ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷಿ ಪ್ರಿಯಾ ಅವರಿಂದ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಣೆ
Uttara Kannada District Commissioner Lakshi Priya distributes prizes to winners of sports event
ದಾಂಡೇಲಿ 02: ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಕ್ರೀಡೆ ಅವಶ್ಯ, ಜಿಲ್ಲಾಧಿಕಾರಿ ಲಕ್ಷಿಪ್ರಿಯಾ ಅಭಿಮತ, ಸಾರ್ವಜನಿಕ ಸೇವೆ ಪಾರದರ್ಶಕತೆ ಮತ್ತು ಕಂದಾಯ ಇಲಾಖೆಯ ವಿಶ್ವಾಸಾರ್ಹತೆ ಬಲ ಪಡಿಸಲು ವಿಶೇಷ ಕಾರ್ಯಕ್ರಮಗಳು, ಕ್ರೀಡಾಕೂಟ ಮೂಲಕ ಸಿಬ್ಬಂದಿಗಳ ಮನೋಸ್ಥೈರ್ಯವನ್ನು ವೃದ್ದಿಸಲು ದಾಂಡೇಲಿಯಲ್ಲಿ 2 ದಿನಗಳ ಕಂದಾಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷೀಪ್ರಿಯಾ ನುಡಿದರು.
ಅವರು ದಾಂಡೇಲಿಯ ಡಿ.ಎಫ್.ಎ ಮೈದಾನದಲ್ಲಿ ಉತ್ತರ ಕನ್ನಡ ಜಿಲ್ಲಾ ಕಂದಾಯ ದಿನಾಚರಣೆ ಅಂಗವಾಗಿ ಶನಿವಾರ ಎರಡು ದಿನಗಳ ಸಿಬ್ಬಂದಿ ಮತ್ತು ಅಧಿಕಾರಿಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಮಾತನಾಡಿ ಪ್ರತಿನಿತ್ಯ ಕಂದಾಯ ಇಲಾಖೆಯ ನೌಕರರು ಜನಪರ ಆಡಳಿತಾತ್ಮಕ ಸೇವೆಗಳನ್ನು ಮಾಡುತ್ತಾ ತೀವ್ರ ಒತ್ತಡದಲ್ಲಿರುತ್ತಾರೆ. ಅವರಿಗೆ ಎರಡು ದಿನಗಳ ಕಾಲ ಎಲ್ಲ ಒತ್ತಡಗಳನ್ನು ಮರೆತು ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗವಹಿಸಿ ದೈಹಿಕೆ ಸಾಮರ್ಥ್ಯದೊಂದಿಗೆ ನೆಮ್ಮದಿಯಿಂದ ಮರಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಸಾಜಹೀದ ಮುಲ್ಲಾ, ಶಿರಸಿಯ ಸಹಾಯಕ ಕಮಿಷನರ್ ಚಂದ್ರಶೇಖರ, ಕುಮಟಾ ಸಹಾಯಕ ಕಮಿಷನರ್ ಶ್ರವಣಕುಮಾರ, ಕಾರವಾರ ಭೂ ದಾಖಲೆಗಳ ಉಪನಿರ್ಧೇಶಕರಾದ ಸಂದೀಪ ಉಪ್ಪಾರ, ಡಿ.ವಾಯ್ ಎಸ್.ಪಿ ಶಿವಾನಂದ ಮದರಕಂಡಿ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲದಾರರು , ಕಂದಾಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು ನಂತರ ನಡೆದ ಕ್ರೀಡೆಯಲ್ಲಿ ಕಂದಾಯ ಅಧಿಕರಿಗಳು, ಸಿಬ್ಬಮದಿಗಳಿಗಾಗಿ ಡಿ.ಎಫ್.ಎ ಮೈದಾನದಲ್ಲಿ ಕ್ರೀಕೆಟ್, ಓಟದ ಸ್ಪರ್ಧೆಗಳು ನಡೆದರೆ, ಸುಭಸ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು. ಸಂಜೆ ವಿಶ್ವೇಶ್ವರ ತಾಂತ್ರಿಕ ವಿಶ್ವ ವಿದ್ಯಾಲಯದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಸಮಾರಂಭದ ಸಮಾರೋಪ. : ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಮಾತನಾಡಿ ಕಳೆದ 4 ವರ್ಷಗಳಿಂದ ಒತ್ತಡದ ರ್ಕಾನಿರ್ವಹಣೆಯ ನಡುವೆ ಜಿಲ್ಲೆಯಲ್ಲಿ ಕಂದಾಯ ದಿನಾಚರಣೆ ಆಚರಿಸಿರಲಿಲ್ಲ. ಈ ವರ್ಷ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಂದಾಯ ದಿನಾಚರಣೆಯನ್ನು ದಾಂಡೇಲಿ ತಹಶೀಲದಾರ ಶೈಲೇಶ್ ಪರಮಾನಂದ ಅಚ್ಚುಕಟ್ಟಾಗಿ ಆಯೋಜಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಗೆಲವು -ಸೋಲು , ಸಿಹಿ -ಕಹಿ ಎಲ್ಲ ಅನುಭವಗಳನನ್ನು ಎರಡು ದಿನಗಳ ಕಾಲ ಕಂದಾಯ ನೌಕರರು ಕ್ರೀಡಾ ಸ್ಪೂರ್ತಿಯೊಂದಿಗೆ ಅನುಭವಿಸಿ ಆನಂದಿಸಿದ್ದಾರೆ ಎಂದರು. ಜಿಲ್ಲಾಧಿಕಾರಿ ಲಕ್ಷಿಪ್ರಿಯಾ ಅವರು ಅಧ್ಯಕ್ಷತೆವಹಿಸಿ ಸ್ಫರ್ಧಾವಿಜೇತರಿಗೆ ಬಹುಮಾನ ವಿತರಿಸಿದರು. ವೇದಿಕೆಯ ಮೇಲೆ ಪ್ರೋಬೆಷರಿ ಐ.ಎ.ಎಸ್ ಅಧಿಖಾರಿ ಜುಫಿಯಾನ ಹಕ್, ಕುಮಟಾ ಸಿರಸಿ ಉಪವಿಭಾಗಾಧಿಕಾರಿಗಳಾದ ಶ್ರವಣಕುಮಾರ ಚಂದ್ರಶೇಖರ, ಜಿಲ್ಲೆಯ ಎಲ್ಲ ತಾಲೂಕಿನ ತಹಶೀಲದರಾರರು ಮತ್ತು ಜಿಲ್ಲೆಯ ಎಲ್ಲ ತಾಲೂಕಿನ ಕಂದಾಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 