ಲೋಕದರ್ಶನ ವರದಿ
ಕೊಪ್ಪಳ 29: ವಾಲ್ಮೀಕಿ ನಾಯಕ ಸಮಾಜದ ಕೊಪ್ಪಳ ಜಿಲ್ಲಾ ಮುಖಂಡ ಹಾಗೂ ತಮ್ಮನ್ನು ತಾವು ಸಕ್ರೀಯವಾಗಿ ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಂಡು ಶ್ರಮಿಸುತ್ತಿರುವ ಭಾಗ್ಯನಗರದ ನಿವಾಸಿ ಸುರೇಶ್ ಡೊಣ್ಣಿಯವರು ಅಖಿಲ ಕರ್ನಾಟಕ ವಾಲ್ಮೀಕ ನಾಯಕ ಮಹಾಸಭಾ ರಾಜ್ಯ ಘಟಕಕ್ಕೆ ರಾಜ್ಯ ಸಂಘಟನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಸುರೇಶ್ ಡೊಣ್ಣಿ ಕಳದ ಹಲವಾರು ದಶಕಗಳಿಂದ ಸಮಾಜ ಸಂಘಟನೆ ಬೆಳಸುವಲ್ಲಿ ಶ್ರಮಿಸಿದ್ದಾರೆ. ಮತ್ತು ತಮ್ಮನ್ನು ತಾವು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡು ಸಮಾಜದ ಸಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಸಂಘಟನೆ ಬೆಳಸುವ ಕೆಲಸ ಮಾಡಿದ್ದಾರೆ. ಶೈಕ್ಷಣಿಕ ರಂಗದಲ್ಲಿ ಸಹ ಉತ್ತಮ ಸೇವೆ ಸಲ್ಲಿಸಿದ್ದಾರೆ ಇವರ ಅಪಾರ ಸೇವೆಯನ್ನು ಪರಿಗಣಿಸಿ ರಾಜ್ಯ ಘಟಕಕ್ಕೆ ನಿಯೋಜಿಸಿ ರಾಜ್ಯ ಸಂಘಟನ ಕಾರ್ಯದಶರ್ಿಯಾಗಿ ನೇಮಿಸಿ ರಾಜ್ಯ ಘಟಕದ ಪ್ರಕಟಣೆ ನೀಡಿದೆ ಎಂದು ಸಮಾಜ ತಾಲೂಕ ಘಟಕದ ಅಧ್ಯಕ್ಷ ಶರಣಪ್ಪ ಹೆಚ್.ನಾಯಕ ತಿಳಿಸಿದ್ದಾರೆ.
ಸುರೇಶ್ ಡೊಣ್ಣಿಯವರು ರಾಜ್ಯ ಘಟಕಕ್ಕೆ ನೇಮಕಗೊಂಡಿರುವುದಕ್ಕೆ ಕೊಪ್ಪಳದಲ್ಲಿ ಸಮಾಜದ ಸಂಘಟನೆಗಳ ಪ್ರಮುಖರು ಹರ್ಷ ವ್ಯಕ್ತಪಡಿಸಿದ್ದಾರೆ. ಶರಣಪ್ಪ ನಾಯಕ, ರಾಮಣ್ಣ ಚೌಡ್ಕಿ, ಹನುಮಂತಪ್ಪ ಗುದಗಿ,ಬಸವರಾಜ್ ವಿನಸ್ ವಿರುಪಾಕ್ಷಗೌಡ, ಬಸವರಾಜ್ ನಾಯಕ ಕುಷ್ಟಗಿ, ವೀರಭದ್ರಪ್ಪ ನಾಯಕ, ಹಂಚ್ಯಾಳಪ್ಪ ಮಾಸ್ತರ್ ಸಂಜೀವಪ್ಪ ಈಟಗಿ ಶರಣಪ್ಪ ಸೋಮಸಾಗರ್ ದೇವರಾಜ್ ನಾಯಕ ಜೂರಟಗಿ, ಮಲ್ಲಿಕಾರ್ಜುನ ಕಲ್ಲನವರ ದೇವಪ್ಪ ಕಟ್ಟಿಮನಿ ಅಳವಂಡಿ ಲಕ್ಷ್ಮಣ ಚೌಡ್ಕಿ ಶ್ರೀನಿವಾಸ ಪೂಜಾರ್ ಮಹೇಶ್ ತಳವಾರ, ಪರಶುರಾಮ್ ಭಾಗ್ಯನಗರ ಶಂಕರಪ್ಪ ಬಂಡಿ ಸತೀಶ್ ಜಾಲಗಾರ, ರಮೇಶ್ ರಾಟಿ ಮಾರುತಿ ಫಿಟ್ಟರ್ ರಮೇಶ ಕುಣಿಕೇರಿ ಫಕೀರಪ್ಪ ಹ್ಯಾಟಿ ಅನೇಕರು ಸುರೇಶ್ ಡೊಣ್ಣಿಯವರಿಗೆ ಅಭಿನಂದಿಸಿದ್ದಾರೆ.