10ರಂದು ಸಂತ ಚಾಂಗದೇವ್ ಮಹಾರಾಜರ ಉರುಸು
Urs of Saint Changdev Maharaj on the 10th
ಕಪ್ಪಲಗುದ್ದಿ 07: 10ರಂದು ಸಂತ ಚಾಂಗದೇವ್ ಮಹಾರಾಜರ ಉರುಸು; ಹಿಂದೂ -ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಯಮನೂರಿನ ಚಾಂಗದೇವರ ಮಹಾರಾಜರ ಉರುಸು; ಪಾಲಬಾವಿ: ಹಿಂದೂ -ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಸಂತ ಚಾಂಗದೇವ್ ಮಹಾರಾಜರ ಉರುಸು ತಾಲೂಕಿನ ಕಪ್ಪಲಗುದ್ದಿ ಗ್ರಾಮದಲ್ಲಿ ಸುಮಾರು 200-300 ವರ್ಷಗಳ ಹಿಂದಿನಿಂದ ಭಕ್ತಿ ಭಾವನೆಯಿಂದ, ಪ್ರೀತಿ-ವಿಶ್ವಾಸ, ಮಮತೆ, ಶ್ರದ್ಧೆಯಿಂದ ಆಚರಿಸುಕೊಂಡು ಬಂದಿರುವ ಹಬ್ಬವಾಗಿದೆ. ಯಮನೂರಿನ ಚಾಂಗದೇವ್ ಮಹಾರಾಜರ ಉರುಸು ನಂತೆಯೇ ನಮ್ಮೂರಲ್ಲಿ ಹಿರಿಯರ ಕಾಲದಿಂದಲೂ ಪ್ರತಿವರ್ಷದಂತೆ ಸಡಗರ ಸಂಭ್ರಮದಿಂದ ಭಾವೈಕ್ಯತೆಯಿಂದ ಆಚರಿಸಿಕೊಂಡ ಬಂದ ಹಬ್ಬವಾಗಿದೆ.
ಈ ವರ್ಷವೂ ಸಂತ ಚಾಂಗದೇವ ಮಹಾರಾಜರ (ಯಮನೂರು ಶ್ರೀ ಚಾಂಗದೇವ್ ಉರುಫ್ ರಾಜ ಭಾಗಸವಾರ) ಉರುಸು ಸೋಮವಾರ 9ರಿಂದ ಮಂಗಳವಾರ 10ರಂದು ಎರಡು ದಿನಗಳ ವರೆಗೆ ಸಡಗರ ಸಂಭ್ರಮದಿಂದ ಜರುಗಲಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಪುಟ್ಟಗೌಡ ನಾಯಕ ತಿಳಿಸಿದರು. ಗ್ರಾಮದ ಶ್ರೀ ಭಗೀರಥ ದೇವಸ್ಥಾನದಲ್ಲಿ ಇತ್ತೀಚಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೋಮವಾರ ದಿ.9ರಂದು ಸಂಜೆ 7ಗಂಟೆಗೆ ಮಸೀದಿಗೆ ಹೋಗಿ ಗಲೀಪ್ ಹಾಗೂ ಗಂಧ ಸಮರ್ಿಸಿ ವಿಶೇಷ ಪೂಜೆ ನೆರವೇರುವುದು. ಮಂಗಳವಾರ ದಿ. 10ರಂದು ಮುಂಜಾನೆ ಗ್ರಾಮದ ಭಕ್ತರು ಉರುಳುಸೇವೆ, ದೀರ್ಘ ದಂಡವತ್ ಹಾಕಿ ದೇವರಿಗೆ ಭಕ್ತಿಯ ಹರಕೆ ತೀರಿಸುವರು.
ನಂತರ ದೇವರಿಗೆ ಬೆಲ್ಲ, ಸಕ್ಕರೆ, ನೈವೇದ್ಯ ಸಮರ್ಿಸುವರು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಭೀಮಪ್ಪ ಮಂಟೂರ, ತಾಪಂ ಮಾಜಿ ಸದಸ್ಯ ಶಿವಪ್ಪ ದಡ್ಡಿಮಣಿ, ಗ್ರಾಪಂ ಮಾಜಿ ಅಧ್ಯಕ್ಷ ಪುಟ್ಟುಗೌಡ ನಾಯಕ, ಗ್ರಾಪಂ ಮಾಜಿ ಉಪಾಧ್ಯಕ್ಷ ಕೆಂಪಣ್ಣ ಕುರನಿಂಗ, ಬಸರಾಜ ಬಿರಾಜ, ಹಿರಿಯರಾದ ಮಹಾದೇವ ನಾಯಕ, ಪಿಕೆಪಿಎಸ್ ಸಂಘದ ನಿರ್ದೇಶಕ ಮಹಾಲಿಂಗ ಅಂಗಡಿ, ಮಹಾದೇವ ತಳವಾರ, ಎಸ್ಡಿಎಂಸಿ ಅಧ್ಯಕ್ಷ ಗುರು ಅಂಗಡಿ, ವಸಂತ ತೈಕಾರ, ಮಹಾದೇವ ಅಂಗಡಿ, ತಮ್ಮಣ್ಣ ದೊಡ್ಡಮನಿ, ತುಕಾರಾಮ ಕುರುನಿಂಗ, ಮುತ್ತಪ್ಪ ಕುರನಿಂಗ, ಆಸಿಫ್ ನದಾಫ ಇದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 