ಲೋಕದರ್ಶನ ವರದಿ
ಕೊಪ್ಪಳ 29: ಬಿಜೆಪಿ ಪಕ್ಷದ ಹಿರಿಯ ನಾಯಕ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲುಗೆ ರಾಜ್ಯದ ನೂತನ ಬಿಎಸ್ವೈ ಸರ್ಕಾರದಲ್ಲಿ ಡಿಸಿಎಂ ಸ್ಥಾನ ಕೂಡಲೇ ನೀಡಬೇಕು ಎಂದು ಆಗ್ರಹಿಸಿ ಕೊಪ್ಪಳದ ಬಸವೇಶ್ವರ(ಗಂಜ್) ವೃತ್ತದಲ್ಲಿ ವಾಲ್ಮೀಕಿ ಸಮಾಜ ಪ್ರತಿಭಟನೆ ನಡೆಸಿತು.
ರಾಜ್ಯ ಸರ್ಕಾರ ದ ವಿರುದ್ಧ ರಾಜ್ಯದಾದ್ಯಂತ ಈಗಲೂ ಪ್ರತಿಭಟನೆಗಳು ಅಲ್ಲಿಲ್ಲಿ ನಡೆಯುತ್ತಲೇ ಇವೆ. ರಾಜ್ಯ ಸರ್ಕಾರ ದ ನಡೆಯ ವಿರುದ್ಧ ವಾಲ್ಮೀಕಿ ಸಮಾಜ ಬೀದಿ ಗಿಳಿದು ಹೋರಾಡತ್ತಲೇ ಇದೆ. ಇದಕ್ಕೆ ಹೊಸ ಸೇರ್ಪಡೆ ಕೊಪ್ಪಳ,ಕಳೆದ ವಿಧಾನಸಭಾ ಚುನಾವಣೆ ವೇಳೆ ವಾಲ್ಮೀಕಿ ಸಮಾಜದ ಬಿ.ಶ್ರೀರಾಮುಲು ಅವರಿಗೆ ಬಿಜೆಪಿ ಅಧಿಕಾರಕ್ಕೆ ಬಂದರೆ ಡಿಸಿಎಂ ಸ್ಥಾನ ನೀಡುವ ಭರವಸೆ ನೀಡಿದ್ದರು. ಈಗ ಅದು ಈಡೇರಿಸಬೇಕು.
ಕೊಪ್ಪಳದಲ್ಲಿ ರಸ್ತೆಗಿಳಿದಿರುವ ಅಖಿಲ ಭಾರತ ವಾಲ್ಮೀಕಿ ಸಮುದಾಯದ ಜನ ರಾಜ್ಯ ಸರ್ಕಾರ ಹಾಗೂ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ. ನಗರದಲ್ಲಿ ವಾಲ್ಮೀಕಿ ಹಾಗೂ ಶ್ರೀರಾಮುಲು ಪೋಟೋಗಳನ್ನು ಹಿಡಿದು ಮೆರವಣಿಗೆ ನಡೆಸಿರುವ ವಾಲ್ಮೀಕಿ ಸಮಾಜದವರು "ಕೊಟ್ಟ ಮಾತು ತಪ್ಪಿದ ಬಿಜೆಪಿ, ವಚನ ಭ್ರಷ್ಟ ಯಡಿಯೂರಪ್ಪನಿಗೆ ಧಿಕ್ಕಾರ" ಎಂದು ಕೂಗುತ್ತಾ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಪ್ರತಿಭಟನೆಯ ನೇತೃತ್ವವನ್ನು ವಾಲ್ಮೀಕಿ ಸಮಾಜದ ಮುಖಂಡರಾದ ಸುರೇಶ ಡೊಣ್ಣಿ, ಶರಣಪ್ಪ ನಾಯಕ, ಹಂಚ್ಯಾಳಪ್ಪ ಯಲಬುರ್ಗಾ , ರುಕ್ಮಣ್ಣ ಶ್ಯಾವಿ, ಮಲ್ಲಪ್ಪ ಬೇಲೇರಿ,ದೇವೇಂದ್ರಪ್ಪ ಗುನ್ನಳ್ಳಿ,ಶ್ರೀನಿವಾಸ ಪೂಜಾರ ಸ್ಭೆರಿದಂತೆ ವಾಲ್ಮೀಕಿ ಸಮಾಜದ ಅನೇಕರು ವಹಿಸಿದ್ದರು.