ಬೈಲಹೊಂಗಲ: ವೇದಮೂರ್ತಿ ಚಿಕ್ಕಮಠಗೆ ಜ್ಯೋತಿಷ್ಯ ರತ್ನ ಪ್ರಶಸ್ತಿ ಪ್ರಧಾನ

ಲೋಕದರ್ಶನ ವರದಿ

ಬೈಲಹೊಂಗಲ 02:  ತಾಲೂಕಿನ ಆನಿಗೋಳ ಗ್ರಾಮದ ವೇದಮೂರ್ತಿ ಬಸಲಿಂಗಯ್ಯ ಗುರುಸಿದ್ದಯ್ಯ ಚಿಕ್ಕಮಠ ಅವರ ಜ್ಯೋತಿಷ್ಯ ಶಾಸ್ತ್ರ ಮನಗಂಡು ಬೆಂಗಳೂರಿನ (ಬೆಳಗಾವಿ) ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ಸಂಸ್ಥೆ ಕೊಡ ಮಾಡುವ ಜ್ಯೋತಿಷ್ಯ ರತ್ನ ರಾಜ್ಯ ಪ್ರಶಸ್ತಿಗೆ ನೀಡಿ ಗೌರವಿಸಿತು. ಬೆಂಗಳೂರಿನ ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ರಾಜ್ಯೋತ್ಸವ ಸಮಾರಂಭ-2019 ಅಂಗವಾಗಿ ಉತ್ತರ ಕನರ್ಾಟಕದ ಕಲೆ, ಸಂಸ್ಕೃತಿ ಅಳಿವು-ಉಳಿವು ವಿಚಾರ ಸಂಕಿರಣ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಅಥಣಿಯ ಮೋಟಗಿಮಠದ ಪೂಜ್ಯ ಪ್ರಭು ಚನ್ನಬಸವ ಸ್ವಾಮೀಜಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು.

     ಈ ಸಂದರ್ಭದಲ್ಲಿ ಸಂಸ್ಥೆಯ ಬೆಳಗಾವಿ ವಿಭಾಗದ ಕಾಯರ್ಾಧ್ಯಕ್ಷ  ರುದ್ರಣ್ಣ ಚಂದರಗಿ, ಅಧ್ಯಕ್ಷ ಶಶಿಧರ ಘೀವಾರಿ, ವಿದಾನ್ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಹೈಕೋಟರ್ಿನ ವಿಶ್ರಾಂತ್ ನ್ಯಾಯಮೂತರ್ಿ ಅರಳಿ ನಾಗರಾಜ, ವೇದಮೂತರ್ಿ ಮಹಾಂತೇಶ ಶಾಸ್ತ್ರಿ ಮುರಗೈನವರ, ಬೆಳಗಾವಿ ಉತ್ತರ ಭಾಗದ ಶಾಸಕ ಅನಿಲ ಬೆನಕೆ ಹಾಗೂ ಗಣ್ಯ ಮಾನ್ಯರು ಉಪಸ್ಥಿತರಿದ್ದರು.