ವ್ಯಾಲೆಂಟೈನ್ ನಿಮಿತ್ಯ ರಕ್ತದಾನ ಶಿಬಿರ

ಲೋಕದರ್ಶನ ವರದಿ

ಬೆಳಗಾವಿ 15:  ಸಂಪ್ರದಾಯದಂತೆ ಬೆಳಗಾವಿಯ ಜೈನ ಇಂಜೀನೀಯರಿಂಗ ಕಾಲೇಜಿನಲ್ಲಿ ವ್ಯಾಲೆಂಟೈನ ದಿನದಂದು ಇಲೆಕ್ಟ್ರಿಕಲ್ ಹಾಗೂ ಇಲೆಕ್ಟ್ರಾನಿಕ್ಸ್ ವಿಭಾಗಗಳಿಂದ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಶಿಬಿರವು ಸ್ಟುಡೆಂಟ್ ಅಸೋಸಿಯೇಶನ ತೆಸ್ಲಾ, ಇನ್ಸ್ಟ್ಯೂಟುಶನ್ ಆಫ್ ಇಂಜೀನಿಯರ್ಸ್ ಸ್ಟುಡೆಂಟ ಚಾಪ್ಟರ್ (ಇಲೇಕ್ಟ್ರಿಕಲ್) ಹಾಗೂ ಕೆ.ಎಲ್.ಇ ಬ್ಲಡ ಬ್ಯಾಂಕಗಳ ಸಂಯುಕ್ತ ಪ್ರಯತ್ನದ ಫಲವಾಗಿ ನೇರವೇರಿತು.

ಕೆ.ಎಲ್.ಇ ಬ್ಲಡ್ ಬ್ಯಾಂಕಿನ ಡಾ: ಬಸವರಾಜ ದೇವಗಿ ರಕ್ತದಾನದ ಮಹತ್ವವನ್ನು ವಿವರಿಸಿ, ತದನಂತರ ಏನು ಮಾಡಬೇಕು ಹಾಗೂ ಏನನ್ನು ಮಾಡಬಾರದೆಂಬುದರ ಕುರಿತು ಮಾತನಾಡಿದರು.

  ವಿಭಾಗದ ಮುಖ್ಯಸ್ಥ ಡಾ. ಜಿ.ಎಚ್ ಕುಲಕಣರ್ಿ ಸಮ್ಮೇಳನವನ್ನು ಸ್ವಾಗತಿಸಿದರು. ಇವರು ರಕ್ತದಾನದ ಸಾಮಾಜಿಕ ಹಾಗೂ ಜೈವಿಕ ಮಹತ್ವ ಕುರಿತು ಪರಿಶೋಧಿಸಿದರು. ಯುವ ಜನಾಂಗದಲ್ಲಿ ಇದರ ಕುರಿತಾದ ಪರಿಜ್ಞಾನ ಹಾಗೂ ಸಾಮಾಜಿಕ ಕಲ್ಯಾಣ ಚಟುವಟಿಕೆಗಳನ್ನು ಪ್ರಶಂಶಿಸಿ ಭಾರತ ಹಾಗೂ ಕನರ್ಾಟಕದಲ್ಲಿ ರಕ್ತ ಶಿಬಿರಗಳ ಉತ್ಕ್ರಾಂತಿಯನ್ನು ಅಂಕಿ-ಸಂಖ್ಯೆಗಳ ಮೂಲಕ ಒತ್ತಿ ಹೇಳಿದರು.

ದಿ. ಇನಸ್ಟಿಟ್ಯೂಟ್ ಆಫ್ ಇಂಜಿನೀಯರ್ಸ್ ಇಂಡೀಯಾ ಸ್ಟುಡೆಂಟ್ಸ್ ಚಾಪ್ಟರ್ (ಇಲೇಕ್ಟ್ರಿಕಲ್) ದ ಸಿಬ್ಬಂದಿ ಸಂಯೋಜನಾಧಿಕಾರಿ ಪ್ರೊ. ವಿನೋದ ಎಸ್. ಪಾಟೀಲ ಧನ್ಯವಾದ ಹೇಳಿದರು. ಕೆ.ಎಲ್.ಇ. ಬ್ಲಡ್ ಬ್ಯಾಂಕ್ ಸುಮಾರು 200 ಯುನಿಟನಷ್ಟು ರಕ್ತ ಪಡೆಯಬಹುದಾಗಿದೆ. ಬ್ಲಡ ಬ್ಯಾಂಕ್ ಕುರಿತು ಜೆ.ಸಿ.ಇ. ಪ್ರತಿವರ್ಷ ನಡೆಯಿಸುತ್ತಿರುವ ಡಾಕ್ಟರ ಹಾಗೂ ಇದನ್ನು ಬೆಂಬಲಿಸುತ್ತಿರುವವರ ಸಏವೆ ಪ್ರಶಂಶಾರ್ಹವಾಗಿದೆ.

ಈ ಸಂದರ್ಭದಲ್ಲಿ ಕಾತರ್ಿಕ, ಮುತ್ತಪ್ಪಾ, ರೂಪಾಲಿ, ಕುಮಾರಿ ಶಿಲ್ಪಾ, ವಿದ್ಯಾಥರ್ಿ ಸಂಯೋಜಕರು, ಹಾಗೂ ಸಂದರ್ಭ ಆಯೋಜಕ ತಂಡ, ಡಾ. ಆನಂದ ಎಸ್.ಬಿ. ಹಾಗೂ ಬ್ಲಡ ಬ್ಯಾಂಕಿನ ಕೆ.ಎಲ್.ಇ ಸಿಬ್ಬಂದಿ, ಇಲೆಕ್ಟ್ರಿಕ್ ಹಾಗೂ ಇಲೆಕ್ಟ್ರಾನಿಕ್ ವಿಭಾಗಗಳ ಡಾ. ದೇಬ್ರಾಜ ಸಕರ್ಾರ, ಪ್ರೊ. ನಾಗರಾಜ ಐಹೊಳಿ, ಪ್ರೊ. ಸಿದ್ದಲಿಂಗಯ್ಯ ಸಿ, ಪ್ರೊ, ಪ್ರವೀಣ ಕುರಲೂಪೆ, ಪ್ರೊ. ಸಂದೀಪ ಕುಡಾಳ, ಪ್ರೊ. ಸಂತೋಷ ಸಿಂಗ್ ಯಾದವ ಹಾಗೂ ಪ್ರೊ, ಪಸಲಾ ನಾಗೇಶ ಉಪಸ್ಥಿತರಿದ್ದರು.

***