ಗ್ರಾಮಗಳ ಸರ್ವತೋಮುಖ ಅಭಿವೃದ್ದಿಗೆ ನರೇಗಾ ಯೋಜನೆ ಸದ್ಬಳಕೆ:ಶಾಸಕ ಕೃಷ್ಣನಾಯಕ
ಹೂವಿನಹಡಗಲಿ 06: ದೇಶ ಅಭಿವೃದ್ದಿ ಆದರೆ ಹಳ್ಳಿ ಅಭಿವೃದ್ದಿ ಹಿನ್ನೆಲೆಯಲ್ಲಿ ಗ್ರಾಮಗಳ ಸರ್ವತೋಮುಖ ಅಭಿವೃದ್ದಿಗೆ ಹೊಸದಾಗಿ ನರೇಗಾ ಯೋಜನೆ ಸದ್ಬಳಕೆ ಮಾಡಿಕೊಂಡು ಗ್ರಾಮಗಳ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಶಾಸಕ ಕೃಷ್ಣನಾಯಕ ಹೇಳಿದರು.ಹೂವಿನಹಡಗಲಿ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ ಎರಡು ಗ್ರಾಮಗಳನ್ನು ಆಯ್ಕೆ ಮಾಡಿದ್ದು.ನರೇಗಾ ಯೋಜನೆಯಲ್ಲಿ ಮಾನ್ಯರ ಮಸಲವಾಡಕ್ಕೆ 1.50 ಕೋಟಿ ರೂ.ಮತ್ತು ಹಿರೆಕೊಳಚಿ ಗ್ರಾಮಕ್ಕೆ 80 ಲಕ್ಷ ರೂ.ಕ್ರಿಯಾಯೋಜನೆ ಸಿದ್ಧಪಡಿಸಲಾಗಿದ್ದು ಹಂತ ಹಂತವಾಗಿ ಗ್ರಾಮಗಳ ಅಭಿವೃದ್ದಿ ಪಡಿಸುತ್ತೇವೆ ಎಂದರು.
ನರೇಗಾದಲ್ಲಿ ಶಾಲಾ.ಕಾಲೇಜು ಕ್ರಿಡಾಂಗಣ.ಅಡಿಗೆ ಕೋಣೆ ಅಭಿವೃದ್ದಿಗೆ ಆದ್ಯತೆ ನೀಡಲಾಗಿದೆ ಎಂದ ಅವರು ತಾಲೂಕು ಪಂಚಾಯ್ತಿಗೆ ನರೇಗಾ ದಲ್ಲಿ ರಾಜ್ಯ ಪ್ರಶಸ್ತಿ ಆಯ್ಕೆಗೆ ಅಭಿನಂದಿಸಿದರು. ತಾ.ಪಂ.ಇಒ ಎಂ.ಉಮೇಶ ಮಾತನಾಡಿ ನರೇಗಾದಲ್ಲಿ 19ಲಕ್ಷ ಮಾನವ ದಿನಗಳು.ಶೇ.73ರಷ್ಟು . ಅಂದಾಜು ತಾಲೂಕಿನಲ್ಲಿ 25ಸಾವಿರ ಕಾರ್ಡಗಳಿಗೆ ಕೆಲಸ ನೀಡಲಾಗಿದೆ ಎಂದ ಅವರು ತಾಲೂಕು ಪಂಚಾಯ್ತಿಗೆ ರಾಜ್ಯ ಪ್ರಶಸ್ತಿ ಮತ್ತು ಜಿಲ್ಲೆಯಲ್ಲಿ ಹಾರಡ ಗ್ರಾಮಕ್ಕೆ ನರೇಗಾ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ.ಮುಖಂಡರಾದ ವಾರದಗೌಸ್ ಮೊಹಿದ್ದೀನ್. ಹಣ್ಣಿ ಶಶಿಧರ ಇದ್ದರು.