ಕಾರ್ತಿಕ ದೀಪೋತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

Various religious programs on Karthika Dipotsava

ಕಾರ್ತಿಕ ದೀಪೋತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು 

ಬ್ಯಾಡಗಿ  21: ಪಟ್ಟಣದಲ್ಲಿ ನಾಗೇಂದ್ರ ದೇವಸ್ಥಾನ  ಕಾರ್ತಿಕೋತ್ಸವ  ಸಡಗರ, ಸಂಭ್ರಮದೊಂದಿಗೆ ನಡೆಯಿತು. ಬೆಳಿಗ್ಗೆ ನಾಗೇಂದ್ರ ಸ್ವಾಮಿಗೆ ರುದ್ರಾಭಿಷೇಕ, ವಿಶೇಷ ಪೂಜೆ, ಅರ್ಚನೆ, ಅಲಂಕಾರ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಾಗೇಂದ್ರ ಸ್ವಾಮಿ ದೇವಸ್ಥಾನ ಸಮಿತಿ ಸದಸ್ಯರಿಗೆ 50 ಟೀ ಶರ್ಟ್‌ ಕೊಡುಗೆಯಾಗಿ ನೀಡಿದ ಮೆಣಸಿನ ಕಾಯಿ ಉದ್ಯಮಿ ಸುರೇಶ ಮಾಸಣಗಿ ಅವರನ್ನು ದೇವಸ್ಥಾನ ಸಮಿತಿಯು ಸನ್ಮಾನಿಸಿ ಗೌರವಿಸಲಾಯಿತು.ರಾತ್ರಿ ಸಹಸ್ರಾರು ಭಕ್ತರ ಮಧ್ಯೆ ಕಾರ್ತಿಕ ದೀಪೋತ್ಸವದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ದೀಪಗಳನ್ನು ಬೆಳಗಿಸಿ, ಧನ್ಯತಾಭಾವ ಮೆರೆದರು. ಈ ಸಂದರ್ಭದಲ್ಲಿ ರಮೇಶ ಕೋಟಿ, ಉಮೇಶ್, ಸುರೇಶ್ ದಾವಣಗೇರಿ, ಬೀರ​‍್ಪ ಉಪನಾಳ, ಚಂದ್ರು ಮೂಲಿಮನಿ, ಪರಮೇಶಪ್ಪ ಬಂಗಾರ ಗುಂಡಿ ಸೇರಿದಂತೆ ಇತರರಿದ್ದರು.