ಮಹಾಶಿವಯೋಗಿಗಳವರ 16 ಪುಣ್ಯ ಸ್ಮರಣೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮ
ಹಾವೇರಿ: ಇಲ್ಲಿನ ಹುಕ್ಕೇರಿಮಠದಲ್ಲಿ 2025ರ ಜನವರಿ 5ರಿಂದ 10 ರವರೆಗೆ ರಾಜಯೋಗಿ ಮ.ನಿ.ಪ್ರ.ಶಿವಬಸವ ಮಹಾಶಿವಯೋಗಿಗಳವರ 79ನೇ ಹಾಗೂ ಭಕ್ತಾನುರಾಗಿ ಮ.ನಿ.ಪ್ರ. ಶಿವಲಿಂಗ ಮಹಾಶಿವಯೋಗಿಗಳವರ 16 ಪುಣ್ಯ ಸ್ಮರಣೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹುಕ್ಕೇರಿಮಠದ ಮಠಾಧ್ಯಕ್ಷರಾದ ಮ.ನಿ.ಪ್ರ ಸದಾಶಿವ ಮಹಾಸ್ವಾಮಿಗಳು ಹೇಳಿದರು. ನಗರದ ಹುಕ್ಕೇರಿಮಠದಲ್ಲಿ ಜಾತ್ರಾ ಮಹೋತ್ಸವದ ಕರಪತ್ರಗಳನ್ನು ಬಿಡುಗಡೆಗೊಳಿಸಿ ಶ್ರೀಗಳು ಮಾತನಾಡಿದರು.ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಜ.5ರ ಬೆಳಿಗ್ಗೆ 8.30ಕ್ಕೆ ಷಟಸ್ಥಲ ಧ್ವಜಾರೋಹಣ, ಸಂಜೆ 6.30ಕ್ಕೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಜ.6ರ ಸೋಮವಾರ ಬೆಳಗ್ಗೆ 11 ಗಂಟೆಗೆ ಎಪಿಎಂಸಿ ಜಾನುವಾರು ಮಾರುಕಟ್ಟೆಯಲ್ಲಿ ಶಿವಬಸವ ದನಗಳ ಜಾತ್ರೆ ಉದ್ಘಾಟನೆ ಜರಗಲಿದೆ. ಸಂಜೆ 6.30ಕ್ಕೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು. ಜ.7ರ ರಿಂದ ಜ.9ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಜ.10ರಂದು ಲಿಂಗೈಕ್ಯ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಸ್ವಾಮೀಜಿಗಳ ಗದ್ದುಗೆ ಮಹಾ ಪೂಜೆ, ಬಿಲ್ವಾರ್ಚನೆ,ಮಧ್ಯಾಹ್ನ 12ಗಂಟೆಗೆ ಮಹಾಗಣಾರಾಧನೆ ಸಂಜೆ 4ಕ್ಕೆ ಭಾವಚಿತ್ರದ ಮೆರವಣಿಗೆ ಜರುಗಲಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಜಿಲ್ಲೆಯ ರಾಜ್ಯದ ಭಕ್ತಾಧಿಗಳು ಆಗಮಿಸುವಂತಾಗಲಿ.ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮದ ಯಶಸ್ವಿಗೆ ಮುಂದಾಗೋಣ ಎಂದು ಶ್ರೀಗಳು ಕಾರ್ಯಕ್ರಮದ ರೋಪರೇಷಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿಉತ್ಸವ ಸಮಿತಿಯ ಅಧ್ಯಕ್ಷ ಅಶೋಕ ಮಾಗನೂರ, ಉಪಾಧ್ಯಕ್ಷರಾದ ಮಾಂತಣ್ಣ ಸುರಳ್ಳಿಹಳ್ಳಿ, ಎಸ್ ಎಸ್ ಮುಷ್ಠಿ, ಅಮೃತಮ್ಮ ಶೀಲವಂತರ, ಕಾರ್ಯದರ್ಶಿ ತಮ್ಮಣ್ಣ ಮುದ್ದಿ ಸೇರಿದಂತೆ ಶ್ರೀಮಠದ ಪದಾಧಿಕಾರಿಗಳು ಇದ್ದರು.