ವಾಜಪೇಯಿ ವಸತಿ ಯೋಜನೆ ಬಡವರ ಆತ್ಮಸ್ಥೈರ್ಯ: ಮಾಲಗಿತ್ತಿ

ಲೋಕದರ್ಶನ ವರದಿ

ಕೊಪ್ಪಳ 03: ಬಡತನ ರೇಖೆಗಿಂತ ಕೆಳಗಿರುವವರಿಗೆ, ವಸತಿ ರಹಿತರ ಹಿತ ಕಾಯಲು ಸಕರ್ಾರ ರೂಪಿಸಿರುವ ವಾಜಪೇಯಿ ವಸತಿ ಆವಾಸ್ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಭಾಗ್ಯನಗರ ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷೆ ದೇವಮ್ಮ ಮಾಲಗಿತ್ತಿ ಹೇಳಿದರು.  

ಪಟ್ಟಣ ಪಂಚಾಯತ ಕಾಯರ್ಾಲಯದಲ್ಲಿ 16ನೇ ವಾಡರ್ಿನ ವಾಜಪೇಯಿ ವಸತಿ ಆವಾಸ್ ಯೋಜನೆಯ 20 ಫಲಾನುಭವಿಗಳಿಗೆ ಕಾಯರ್ಾದೇಶ ನೀಡಿ ಮಾತನಾಡಿದರು. ಆವಾಸ್ ಯೋಜನೆಯು ವಸತಿರಹಿತರಿಗೆ ಸೂರು ಕಲ್ಪಿಸುವುದರೊಂದಿಗೆ ಅವರಲ್ಲಿ ಚೈತನ್ಯ ತುಂಬಿ ಸಾವಲಂಬಿಗಳಾಗಿ ಬದುಕುವಂತೆ ಆತ್ಮಸ್ಥೈರ್ಯ ತಂದುಕೊಡುತ್ತದೆ ಎಂದರು. 

ಮುಖ್ಯಾಧಿಕಾರಿಗಳಾದ ಬಿ.ಬಾಬು ಮಾತನಾಡಿ ಪಟ್ಟಣದ ಸ್ವಚ್ಛತೆಗೆ ಸಾರ್ವಜನಿಕರು ಸಹಕರಿಸಬೇಕು. ಪ್ರತಿವಾಡರ್ಿನಲ್ಲಿರುವ ಯುವಕ-ಯುವತಿ ಮಂಡಳಿಯ ಪದಾಧಿಕಾರಿಗಳು ಜನಜಾಗೃತಿ ಮೂಡಿಸುವಲ್ಲಿ ಶ್ರಮವಹಿಸಲು ಅಗತ್ಯ ನೆರವು ನೀಡಲು ಪಟ್ಟಣ ಪಂಚಾಯತ ಸಿದ್ದವಿದೆ ಎಂದರು. 

ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಾದ ಮಂಗಳಾ ಕುಲಕಣರ್ಿ, ಮಹಾದೇವಿ ಬಣಗಾರ, ಫಲಾನುಭವಿಗಳಾದ ಶಾಂತಮ್ಮ ಮೇಟಿ, ಸರೋಜಮ್ಮ ಅಂಗಡಿ, ಶಾರಮ್ಮ ಅಳವಂಡಿ, ಗವಿಸಿದ್ದಮ್ಮ ಪಲ್ಲೇದ, ಶೋಭಾ ಪಾಟೀಲ, ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಬಿ.ಗಿರೀಶಾನಂದ ಜ್ಞಾನಸುಂದರ, ಮುಖಂಡ ಜಗದೀಶ ಮಾಲಗಿತ್ತಿ ಹಾಗೂ ಅನೇಕರು ಭಾಗವಹಿಸಿದ್ದರು.