ಗಡಿ ತಾಲೂಕಿನ ಸರ್ವತೋಮುಖ ಅಭಿವೃದಿಗೆ ನಗರಸಭೆಯನ್ನಾಗಿ ಉನ್ನತೀಕರಣ: ಸಚಿವ ರಹೀಂ ಖಾನ್
Upgradation to a municipal council for the all-round development of the border taluk: Minister Rahi
ವಿಜಯಪುರ ಡಿ.23: ಇಂಡಿ ತಾಲೂಕು ರಾಜ್ಯದ ಕೊನೆಯ ತಾಲೂಕು ಆಗಿದ್ದು ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ನಗರಸಭೆಯನ್ನಾಗಿ ಉನ್ನತೀಕರಿಸಲಾಗಿದೆ ಎಂದು ಹಜ್ ಮತ್ತು ಪೌರಾಡಳಿತ ಸಚಿವರಾದ ರಹಿಂ ಖಾನ್ ಹೇಳಿದರು.
ಮಂಗಳವಾರ ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆ, ತಾಲ್ಲೂಕು ಆಡಳಿತ, ನಗರಸಭೆ ಹಾಗೂ ನಗರ ಯೋಜನಾ ಪ್ರಾಧಿಕಾರ ಇಂಡಿ ಇವರ ಸಂಯುಕ್ತಾಶ್ರಯದಲ್ಲಿ ನಗರಸಭೆ ಕಾರ್ಯಾಲಯ ಇಂಡಿ ಹಾಗೂ ನಗರ ಯೋಜನಾ ಪ್ರಾಧಿಕಾರ ಇಂಡಿ, ಇಂಡಿ ವಿಧಾನ ಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ಕಚೇರಿಗಳ ಪ್ರಾರಂಭೋತ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುರಸಭೆಯನ್ನು ನಗರ ಸಭೆಯನ್ನಾಗಿ ಉನ್ನತೀಕರಿಸುವುದು ಸುಲಭದ ಮಾತಲ್ಲ ಈಗಿರುವ ಸಿಬ್ಬಂದಿಗಳು ದ್ವಿಗುಣವಾಗುವುದಲ್ಲದೆ ಕಟ್ಟಡ ಕೂಡ ಹೊಸದಾಗಿ ನಿರ್ಮಿಸಬೇಕಾಗುತ್ತದೆ ಈ ದೃಷ್ಟಿಯಿಂದ ಅನುದಾನ ಕೂಡ ದ್ವಿಗುಣವಾಗುತ್ತದೆ ನಗರಸಭೆಯಾಗಿ ಉನ್ನತೀಕರಿಸಿದ ನಂತರ ನಗರವು ಹೆಚ್ಚಿನ ಮೂಲಭೂತ ಸೌಕರ್ಯಗಳಾದ ಬೀದಿ ದೀಪ, ರಸ್ತೆ, ಒಳಚರಂಡಿ, ಕುಡಿಯುವ ನೀರು, ಅಮೃತ ಯೋಜನೆ ಹಾಗೂ ಇತರ ಅಭಿವೃದ್ಧಿ ವೇಗ ಪಡೆದು ಸುಂದರ, ಸ್ವಚ್ಚ ನಗರವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಡಾ. ಬಾಬಾಸಾಹೇಬ್ ಅಂಬೇಡ್ಕರ ಅವರು ಒಂದು ಜಾತಿ, ಮಥ, ಪಂಥಕ್ಕೆ ಸೀಮಿತವಾಗಿರದೆ ಎಲ್ಲ ಸಮುದಾಯಕ್ಕೂ ಬೆಳಕಾಗಿ ಸಂವಿಧಾನ ರಚಿಸಿ ಇಡೀ ವಿಶ್ವಕ್ಕೆ ಸಮಾನತೆ ಮಾರ್ಗವನ್ನು ತೋರಿಸಿಕೊಟ್ಟ ಮಹಾನ್ ಚಿಂತಕರಾಗಿದ್ದರು ಅಂತಹ ಸಂವಿಧಾನ ರಚಿಸಿದ ಅವರು ಇಂದು ಬಡವರು ಕೂಡ ಉನ್ನತ ಶಿಕ್ಷಣ ಪಡೆಯುವಂತಾಗಿದೆ. ಅದರಂತೆ ವಿಶ್ವಗುರು ಬಸವಣ್ಣನವರು ನಾವೆಲ್ಲರೂ ಒಂದೆ, ಸರಿ ಸಮಾನರೆಂದು ಇಡೀ ವಿಶ್ವಕ್ಕೆ ತೋರಿಸಿಕೊಟ್ಟವರು ಎಂದು ಹೇಳಿದರು.
