ವಿಜಯಪುರ 31: ಅಖಂಡ
ಭಾರತ ನಿಮರ್ಾಣಕ್ಕಾಗಿ ದೇಶ ಪ್ರೇಮದೊಂದಿಗೆ ಭಾರತೀಯರಲ್ಲಿ
ಏಕತೆಯ ಪ್ರಜ್ಞೆ ಮಹತ್ವ ಮೂಡಿಸಿದ ಶ್ರೇಷ್ಠ ನೇತಾರ ಸದರ್ಾರ ವಲ್ಲಭಭಾಯಿ ಪಟೇಲರವರು ಎಂದು ಡಿವೈಎಸ್ಪಿ ಡಿ.ಅಶೋಕ ಅವರು ಹೇಳಿದರು.
ಭಾರತ
ಸಕರ್ಾರದ ವಾತರ್ಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಜನಸಂಪರ್ಕ
ಕಾಯರ್ಾಲಯ ವಿಜಯಪುರ ಹಾಗೂ ಯುಥ್ ಯೂನಿವರ್ಸಲ್
ವ್ಹಾಲೆಂಟರಿ ಅಸೋಸಿಯೇಶನ್ ರಾಷ್ಟ್ರೀಯ ಬಸವ ಸೈನ್ಯ, ಡೈನಾಮಿಕ
ಅಥ್ಲೆಟಿಕ್ ಕ್ಲಬ್ ಹಾಗೂ ವಿದ್ಯಾವರ್ಧಕ ಸಂಘ
ಕಲಾ, ವಾಣಿಜ್ಯ ಮತ್ತು ಬಿಸಿಎ ದರಬಾರ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ನಗರದ ದರಬಾರ
ಹೈಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮವನ್ನು
ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ
ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಲು ಮತ್ತು ಏಕತೆಯಿಂದಲೇ ಗುರುತಿಸಿಕೊಳ್ಳಲು ಕಾರಣರಾಗಿದ್ದು ಸದರ್ಾರ ವಲ್ಲಭಭಾಯಿ ಪಟೇಲ ಅವರು. ಸ್ವತಂತ್ರ
ಭಾರತದ ಪ್ರಥಮ ಗೃಹ ಸಚಿವರಾಗಿ ದೈನಂದಿನ
ಆಡಳಿತದಲ್ಲಿ ನೇರ, ನಿಷ್ಠುರ ಮತ್ತು
ಸಾಮಾಜಿಕ ನ್ಯಾಯವನ್ನು ಅಳವಡಿಸಿಕೊಂಡಿದ್ದರು. ಅವರ ವಿಷಯ ನಿಷ್ಠುರತೆ,
ಒಳಿತಿಗಾಗಿ, ಏಕತೆಗಾಗಿ ಕ್ರಾಂತಿ ಮನೋಭಾವ, ನ್ಯಾಯಪಾಲನೆ ಮುಂತಾದ ವಿಷಯಗಳು ನಮಗೆಲ್ಲರಿಗೂ ಆದರ್ಶನೀಯವಾಗಿವೆ. ಇಂತಹ ಮಹಾನ್ ವ್ಯಕ್ತಿಯ
ಏಕತಾ ಪ್ರತಿಮೆ ಇಂದು ಲೋಕಾರ್ಪಣೆಗೊಂಡಿದ್ದು ಹೆಮ್ಮೆಯ ವಿಷಯವಾಗಿದೆ
ಎಂದು ಹೇಳಿದರು.
