ವಿವಿಧ ವಿಶೇಷ ದಿನಾಚರಣೆಯ ಪ್ರಶಸ್ತಿ ಪ್ರಧಾನ

Various Special Day Award Pradhan

ವಿವಿಧ ವಿಶೇಷ ದಿನಾಚರಣೆಯ ಪ್ರಶಸ್ತಿ ಪ್ರಧಾನ   

ಗದಗ  04 :  ಸಮಸ್ತ ನಾಡಿನಾದ್ಯೇಂತ ಸರಕಾರ ಹಾಗೂ ವಿವಿಧ ಸಂಘ- ಸಂಸ್ಥೆಗಳು ತಮ್ಮ ಸಾಮಾಜಿಕ ಕಳಕಳಿಯ ದ್ಯೋತಕವಾಗಿ ನಾಗರಿಕ ಸಮಾಜದಲ್ಲಿ ವಿವಿಧ ಕ್ಷೇತ್ರಗಳಾದ ಸಾಮಾಜಿಕ, ಆರ್ಥಿಕ, ಸೈಕ್ಷಣಿಕ, ರಾಜಕೀಯ, ಮನೋರಂಜನೆ ನಾಟಕ, ಹವ್ಯಾಸಿ ಬರಹಗಾರ ಸಾಹಿತ್ಯ ಕಲೆ ಹಾಗೆಯೇ ಸರಕಾರಿ ಹುದ್ದೆಯಲ್ಲಿದ್ದುಕೊಂಡು  

ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಅಶಕ್ತರಿಗೆ ಸಹಾಯ ಮಾಡುವ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ, ಮತ್ತು ದೇಶದ ಸಂವಿಧಾನ ಮತ್ತು ಕಾನೂನು ಮತ್ತು ಸುವ್ಯೆವಸ್ಥೆ, ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಜ್ಞಾನಾರ್ಜನೆಗಾಗಿ ಕಲಿಕಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಗೈದ ಸಾಧಕರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಗುತ್ತದೆ. ಅದರಂತೆ ಸರಕಾರದಿಂದಲೂ ವಿವಿಧ ರಾಷ್ಟ್ರೀಯ, ಅಂತರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ವಿಶೇಷ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ. 

ಆದರೆ ದುರದೃಷ್ಟವಷಾತ್ ಸರಕಾರ ಹಾಗೂ ವಿವಿಧ ಸಂಘ- ಸಂಸ್ಥೆಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ಹಾಗೂ ಸಂಘ ಸಂಸ್ಥೆಗಳ ವಿಶೇಷ ಕಾರ್ಯಕ್ರಮಗಳಲ್ಲಿ ಸಾಧಕರನ್ನು ಆಯ್ಕೆ ಮಾಡಲು ಅವರನ್ನು ಗುರುತಿಸುವಲ್ಲಿ ವಿಶೇಷ ಮುತುವರ್ಜಿಯನ್ನು ವಹಿಸಬೇಕಾಗುತ್ತದೆ. ಇದರಲ್ಲಿ ಏನಾದರೂ ಅಚಾತುರ್ಯ ಉಂಟಾದರೆ ಸಂಭಂಧಪಟ್ಟ ಸರಕಾರಿ ಇಲಾಖೆ ಹಾಗೂ ಸಂಘ ಸಂಸ್ಥೆಗಳಿಗೆ ಕಪ್ಪುಚುಕ್ಕೆಯಾಗಿ ಪರಿಣಾಮಿಸುತ್ತದೆ. 

ಇದಕ್ಕೊಂದು ಜ್ವಲಂತ ನಿರ್ದೇಶನವೆಂಬಂತೆ ಇತ್ತೀಚಿಗಷ್ಟೇ ಪ್ರಸಕ್ತ ಸಾಲಿನ ಪೊಲೀಸ್ ದ್ವಜ ದಿನಾಚರಣೆಯನ್ನು ಅತೀ ವಿಜೃಂಭಣೆಯಿಂದ ಜಿಲ್ಲಾ ಮಟ್ಟದ ಪೊಲೀಸ್ ಇಲಾಖೆಯಿಂದಲೂ, ಹಲವಾರು ಸಂಘ ಸಂಸ್ಥೆಗಳು  ಅದರಂತೆ ಸರಕಾರದಿಂದಲೂ ರಾಜ್ಯ ಮಟ್ಟದಲ್ಲಿಯೂ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರನ್ನಾಗಿ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆಗೈದ ಪೊಲೀಸ್ ಅಧಿಕಾರಿಗಳನ್ನು ಗುರುತಿಸಿ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಇಂತಹದೊಂದು ಮಹತ್ ಕಾರ್ಯಕ್ರಮದಿಂದಾಗಿ ನೈಜವಾಗಿ ಉತ್ತಮ ಸೇವೆ ನೀಡಿದ ನೌಕರ ವೃಂದದವರಿಗೆ ಸಂದ ಅಭೂತಪೂರ್ವ ಕೊಡುಗೆಯಾಗಿರುತ್ತದೆ. 

ಆದರೆ ವಿಷಾದನೀಯ ಸಂಗತಿಯೆಂದರೆ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಬೆಂಗಳೂರು ನಗರದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕುಮಾರ್ ಅವರು ಆಯ್ಕೆಯಾಗಿದ್ದರು.ಆದರೆ ಗುತ್ತಿಗೆದಾರ ಚನ್ನೇಗೌಡ ಎನ್ನುವವರ ಪತ್ನಿ ಅನುಷಾ ಎಂಬುವವರಿಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕುಮಾರ್ ಅವರು ಕಿರುಕುಳ ನೀಡಿದ್ದಾರೆ. ಎನ್ನುವ ಆರೋಪ ಕೇಳಿಬಂದಿದೆ. ಸದರ ಪ್ರಕರಣಕ್ಕೆ ಸಂಭಂಧಿಸಿದಂತೆ ಲೋಕಾಯುಕ್ತ ಬಂಧನದ ಭೀತಿಯಿಂದ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆಯಬೇಕಿದ್ದ ಇನ್ಸ್ಪೆಕ್ಟರ್ ಪರಾರಿಯಾಗಿರುವದು. 

ಆದುದರಿಂದ ಸಮಸ್ತ ಸಂಘ ಸಂಸ್ಥೆಗಳು ಹಾಗೂ ಸರಕಾರಿ ಇಲಾಖೆಯಿಂದ ಜರುಗುವ ವೈವಿಧ್ಯಮಯ ಸನ್ಮಾನ ಸತ್ಕಾರ ಸಮಾರಂಭಗಳಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವಂತಾಗಲು ಸನ್ಮಾನಕ್ಕೆ ಭಾಜನರಾದ ಸಾಧಕರ  ಆಯ್ಕೆಯಲ್ಲಿ ಪೂರ್ವಾಪರ ಪರೀಶೀಲನೆ ಅಗತ್ಯವಾಗಿದೆ ಎಂದು ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಜನಾಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ.