ಕೋಲ್ಕತಾ, 22 ಮುಂದಿನ ತಿಂಗಳ ಆಸ್ಟ್ರೇಲಿಯಾ ಪ್ರವಾಸಕ್ಕೆ 15 ಸದಸ್ಯೆಯರ ಭಾರತ ಎ ಮಹಿಳಾ ತಂಡವನ್ನು ಅಖಿಲ ಭಾರತೀಯ ಮಹಿಳಾ ಆಯ್ಕೆ ಸಮಿತಿ ಪ್ರಕಟಿಸಿದ್ದು, ವೇದಾ ಕೃಷ್ಣಮೂತರ್ಿ ಅವರಿಗೆ ತಂಡದ ನಾಯಕತ್ವ ನೀಡಲಾಗಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಆತಿಥೇಯರ ವಿರುದ್ಧ ಭಾರತ ವನಿತೆಯರು ಮೂರು ಏಕದಿನ ಪಂದ್ಯಗಳು ಹಾಗೂ ಹಲವು ಟಿ-20 ಪಂದ್ಯಗಳಲ್ಲಿ ಸೆಣಸಲಿದ್ದಾರೆ. ಆಫ್ ಸ್ಪಿನ್ನರ್ ಅನುಜಾ ಪಾಟೀಲ್ ಉಪನಾಯಕಿ ಜವಾಬ್ದಾರಿಯ ಹೊಣೆ ನೀಡಲಾಗಿದೆ. ಪ್ರವಾಸಕ್ಕೆ ಇಬ್ಬರು ವಿಕೆಟ್ ಕೀಪರ್ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸುಷ್ಮಾ ವಮರ್ಾ ಹಾಗೂ ನುಝತ್ ಪವರ್ಿನ್ ಅವರು ಪಂದ್ಯದಲ್ಲಿ ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಭಾರತ ಎ ಮಹಿಳಾ ತಂಡ: ವೇದಾ ಕೃಷ್ಣಮೂತರ್ಿ (ನಾಯಕಿ), ಅನುಜಾ ಪಾಟೀಲ್ (ಉಪ ನಾಯಕಿ), ಪ್ರಿಯಾ ಪೂನಿಯಾ, ಶಫಾಲಿ ವಮರ್ಾ, ಹಲರ್ಿನ್ ಡಿಯೊಲ್, ದೇವಿಕಾ ವೈದ್ಯ, ಡಿ.ಹೇಮಲತಾ, ತನುಶ್ರೀ ಸಕರ್ಾರ್, ಸುಷ್ಮಾ ವಮರ್ಾ(ವಿ.ಕೀ), ನುಝತ್ ಪವರ್ಿನ್ (ವಿ.ಕೀ), ಮಾನಸಿ ಜೋಷಿ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಮನಾಲಿ ದಾಕ್ಷಿಣಿ, ಟಿ.ಪಿ ಕನ್ವರ್.