ವೇದಾಂತ ಕೇಸರಿ ಮಲ್ಲಿಕಾಜರ್ುನ ಮಹಾಸ್ವಾಮಿಜಿಗಳ ಗುರುಸ್ಮರಣೋತ್ಸವ

ಕಾಗವಾಡ 02: ವೇದಾಂತ ಕೇಸರಿ ಮಲ್ಲಿಕಾಜರ್ುನ ಮಹಾಸ್ವಾಮಿಜಿ, ನಡೆದಾಡುವ ದೇವರ ಸಿದ್ಧೇಶ್ವರ ಸ್ವಾಮಿಜಿ ಇವರು ಸಮಾಜದ ಅಭಿವೃದ್ಧಿಗಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತುನೀಡಿ ಕಾಗವಾಡದಲ್ಲಿ ಪ್ರಾಥಮಿಕದಿಂದ ಪದವಿ ಪಡೆಯುವರೆಗೆ ಶಿಕ್ಷಣದ ವ್ಯವಸ್ಥೆ ಮಾಡಲು ಅಪಾರ ಕೊಡುಗೆ ನೀಡಿದ್ದಾರೆ. ನಾನು ಸ್ವಾಮಿಜಿಯವರ ಸಂಸ್ಥೆ ಮತ್ತು ಆಶ್ರಮದ ವ್ಯವಸ್ಥೆಗಾಗಿ ಸದಾಸಿದ್ಧನಿದ್ದೇನೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಕಾಗವಾಡದಲ್ಲಿ ಹೇಳಿದರು.

ಮಂಗಳವಾರ ದಿ. 1ರಂದು ಕಾಗವಾಡದ ಗುರುದೇವಾಶ್ರಮದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಜಾನಪದ ಕಲೋತ್ಸವ ಉದ್ಘಾಟನೆಗಾಗಿ ವಾದ್ಯ ನುರಿಸಿ ಶಾಸಕ ಶ್ರೀಮಂತ ಪಾಟೀಲ ಚಾಲನೆ ನೀಡಿದರು.

ಸಿದ್ಧೇಶ್ವರ ಮಹಾಸ್ವಾಮಿಗಳ ಆಶೀವರ್ಾದ ಮೇರೆಗೆ ವೇದಾಂತ ಕೇಸರಿ ಮಲ್ಲಿಕಾಜರ್ುನ ಮಹಾಸ್ವಾಮಿಜಿಗಳ ಗುರುಸ್ಮರಣೋತ್ಸವ ಮಂಗಳವಾರ ದಿ. 25ರಿಂದ ಮಂಗಳವಾರ ದಿ. 1ರ ವರೆಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಗುರುದೇವಾಶ್ರಮದ ಯತೀಶ್ವರಾನಂದ ಸ್ವಾಮಿಜಿ ಇವರ ನೇತೃತ್ವದಲ್ಲಿ ತಿಕೋಟಾದ ಚನ್ನಮಲ್ಲಿಕಾಜರ್ುನ ಸ್ವಾಮಿಜಿ, ಯಕ್ಸಂಬಾ ಮಠದ ಪ್ರಾಣಲಿಂಗೇಶ್ವರ ಸ್ವಾಮಿಜಿ, ಚಟಾಕ್ಷರಿ ಸ್ವಾಮಿಜಿ ಇವರ ಸಾನಿಧ್ಯದಲ್ಲಿ ಬೆಳಿಗ್ಗೆ ದಿ. 06 ರಿಂದ 07ರ ವರೆಗೆ "ಓಂ ನಮಃ ಶಿವಾಯ" ಜಪಯಜ್ಞ ಜರುಗಿತು.

ವಿಜಯಪುರ ಮಠದ ಈಷ್ಟಲಿಂಗ ಸ್ವಾಮಿಜಿ ಇವರಿಂದ ಪ್ರವಚನ ಕಾರ್ಯಕ್ರಮ ನೆರವೇರಿತು. ಸ್ವಾಮಿಜಿಯವರು ವೇದಾಂತ ಕೇಸರಿ ಮಲ್ಲಿಕಾಜರ್ುನ ಸ್ವಾಮಿಜಿಗಳು ಕಾಗವಾಡದಲ್ಲಿ ನೆಟ್ಟಿರುವ ಶಿಕ್ಷಣದ ಮರ ಆಲದ ಮರದಂತೆ ವಿಶಾಲವಾಗಿ ಬೆಳೆದು ನಿಂತಿದೆ. ಈ ನೆರಳಿನ ಕೆಳಗೆ ಸಾವಿರಾರು ವಿದ್ಯಾಥರ್ಿಗಳು ಓದಿ ತಮ್ಮ ಜೀವನ ಸಾರ್ಥಕಗೊಳಿಸಿಕೊಂಡಿದ್ದಾರೆ. ಸ್ವಾಮಿಜಿಗಳ ಆತ್ಮಕ್ಕೆ ಇದು ಶಾಂತಿ ನೀಡುತ್ತದೆ. ಅವರ ಸ್ಮರಣಾರ್ಥವಾಗಿ 8 ದಿನ ಕಾರ್ಯಕ್ರಮ ನೆರವೇರುತ್ತಿದೆ ಎಂದು ಹೇಳಿದರು.