ವೈದ್ಯರಾದ ಡಾ.ಸಂಜು ಸಿಳ್ಳಿನ
ಅವರು ಮಾತನಾಡಿ, ಮಹಾತ್ಮ ಗಾಂಧೀಜಿಯವರ ಕಟ್ಟಾ ಅನುಯಾಯಿಯಾಗಿ ಅವರಿಂದಲೇ ಸದರ್ಾರ ಎಂಬ ಬಿರುದನ್ನು ಪಡೆದ
ನೇರ, ನಿಷ್ಠುರ ವ್ಯಕ್ತಿ ಸದರ್ಾರ ವಲ್ಲಭಭಾಯಿ ಪಟೇಲ, ವಿದ್ಯಾಥರ್ಿ ದೆಸೆಯಿಂದಲೇ ಬ್ರಿಟಿಷರ ವಿರುದ್ಧದ ಹೋರಾಟಗಳಲ್ಲಿ ಮುಂದಾಳತ್ವ ವಹಿಸುತ್ತ, ದೇಶದ ಏಕತೆಗಾಗಿ, ವಿವಿಧ
ರಾಜ-ಸಂಸ್ಥಾನಗಳ ಮೂಲಕ ಹಂಚಿಹೋಗಿದ್ದ ಭಾರತವನ್ನು
ಅಖಂಡ ಭಾರತವನ್ನಾಘಿ ಮರು ನಿಮರ್ಿಸಲು ಶ್ರಮಿಸಿದರಲ್ಲದೇ,
ಆಸರೆ ಮತ್ತು ಘನತೆಯ ನೆಲೆ ನೀಡುವ ವಸತಿ
ಸಹಕಾರ ಸಂಘಗಳ ಕಲ್ಪನೆಯನ್ನು ಜನಪ್ರಿಯಗೊಳಿಸಿದರು ಎಂದು ಹೇಳಿದರು.
ಮಹಿಳಾ
ಸಬಲೀಕರಣ, ರೈತರಿಗೆ ಕಾಮರ್ಿಕ ವರ್ಗದವರಿಗೆ, ವಿದ್ಯಾಥರ್ಿಗಳಿಗೆ ಸ್ಪೂತರ್ಿಯಾಗಿದ್ದರು. ಅವರಿಗೆ ಸಂಬಂಧಿಸಿದ ಯಾವುದೇ ಹೋರಾಟದಲ್ಲಿ ಮುಂದಾಳತ್ವ ವಹಿಸುತ್ತಿದ್ದರು. ಅವರ ಹೋರಾಟದ ತೀವ್ರತೆ
ಮತ್ತು ಕಾಠಿಣ್ಯದ ಕಾರಣ ಉಕ್ಕಿನ ಮನುಷ್ಯ
ಎಂಬ ಪ್ರಸಿದ್ದಿಯನ್ನು ಪಡೆದರು. ಅವರ ಈ ಎಲ್ಲ
ಸಾಧನೆ, ಹೋರಾಟಗಳನ್ನು ಗಮನಿಸಿ ಅವರ ತತ್ವಗಳ ಪಾಲನೆ
ಹಾಗೂ ಮುಂದಿನ ಪೀಳಿಗೆಗೆ ಅವುಗಳನ್ನು ತಲುಪಿಸುವ ಉದ್ದೇಶದಿಂದ 2013, ಅಕ್ಟೋಬರ್ 31 ರಿಂದ ಸದರ್ಾರ್ ಪಟೇಲರ್
ಜನ್ಮ ದಿನಚರಣೆಯನ್ನು ರಾಷ್ಟ್ರೀಯ ಏಕತಾ ದಿನಾಚರಣೆಯನ್ನಾಗಿ ಆಚರಿಸಲ್ಪಡುತ್ತಿದೆ
ಎಂದು ಹೇಳಿದರು.
ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದ ದರಬಾರ ಮಹಾವಿದ್ಯಾಲಯದ ಪ್ರಾಚಾರ್ಯ ಹಾಗೂ ರಾಣಿ ಚೆನ್ನಮ್ಮ
ವಿವಿಯ ಸಿಂಡಿಕೇಟ್ ಸದಸ್ಯರಾದ ಡಾ.ವಿನಾಯ ಗ್ರಾಮ
ಪುರೋಹಿತ ಅವರು ಮಾತನಾಡಿ, ಯುವಕರಲ್ಲಿ
ದೇಶಪ್ರೇಮ, ಸಮಗ್ರತೆ, ದೇಶದ ಏಕತೆ ಕುರಿತು
ಇನ್ನೂ ಹೆಚ್ಚಿನ ಜಾಗೃತಿ
ಮೂಡಬೇಕು. ಶಿಕ್ಷಣ ಉದ್ಯೋಗದ ಮೂಲವಾಗದೇ ಸದರ್ಾರ್ ಪಟೇಲ್ರಂತಹ ಮಹನೀಯರ ಆದರ್ಶ ಜೀವನ ಮೌಲ್ಯಗಳನ್ನು ತಿಳಿಯುವ
ಪ್ರಯತ್ನವಾಗಬೇಕು ಎಂದು ಹೇಳಿದರು.
ಇದೇ
ಸಂದರ್ಭದಲ್ಲಿ ಕಾರ್ಯಕ್ರಮದ ಅಂಗವಾಗಿ ಪದವಿ ಹಾಗೂ ಪದವಿಪೂರ್ವ
ಪ್ರಾಥಮಿಕ ವಿದ್ಯಾಥರ್ಿಗಳಿಗೆ ಆಯೋಜಿಸಿದ್ದ ರಸಪ್ರಶ್ನೆ, ಭಾಷಣ ಸ್ಪಧರ್ೆ, ಮ್ಯಾರಾಥಾನ್ನಲ್ಲಿ
ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಲಾಯಿತು.
ಕ್ಷೇತ್ರ
ಜನಸಂಪರ್ಕ ಕಾಯರ್ಾಲಯದ ಅಧಿಕಾರಿ ಮುರಳೀದರ ಕಾರಬಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ
ಜೆ.ಎಚ್.ಮಣ್ಣೂರ ಸ್ವಾಗತಿಸಿದರು.
ಉಪನ್ಯಾಸಕ ನಾಗರಾಜ ನಿರೂಪಿಸಿದರು. ಎನ್.ಎಸ್.ಎಸ್.ಅಧಿಕಾರಿ ಆರ್.ಬಿ.ಕಪಾಲಿ
ವಂದಿಸಿದರು. ವಿದ್ಯಾಥರ್ಿನಿ ಸುನಂದಾ ಪ್ರಾಥರ್ಿಸಿದರು. ಬದಾಮಿಯ ಕಾವೇರಿ ಕಲಾ ತಂಡ ವಿವಿಧ
ಕ್ರಾಂತಿ ಗೀತೆಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ
ಯುವ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ದಾನೇಶ ಅವಟಿ, ರಾಷ್ಟ್ರೀಯ ಬಸವಸೈನ್ಯದ ಜಿಲ್ಲಾಧ್ಯಕ್ಷ ಸೋಮನಗೌಡ ಕಲ್ಲೂರ, ಡೈನಾಮಿಕ ಅಥ್ಲೆಟಿಕ್ ಕ್ಲಬ್ ಸಂಚಾಲಯ ಶುಭಂ ಬಿಸೆ, ಪದವಿಪೂರ್ವ
ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಆರ್.ಕುಲಕಣರ್ಿ
ಸೇರಿದಂತೆ ವಿದ್ಯಾಲಯದ ಸಿಬ್ಬಂದಿ, ವಿದ್ಯಾಥರ್ಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು
ಉಪಸ್ಥಿತರಿದ್ದರು.
ಇದಕ್ಕೂ
ಮೊದಲು ನಗರದ ಶ್ರೀ ಸಿದ್ದೇಶ್ವರ
ದೇವಸ್ಥಾನದಿಂದ ಆರಂಭಗೊಂಡ ಏಕತಾ ಓಟಕ್ಕೆ ಜಿಲ್ಲಾಧಿಕಾರಿ
ಎಸ್.ಬಿ.ಶೆಟ್ಟೆಣ್ಣವರ ಅವರು
ಚಾಲನೆ ನೀಡಿದರು.