ಸಂಘಟನೆ ಶಕ್ತಿ ಬಳಸಿ,ಭ್ರಷ್ಟಾಚಾರ ತೊಲಗಿಸಲು ನ್ಯಾಯ ಕೊಡಿಸಲು ಮುಂದಾಗಿ : ರಾಜಗೋಪಲ್ ಡಿ.ಎಸ್

Use organizational power to eliminate corruption and provide justice: Rajagopal DS

ಸಂಘಟನೆ ಶಕ್ತಿ ಬಳಸಿ,ಭ್ರಷ್ಟಾಚಾರ ತೊಲಗಿಸಲು ನ್ಯಾಯ ಕೊಡಿಸಲು ಮುಂದಾಗಿ  : ರಾಜಗೋಪಲ್ ಡಿ.ಎಸ್ 

ಕಂಪ್ಲಿ 09: ಸರ್ಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ತಲೆನೋವಾಗಿದೆ. ಸಂಘಟನೆ ಶಕ್ತಿ ಬಳಸಿಕೊಂಡು, ಭ್ರಷ್ಟ ಅಧಿಕಾರಿಗಳನ್ನು ಹಿಡಿದು, ಜನರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಪದಾಧಿಕಾರಿಗಳು ಮುಂದಾಗಬೇಕು ಎಂದು ಭೀಮ್ ಆರ್ಮಿ ಸಂಘಟನೆಯ ರಾಜ್ಯಾಧ್ಯಕ್ಷ ರಾಜಗೋಪಾಲ್ ಡಿ.ಎಸ್ ಹೇಳಿದರು. 

ಪಟ್ಟಣದ ಸಾಂಗಾತ್ರಯ ಸಂಸ್ಕೃತ ಪಾಠ ಶಾಲಾ ಅವರಣದಲ್ಲಿ ಭೀಮ್ ಆರ್ಮಿ ತಾಲೂಕು ಘಟಕದಿಂದ ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ ನೂತನ ಸಂಘಟನೆ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ  ಉದ್ಘಾಟಿಸಿ ಮಾತನಾಡಿ, ಈ ಸಂಘಟನೆಯು ಉತ್ತರ ಭಾರತದಲ್ಲಿ ಹುಟ್ಟಿ, ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟಕ್ಕೆ ಪಸರಿಸಿದೆ. ಕಂಪ್ಲಿಯಲ್ಲಿ ಈಗಾಗಲೇ ಸಂಘಟನೆ ಇದೆ. ಆದರೆ, ಈಗ ಸಂಘಟನೆಯ ನೂತನ ಅಧ್ಯಕ್ಷರನ್ನಾಗಿ ಎ.ಎಸ್‌.ಯಲ್ಲಪ್ಪ ಇವರನ್ನು ನೇಮಿಸಲಾಗಿದೆ. ನೊಂದವರ ಧ್ವನಿಯಾಗಿ ಕೆಲಸ ಮಾಡಬೇಕು. ಸಂಘಟನೆ ಶಕ್ತಿ ಬಳಕೆ ಮಾಡಿಕೊಂಡು, ನ್ಯಾಯ ಕೊಡಿಸಬೇಕು. ಆದ್ದರಿಂದ ಸಂಘಟನೆ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ದಲಿತರ ಅನುದಾನಗಳನ್ನು ಗ್ಯಾರಂಟಿಗೆ ಬಳಕೆ ಮಾಡದೇ, ಕಾಲೋನಿಗಳ ಅಭಿವೃದ್ಧಿಗೆ ಬಳಕೆ ಮಾಡಬೇಕು ಎಂದರು.  

ನಂತರ ತಾಲೂಕು ಅಧ್ಯಕ್ಷ ಎ.ಎಸ್‌.ಯಲ್ಲಪ್ಪ ಅಧ್ಯಕ್ಷತೆವಹಿಸಿ ಮಾತನಾಡಿ, ಸಂಘಟನೆಯ ಸಿದ್ದಾಂತಗಳಿಗೆ ತಕ್ಕಂತೆ ಹೋರಾಟಗಳೊಂದಿಗೆ ಸಮಾಜ ಸೇವೆ ಮಾಡಲಾಗುವುದು. ಬೂತ್ ಮಟ್ಟದಿಂದ ಸಂಘಟನೆ ಕಟ್ಟಲಾಗುವುದು ಎಂದರು. ನಂತರ ತಾಲೂಕು ಅಧ್ಯಕ್ಷ ಎ.ಎಸ್‌.ಯಲ್ಲಪ್ಪ, ಗೌರವಾಧ್ಯಕ್ಷ ಯು.ಜಿಲಾನ್, ಉಪಾಧ್ಯಕ್ಷ ಹೆಚ್‌.ಆರ್‌.ಧನರಾಜ್, ಪ್ರಧಾನ ಕಾರ್ಯದರ್ಶಿ ಎ.ವಿರೇಶ, ಸಹ ಕಾರ್ಯದರ್ಶಿ ಸತೀಶ ಎಂ.ತಳವಾರ,  ಕಾನೂನು ಸಲಹೆಗಾರ ಮನೋಜಕುಮಾರ ದಾನಪ್ಪ, ಜಿಲ್ಲಾ ಮಾಧ್ಯಮ ಸಲಹೆಗಾರ ರಾಮು ಇವರು ಅಧಿಕಾರ ಪದಗ್ರಹಣ ಮಾಡಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವೆಂಕಟೇಶ, ಸಿರುಗುಪ್ಪ ಅಧ್ಯಕ್ಷ ಕೊಡ್ಲಿ ಧರ್ಮರಾಜ್, ಕುರುಗೋಡು ಅಧ್ಯಕ್ಷ ಶೇಖರ, ಬಳ್ಳಾರಿ ಗ್ರಾಮಾಂತರ ಅಧ್ಯಕ್ಷ ಮಲ್ಲಿಕಾರ್ಜುನ, ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್‌ ಅಧ್ಯಕ್ಷ ಅಕ್ಕಿ ಜಿಲಾನ್, ಸಂಚಾಲಕ ಬಡಿಗೇರ್ ಜಿಲಾನಸಾಬ್, ಯೂತ್ ಕಾಂಗ್ರೆಸ್ ಅಧ್ಯಕ್ಷ ರಿಯಾಜ್ ಅಹ್ಮದ್, ಮುಖಂಡರಾದ ಕೃಷ್ಣಮೂರ್ತಿ, ಬಸವರಾಜ, ಚಲುವಾದಿ ಲಕ್ಷಣ, ಬಸವರಾಜ ಸೇರಿದಂತೆ ಅನೇಕರಿದ್ದರು.