ಭವ್ಯ ಮೆರವಣಿಗೆ:

ಬೆಳಿಗ್ಗೆ ಕಾಗವಾಡದ ಮಹಾದೇವ ಮಂದಿರದಲ್ಲಿ ಮಲ್ಲಿಕಾಜರ್ುನ ಸ್ವಾಮಿಜಿಯವರ ಪ್ರತಿಮೆಗೆ ಸ್ವಾಮಿಗಳಿಂದ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಮುಖ್ಯ ಮಾರ್ಗಗಳಿಂದ ಗುರುದೇವಾಶ್ರಮದ ವರೆಗೆ ಭವ್ಯ ಮೆರವಣಿಗೆ ನೆರವೇರಿತು. 

ಶಿವಾನಂದ ಮಹಾವಿದ್ಯಾಲಯದ ಪದವಿ, ಪದವಿಪೂರ್ವ ವಿಭಾಗದ ವಿದ್ಯಾಥರ್ಿಗಳು, ಪ್ರಾಧ್ಯಾಪಕರು, ವೇದಾಂತ ಕೇಸರಿ, ಮಲ್ಲಿಕಾಜರ್ುನ ಯುವಕರ ಸಂಘ, ಕೇದಾರ ಗ್ರೂಪ್, ಅವರೊಂದಿಗೆ ಅಕ್ಕನ ಬಳಗ ಮಹಿಳಾ ಸಂಘದ ಸುಮಂಗಲೆಯರು ಕಳಸದೊಂದಿಗೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ರಾಜ್ಯ ಮಟ್ಟದ ಜಾನಪದ ಕಲಾಮೇಳ:

ಮಲ್ಲಿಕಾಜರ್ುನ ಸ್ವಾಮಿಜಿಗಳ ಸ್ಮರಣೋತ್ಸವ ನಿಮಿತ್ಯ ಜಾನಪದ ಕಲೆಯಲ್ಲಿ ಛಾಪ ಮೂಡಿಸಿದ ಚಾಳಕೆ ಶರಣರು ಇವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಜಾನಪದ ಕಲಾ ತಂಡಗಳು ಕಾರ್ಯಕ್ರಮ ನೆರವೇರಿತು. ಇದರಲ್ಲಿ ಜಾನಪದ ಕಲೆಯಲ್ಲಿ ಶ್ರೇಷ್ಠ ಅನಿಸಿಕೊಂಡ ಅನೇಕ ಕಲಾವಿಧರು ತಮ್ಮ ಕಲೆ ಪ್ರದಶರ್ಿಸಿದರು. ಇದರಲ್ಲಿ ಕರಡಿ ಮಜಲು, ಶಹನಾಯಿ, ಗಿಗಿಪದ, ಚೌಡ್ಕಿಪದ, ಸೇರಿದಂತೆ ಅನೇಕ ಕಲೆಗಳು ಮಧ್ಯಾಹ್ನ 12 ರಿಂದ ಸಂಜೆ 6ರ ವರೆಗೆ ಪ್ರದಶರ್ಿಸಿದರು. ಇದನ್ನು ಅನೇಕ ಭಕ್ತರು ಆಲಿಸಿದರು.

ವಿಜ್ಞಾನ ಪ್ರದರ್ಶನ:

ಶಿವಾನಂದ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ವಿಭಾಗದ ವಿದ್ಯಾಥರ್ಿಗಳು ವಿಜ್ಞಾನ ಪ್ರದರ್ಶನ ಮಾಡಿದರು. ಇದರಲ್ಲಿ ಅನೇಕ ಸ್ವಯಂ ಚಲಿತ ಯಂತ್ರಗಳು, ನೀರು ಶುದ್ಧಿಕರಣ, ಸೌರ ಉಜರ್ೆ, ಮುಂತಾದ ವಸ್ತುಗಳು ಪ್ರದಶರ್ಿಸಿದರು. ಇದರೊಂದಿಗೆ ಪುರಾತನ ಕಾಲದ ಹಳೆಯ ಪಾತ್ರೆಗಳು, ವಸ್ತುಗಳು ಪ್ರದಶರ್ಿಸಿದರು.

ಮಧ್ಯಾಹ್ನ ಸಾವಿರಾರು ಸದ್ಭಕ್ತರು ಮಹಾಪ್ರಸಾದ ಸ್ವೀಕರಿಸಿದರು. ಶಿವಾನಂದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ.ಜಿ.ಕರಲಟ್ಟಿ, ಡಾ. ಬಿ.ಎ.ಪಾಟೀಲ, ಡಾ. ಜೆ.ಕೆ.ಪಾಟೀಲ, ಎ.ಎಸ್.ಪಾಟೀಲ, ನಿವೃತ್ತ ಪ್ರಾಚಾರ್ಯ ಬಿ.ಎ.ಪಾಟೀಲ, ಎಸ್.ಎ.ಕಕರ್ಿ, ವೇದಾಂತ ಕೇಸರಿ ಯುವಕ ಸಂಘ, ಕೇದಾರ ಯುವಕರ ಸಂಘದ ಕಾರ್ಯಕರ್ತರು ಕಾರ್ಯಕ್ರಮ ಯಶಸ್ವಿಗೊಳಿಸಿದರು.