ಅಕ್ಕಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸದ್ಬಕ್ತರು ಉಪಸ್ಥಿತರಿದ್ದರು. ನಂತರ ಪ್ರಸಾದ ಸೇವೆ ಜರುಗಿತು.