ಪುರಾಣ ಪಠಿಸಿದ ವೇದ ಪಂಡಿತ ಪ್ರಭಯ್ಯಶಾಸ್ತ್ರೀ
ಶಿಗ್ಗಾವಿ 03 : ಶ್ರೀ ಮೈಲಾರಲಿಂಗೇಶ್ವರ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಧರ್ಮಸಭೆಯ 4 ನೇ ದಿನದ ಕಾರ್ಯಕ್ರಮದಲ್ಲಿ ಡಾ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯನಾದ ವೇದ ಪಂಡಿತ ಪ್ರಭಯ್ಯಶಾಸ್ತ್ರೀ ಹಿರೇಮಠ ಪುರಾಣವನ್ನು ಪ್ರವಚನ ಮಾಡಿದರು. ಸಂಗೀತ ಸೇವೆಯನ್ನು ಗಾನಕೋಗಿಲೆ ಶಿವಾನಂದ ಮಂದೇವಾಲ, ತಬಲಾ ಚತುರ ಬಸವರಾಜ ಚಳಗೇರಿ ನಿರ್ವಹಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರು ಹಾಗೂ ಸದ್ಬಕ್ತರು ಉಪಸ್ಥಿತರಿದ್ದರು.