ಕಾಳಿಕಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು
ಮಹಾಲಿಂಗಪುರ 30: ಕಾಳಿಕಾದೇವಿ ತೃತೀಯ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಫೆಬ್ರವರಿ 4 ರಂದು ಮಂಗಳವಾರ ದೇವಸ್ಥಾನದಲ್ಲಿ ಪ್ರಾತಃಕಾಲ ದೇವಿಗೆ ಅಭಿಷೇಕ ನಡೆಯಲಿದೆ ಎಂದು ವಿಶ್ವಕರ್ಮ ಸಮಾಜ ತಿಳಿಸಿದೆ.
ನಂತರ ಮುಂಜಾನೆ 7ಗಂಟೆಗೆ ಕೆ.ಇ.ಬಿ. ಗಣಪತಿ ದೇವಸ್ಥಾನದಿಂದ ಜವಳಿ ಬಜಾರ ಮಾರ್ಗವಾಗಿ ಕುಂಭ ಸಹಿತ ಆರತಿ ಮೇಳ, ಪುರವಂತರ ಸೇವೆ, ಸಕಲ ಮಂಗಲವಾದ್ಯ, ಮೇಳಗಳೊಂದಿಗೆ ಕಾಳಿಕಾ ದೇವಸ್ಥಾನ ವರೆಗೆ ಶ್ರೀದೇವಿ ಭಾವಚಿತ್ರ ಮೆರವಣಿಗೆ ನಡೆಯುವುದು. ತರುವಾಯ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಅಲ್ಲದೆ ಸೇರಿದ ಸದ್ಭಕ್ತರಿಗೆ ಮಹಾಪ್ರಸಾದ ಜರುಗುವುದು.
ಫೆಬ್ರವರಿ 5 ರಂದು ಬುಧವಾರ ಪ್ರಾತಃಕಾಲ ಅಭಿಷೇಕ, ಹೋಮ, ಹವನ, ಉಚಿತ ಸಾಮೂಹಿಕ ಉಪನಯನ ಮತ್ತು ದೇವಿಯ ಪಲ್ಲಕ್ಕಿ ಸೇವೆ ಕಾರ್ಯಕ್ರಮ ನಡೆಯುವುದು.
ಮನಿಪ್ರ ಜಗದ್ಗುರು ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ, ವೀರೇಂದ್ರ ಮಹಾಸ್ವಾಮಿಗಳು, ನವಲಗುಂದ ಅಜಾತ ನಾಗಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನೂತನ ಸಭಾ ಮಂಟಪ ಲೋಕಾರೆ್ಣಗೊಳ್ಳಲಿದೆ. ನಂತರ ದಾನಿಗಳಿಗೆ ಸನ್ಮಾನ. ಧಾರ್ಮಿಕ ಸಭೆ, ಆಶೀರ್ವಚನ ಕಾರ್ಯಕ್ರಮ ನಂತರ ಮಹಾಪ್ರಸಾದ ಜರುಗುವುದು.