ಧಾರವಾಡ 07: ಬರುವ ಜನವರಿ 4,5 ಹಾಗೂ 6 ರಂದು ನಡೆಯಲಿರುವ ಅಖಿಲ ಭಾರತ 84 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಎಲ್ಲ ಉಪಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರಮಿಸಬೇಕು. ಸಂಪನ್ಮೂಲದ ಕ್ರೋಢೀಕರಣ ಮತ್ತು ಸದ್ಬಳಕೆಗೆ ಒತ್ತು ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಹಾಗೂ ಸಮ್ಮೇಳನದ ಹಣಕಾಸು ಸಮಿತಿಯ ಕಾಯರ್ಾಧ್ಯಕ್ಷ ಡಾ.ಬಿ.ಸಿ.ಸತೀಶ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು (ಗುರುವಾರ) ಸಂಜೆ ನಡೆದ ಎಲ್ಲ ಉಪಸಮಿತಿಗಳ ಕಾಯರ್ಾಧ್ಯಕ್ಷರು ಮತ್ತು ಕಾರ್ಯದಶರ್ಿಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಎಲ್ಲ ಉಪಸಮಿತಿಗಳು ತಯಾರಿಸಿ,ಸಲ್ಲಿಸಿರುವ ಅಂದಾಜು ವೆಚ್ಚದ ಪ್ರಸ್ತಾವನೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು ಲಭ್ಯವಿರುವ ಸಂಪನ್ಮೂಲವನ್ನು ನೋಡಿಕೊಂಡು ಹಣಕಾಸು ಸೌಲಭ್ಯ ಒದಗಿಸಲಾಗುವದು. ಅಚ್ಚುಕಟ್ಟು ಮತ್ತು ಅರ್ಥಪೂರ್ಣವಾದ ಸಮ್ಮೇಳನದ ಆಯೋಜನೆಗೆ ಒತ್ತು ನೀಡಬೇಕು.ನಗರದ ಪ್ರಮುಖ ವೃತ್ತಗಳನ್ನು ಸ್ಥಳೀಯ ಖಾಸಗಿ ಉದ್ಯಮಿಗಳ ನೆರವಿನೊಂದಿಗೆ ಸಿಂಗರಿಸಲು ಉದ್ದೇಶಿಸಲಾಗಿದೆ.ಅವಳಿನಗರದ ಎಲ್ಲ ಚಿತ್ರಕಲಾ ಮಹಾವಿದ್ಯಾಲಯಗಳು ಹಾಗೂ ಕಲಾವಿದರ ನೆರವಿನೊಂದಿಗೆ ಸರಕಾರಿ ಮತ್ತು ಅರೆ ಸರಕಾರಿ ಕಟ್ಟಡಗಳ ಕಂಪೌಂಡ್ ಗೋಡೆಗಳಿಗೆ ಸುಣ್ಣ, ಬಣ್ಣ ಬಳಿಸಿ, ಸ್ಥಳೀಯ ಸಾಹಿತಿಗಳು, ವಿಜ್ಞಾನಿಗಳು, ಸಂಗೀತಗಾರರು ಸೇರಿದಂತೆ ವಿವಿಧ ರಂಗಗಳ ಸಾಧಕರು, ಐತಿಹಾಸಿಕ ಮತ್ತು ಪ್ರಮುಖ ಕಟ್ಟಡಗಳು, ಪ್ರವಾಸಿ ತಾಣಗಳ ಚಿತ್ತಾರಗಳನ್ನು ಬಿಡಿಸಿ ಅಲಂಕರಿಸಬೇಕು. ಎಲ್ಲ ಸಮಿತಿಗಳು ಪ್ರತಿ ಪೈಸೆಯೂ ಸದ್ಬಳಕೆಯಾಗುವಂತೆ ಕಾರ್ಯನಿರ್ವಹಿಸಬೇಕು. ಯಾವುದೇ ರೀತಿಯ ಅಪವ್ಯಯಗಳಾಗದಂತೆ ನಿಗಾವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಹುಬ್ಬಳ್ಳಿ ಧಾರವಾಡ ಉಪ ಪೊಲೀಸ್ ಆಯುಕ್ತ ಬಿ.ಎಸ್.ನೇಮಗೌಡ, ಜಿಪಂ ಉಪಕಾರ್ಯದಶರ್ಿ ಎಸ್.ಜಿ.ಕೊರವರ್, ಮಹಾನಗರಪಾಲಿಕೆ ಉಪ ಆಯುಕ್ತ ಅಜೀಜ್ ದೇಸಾಯಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಎನ್.ಎಂ.ಭೀಮಪ್ಪ, ಅಬಕಾರಿ ಉಪ ಆಯುಕ್ತ ಬಿ.ಆರ್.ಹಿರೇಮಠ, ರಂಗಾಯಣ ಆಡಳಿತಾಧಿಕಾರಿ ಕೆ.ಹೆಚ್.ಚನ್ನೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕ ಎಸ್.ಕೆ.ರಂಗಣ್ಣವರ್, ಕಲಾವಿದ ಬಿ.ಮಾರುತಿ, ಜಿಲ್ಲಾ ಕಸಾಪ ಗೌರವ ಕಾರ್ಯದಶರ್ಿಗಳಾದ ಕೆ.ಎಸ್.ಕೌಜಲಗಿ, ಎಸ್.ಎಸ್.ದೊಡ್ಡಮನಿ ಮತ್ತಿತರರಿದ್ದರು.