10ರಂದು ಸಂತ ಚಾಂಗದೇವ್ ಮಹಾರಾಜರ ಉರುಸು

10ರಂದು ಸಂತ ಚಾಂಗದೇವ್ ಮಹಾರಾಜರ ಉರುಸು Urs of Saint Changdev Maharaj on the 10th

ಕಪ್ಪಲಗುದ್ದಿ  07:  10ರಂದು ಸಂತ ಚಾಂಗದೇವ್ ಮಹಾರಾಜರ ಉರುಸು; ಹಿಂದೂ -ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಯಮನೂರಿನ ಚಾಂಗದೇವರ ಮಹಾರಾಜರ ಉರುಸು; ಪಾಲಬಾವಿ: ಹಿಂದೂ -ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಸಂತ ಚಾಂಗದೇವ್ ಮಹಾರಾಜರ ಉರುಸು ತಾಲೂಕಿನ ಕಪ್ಪಲಗುದ್ದಿ ಗ್ರಾಮದಲ್ಲಿ  ಸುಮಾರು 200-300 ವರ್ಷಗಳ ಹಿಂದಿನಿಂದ ಭಕ್ತಿ ಭಾವನೆಯಿಂದ, ಪ್ರೀತಿ-ವಿಶ್ವಾಸ, ಮಮತೆ, ಶ್ರದ್ಧೆಯಿಂದ  ಆಚರಿಸುಕೊಂಡು ಬಂದಿರುವ ಹಬ್ಬವಾಗಿದೆ. ಯಮನೂರಿನ ಚಾಂಗದೇವ್ ಮಹಾರಾಜರ ಉರುಸು ನಂತೆಯೇ ನಮ್ಮೂರಲ್ಲಿ ಹಿರಿಯರ ಕಾಲದಿಂದಲೂ ಪ್ರತಿವರ್ಷದಂತೆ ಸಡಗರ ಸಂಭ್ರಮದಿಂದ ಭಾವೈಕ್ಯತೆಯಿಂದ ಆಚರಿಸಿಕೊಂಡ ಬಂದ ಹಬ್ಬವಾಗಿದೆ.

ಈ ವರ್ಷವೂ ಸಂತ ಚಾಂಗದೇವ ಮಹಾರಾಜರ (ಯಮನೂರು ಶ್ರೀ ಚಾಂಗದೇವ್ ಉರುಫ್ ರಾಜ ಭಾಗಸವಾರ) ಉರುಸು ಸೋಮವಾರ 9ರಿಂದ ಮಂಗಳವಾರ 10ರಂದು ಎರಡು ದಿನಗಳ ವರೆಗೆ ಸಡಗರ ಸಂಭ್ರಮದಿಂದ ಜರುಗಲಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಪುಟ್ಟಗೌಡ ನಾಯಕ ತಿಳಿಸಿದರು. ಗ್ರಾಮದ ಶ್ರೀ ಭಗೀರಥ ದೇವಸ್ಥಾನದಲ್ಲಿ ಇತ್ತೀಚಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೋಮವಾರ ದಿ.9ರಂದು ಸಂಜೆ 7ಗಂಟೆಗೆ ಮಸೀದಿಗೆ ಹೋಗಿ ಗಲೀಪ್ ಹಾಗೂ ಗಂಧ ಸಮರ​‍್ಿಸಿ ವಿಶೇಷ ಪೂಜೆ ನೆರವೇರುವುದು. ಮಂಗಳವಾರ ದಿ. 10ರಂದು ಮುಂಜಾನೆ ಗ್ರಾಮದ ಭಕ್ತರು ಉರುಳುಸೇವೆ, ದೀರ್ಘ ದಂಡವತ್ ಹಾಕಿ ದೇವರಿಗೆ ಭಕ್ತಿಯ ಹರಕೆ ತೀರಿಸುವರು.

ನಂತರ ದೇವರಿಗೆ ಬೆಲ್ಲ, ಸಕ್ಕರೆ, ನೈವೇದ್ಯ ಸಮರ​‍್ಿಸುವರು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಭೀಮಪ್ಪ ಮಂಟೂರ, ತಾಪಂ ಮಾಜಿ ಸದಸ್ಯ ಶಿವಪ್ಪ ದಡ್ಡಿಮಣಿ, ಗ್ರಾಪಂ ಮಾಜಿ ಅಧ್ಯಕ್ಷ ಪುಟ್ಟುಗೌಡ ನಾಯಕ, ಗ್ರಾಪಂ ಮಾಜಿ ಉಪಾಧ್ಯಕ್ಷ ಕೆಂಪಣ್ಣ ಕುರನಿಂಗ, ಬಸರಾಜ ಬಿರಾಜ, ಹಿರಿಯರಾದ ಮಹಾದೇವ ನಾಯಕ, ಪಿಕೆಪಿಎಸ್ ಸಂಘದ ನಿರ್ದೇಶಕ ಮಹಾಲಿಂಗ ಅಂಗಡಿ, ಮಹಾದೇವ ತಳವಾರ, ಎಸ್‌ಡಿಎಂಸಿ ಅಧ್ಯಕ್ಷ ಗುರು ಅಂಗಡಿ, ವಸಂತ ತೈಕಾರ, ಮಹಾದೇವ ಅಂಗಡಿ, ತಮ್ಮಣ್ಣ ದೊಡ್ಡಮನಿ, ತುಕಾರಾಮ ಕುರುನಿಂಗ, ಮುತ್ತಪ್ಪ ಕುರನಿಂಗ, ಆಸಿಫ್ ನದಾಫ ಇದ್ದರು.