೧೫೧ ಮೀಟರ್ ಎತ್ತರದ ಭಗವಾನ್ ಶ್ರೀರಾಮನ ಪ್ರತಿಮೆ ಸ್ಥಾಪನೆಗೆ ಉತ್ತರ ಪ್ರದೇಶ ಸರ್ಕಾರ ನಿರ್ಧಾರ

ಲಕ್ನೋ, ಜ ೧೦ ,ರಾಮನ ಜನ್ಮಭೂಮಿಯಾಗಿರುವ  ಅಯೋಧ್ಯೆ  ನಗರವನ್ನು  “ಸ್ಮಾರ್ಟ್ ಸಿಟಿ” ಯನ್ನಾಗಿ ಅಭಿವೃದ್ಧಿಪಡಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಯೋಜನೆ  ರೂಪಿಸಿದ್ದಾರೆ.  ಆಯೋಧ್ಯೆಯ ಜತೆಗೆ  ರಾಜ್ಯದಲ್ಲಿ   ತಮ್ಮ  ಮಠವಿರುವ  ಗೋರಖ್ಪುರ, ಮೀರತ್, ಗಾಜಿಯಾಬಾದ್, ಫಿರೋಜಾಬಾದ್, ಮಥುರಾ ಮತ್ತು ಶಹಜಹಾನ್ ಪುರ ನಗರಗಳನ್ನು ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಪಡಿಸಲು  ಯೋಗಿ  ಅದಿತ್ಯ ನಾಥ್ ನಿರ್ಧರಿಸಿದ್ದಾರೆ. ಪ್ರತಿ ಸ್ಮಾರ್ಟ್  ನಗರಕ್ಕೆ ವಾರ್ಷಿಕ  ತಲಾ  ೫೦ ಕೋಟಿ ರೂ ನೆರವು  ಕಲ್ಪಿಸಲು ನಿರ್ಧರಿಸಲಾಗಿದೆ. ಯೋಜನೆ ಅನ್ವಯ  ೨೦೩೧ ರ ವೇಳೆಗೆ ಅಯೋಧ್ಯೆ ನಗರದಲ್ಲಿ ಅಭಿವೃದ್ಧಿ  ಕಾಮಗಾರಿಗಳನ್ನು   ಪೂರ್ಣಗೊಳಿಸಲು ಮುಖ್ಯಮಂತ್ರಿ  ನಿರ್ಧರಿಸಿದ್ದಾರೆ. ರಾಮ  ಜನ್ಮ ಭೂಮಿಯಾಗಿರುವ ಸರಯು ನದಿಯ ದಡದಲ್ಲಿ ೧೫೧ ಮೀಟರ್ ಎತ್ತರದ ಭಗವಾನ್ ರಾಮನ ಪ್ರತಿಮೆಯನ್ನು ನಿರ್ಮಿಸಲಾಗುವುದು.  ಸ್ಮಾರ್ಟ್ ಸಿಟಿ ಯೋಜನೆಯೊಂದಿಗೆ ಅಯೋಧ್ಯೆಯನ್ನು ದೇಶದ ಪ್ರಮುಖ  ತೀರ್ಥ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಆಯೋಧ್ಯೆನಗರ  ಮೇಯರ್ ರಿಷಿಕೇಶ್ ಉಪಾಧ್ಯಾಯ ವಿವರಿಸಿದರು. ಅಯೋಧ್ಯೆ ನಗರದ ಅಭಿವೃದ್ಧಿಗಾಗಿ ಯಾತ್ರಿಕರ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗುವುದು. ಅಯೋಧ್ಯ ತೀರ್ಥ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗುವುದು ಎಂದು ಮೇಯರ್ ಪ್ರಕಟಿಸಿದರು. ಅಯೋಧ್ಯೆ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ೧೦೦ ಕೋಟಿ ಮಂಜೂರು ಮಾಡಿದೆ. ೪,೦೦೦  ಬಸ್ಸುಗಳು ಬಂದು ಹೋಗಲು ಸಾಧ್ಯವಾಗುವಂತೆ  ಬಸ್ ಟರ್ಮಿನಲ್ ನಿರ್ಮಿಸಲಾಗುವುದು. ಯಾತ್ರಿಕರಿಗಾಗಿ ಅಯೋಧ್ಯೆಯಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ಕೇಂದ್ರ ನಿರ್ಧರಿಸಿದೆ. ೧೩ ಕಿ.ಮೀ ರಮಾಡಿ ಕಾರಿಡಾರ್ನ  ನಿರ್ಮಿಸುವ ಮೂಲಕ  ಸರಯೂ ನದಿಯಲ್ಲಿ ಯಾತ್ರಿಕರು ವಿಹರಿಸಲು ಲಾಂಜ್ ಗಳನ್ನು ಆರಂಭಿಸಲಾಗುವುದು. ಪಂಚತಾರಾ ಹೋಟೆಲ್ಗಳು ಮತ್ತು ರೆಸಾರ್ಟ್ಗಳ ಪ್ರಾರಂಭಿಸಲಾಗುವುದು. ಅಯೋಧ್ಯೆ ನಗರದ ಸುತ್ತಮುತ್ತಲ  ೪೨ ಗ್ರಾಮಗಳನ್ನು ಅಯೋಧ್ಯೆಯ ನಗರ ಸಭೆಯ ವ್ಯಾಪ್ತಿಗೆ ವಿಲೀನಗೊಳಿಸಲಾಗುವುದು ಎಂದು ವಿವರಿಸಿದರು