ಸರ್ಕಾರ ಬಿ.ಖಾತಾ ಮತ್ತು ಇ ಖಾತಾಗಳಂತಹ ಯೋಜನೆಯನ್ನು ಅನುಷ್ಟಾನಗೊಳಿಸಿದ್ದು ಯಾವುದೇ ಅಧಿಕೃತ ದಾಖಲೆ ಇಲ್ಲದ ಕುಟುಂಬಗಳಿಗೆ ಈ ಯೋಜನೆ ಬಹಳ ಅನುಕೂಲವಾಗಲಿದೆ. ಈ ಯೋಜನೆಯು ಯಾವುದೇ ಮದ್ಯವರ್ತಿಗಳಿಲ್ಲದೆ ಆನ್‌ಲೈನ್ ಮೂಲಕ ತಮ್ಮ ತಮ್ಮ ಖಾತೆಗಳನ್ನು ಅಧಿಕೃತವಾಗಿ ಪಡೆದುಕೊಳ್ಳಬಹುದಾಗಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಇಂಡಿ ನಗರದ ಕ್ರೀಡಾಂಗಣಕ್ಕೆ ಡಾ.ಬಿ.ಆರ್ ಅಂಬೇಡ್ಕರ ಕ್ರೀಡಾಂಗಣ ಎಂದು ನಾಮಕರಣ, 10.50 ಕೋಟಿ ರೂಗಳ ವೆಚ್ಚದಲ್ಲಿ ನಗರದ ವಿವಿಧ ವಾರ್ಡ್ಗಳ ರಸ್ತೆ ಸುಧಾರಣೆ, ಹಿಂದುಳಿದ ಕಲ್ಯಾಣ ವರ್ಗಗಳ ಇಲಾಖೆಯ ವತಿಯಿಂದ 5ಕೋಟಿ ರೂ ವೆಚ್ಚದಲ್ಲಿ ನಗರದ ಮೆಟ್ರಿಕ್ ನಂತರದ ಬಾಲಕರ ವಸತಿ ಕಟ್ಟಡ, ಸಣ್ಣ ನೀರಾವರಿ ಇಲಾಖೆಯಿಂದ 3.65 ಕೋಟಿ ರೂ ವೆಚ್ಚದಲ್ಲಿ ಹೊರ್ತಿ ಗ್ರಾಮದ ಕೆರೆ ದುರಸ್ಥಿ ಹಾಗೂ ಸುಧಾರಣೆ, 1ಕೋಟಿ ವೆಚ್ಚದಲ್ಲಿ ಇಂಡಿ ನಗರದಲ್ಲಿ ಸಾಹಿತ್ಯ ಭವನ ಹಾಗೂ 1ಕೋಟಿ ರೂ ಅಂದಾಜು ವೆಚ್ಚದ ಡಿಜಿಟಲ್ ಗ್ರಂಥಾಲಯ ನಿರ್ಮಾಣ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು.
ನಾಗಠಾಣ ಮತ ಕ್ಷೇತ್ರದ ಶಾಶಕರಾದ ವಿಠ್ಠಲ ದೋಂಡಿಬಾ ಕಟಕದೋಂಡ ಮಾತನಾಡಿ, ಇಂಡಿ ನಗರ ಅಭಿವೃದ್ಧಿಗಾಗಿ ಶಾಸಕರು ಜಿಟಿಟಿಸಿ ಕಾಲೇಜು, ಪದವಿ ಕಾಲೇಜದಿಂದ ಇದು ಒಂದು ಶಿಕ್ಷಣದ ಹಬ್ಬ ಆಗಿ ಪರಿವರ್ತನೆಯಾಗಲಿದೆ. ಅದರೊಂದಿಗೆ ನಗರದಲ್ಲಿ 24*7 ಕುಡಿಯುವ ನೀರು ಸರಬರಾಜು ಆಗುವಂತೆ ಮಾಡಿದ್ದು ಈ ಶಾಸಕರ ಕಾರ್ಯ ಶ್ಲಾಘನೀಯ ಇಂಡಿ ನಗರ ಅಭಿವೃದ್ಧಿಗಾಗಿ ನನ್ನ ಸಹಾಯ ಸಹಕಾರಿ ನೀಡುವುದಾಗಿ ಅವರು ಹೇಳಿದರು.
ಶಾಸಕರಾದ ಯಶವಂತರಾಯಗೌಡ ವ್ಹಿ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂಡಿ ನಗರ ಹಾಗೂ ತಾಲೂಕಿನ ಅಭಿವೃದ್ಧಿಗಾಗಿ ಈಗಾಗಲೇ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಲ್ಲಿದ್ದು ಈ ಬಾಗದ ರೈತರಿಗೆ ತುಂಬಾ ಅನುಕೂಲವಾಗಿದೆ ಭೀಮಾ ನದಿಯಿಂದ ಇಂಡಿ ನಗರಕ್ಕೆ 24*7 ಕುಡಿಯುವ ನೀರು ಜಯೋಜನೆ ಈ ಬಾಗದ ಸಾಹಿತ್ಯ, ಸಂಸ್ಕೃತ, ಕಲಾ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ ಸಾಹಿತಿಗಳ ಸಾಹಿತ್ಯ ಭವನ, ಆದರ್ಶ ಶಾಲೆ, ತಾಲೂಕು ಆಡಳಿತ ಭವನ, ಕೃಷಿ ಇಲಾಖೆಯ ಉಪ ನಿರ್ದೇಶಕರ ಕಚೇರಿ-2, ಮೆಘಾ ಮಾರುಕಟ್ಟೆ, ಆದರ್ಶ ಶಾಲೆ, ಪಿ.ಯು.ಸಿ ವಿಜ್ಞಾನ ಕಾಲೇಜು, ನಿಂಬೆ ಅಭಿವೃದ್ಧಿ ಮಂಡಳಿ, ಇಲ್ಲಿ ಬೆಳೆದ ಲಿಂಬೆಗೆ ಜಿ,ಐ ಟ್ಯಾಗ್, ನಗರ ಸಾರಿಗೆ ಬಸ್, ನಗರ ಯೋಜನಾ ಪ್ರಾಧಿಕಾರ, ಮೌಲಾನಾ ಅಬ್ದುಲ್ ಕಲಾಂ ಶಾಲೆ, ಈ ಭಾಗದ ಜನರು ಗುಳೆ ಹೋಗುವುದನ್ನು ತಡೆಗಟ್ಟಲು ಹಳಗುಣಕಿಯಲ್ಲಿ ಕಾರ್ಮಿಕ ಮಕ್ಕಳಿಗಾಗಿ ವಸತಿ ಶಾಲೆ, ಮರಗೂರ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಮರು ಜೀವ ನೀಡಿದ್ದು, ಇಂಡಿ ತಾಲೂಕು ಅಭಿವೃದ್ಧಿಗಾಗಿ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಶ್ರಮಿಸುವುದಾಗಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ., ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಬಿ.ಎಸ್ ಕವಲಗಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಾದ ಇಲಿಯಾಸ್ ಬೋರಾಮಣಿ. ಉಪ ವಿಭಾಗಾಧಿಕಾರಿ ಆಡಳಿತಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿಗಳಾದ ಚಿದಾನಂದ ಗುರುಸ್ವಾಮಿ, ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರು ಹಾಗೂ ಇಂಡಿ ನಗರ ಯೋಜನಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಸುನಿತಾ ಲಾಡ್, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಬದ್ರುದ್ದೀನ ಸೌದಾಗಾರ,ತಹಶೀಲ್ದಾರ ಬಿ.ಎಸ್ ಕಡಕಭಾವಿ, ಇಂಡಿ ನಗರಸಭೆ ಪೌರಾಯುಕ್ತರಾದ ಶಿವಾನಂದ ಎಸ್. ಪೂಜಾರಿ, ಹಾಶೀಂಪೀರ ವಾಲಿಕಾರ, ಬಿ.ಸಿ. ಸಾಹುಕಾರ, ಶಿವಯೋಗೆಪ್ಪ ಚನಗೊಂಡ, ನೀಲಕಂಠಗೌಡ ಬಿರಾದಾರ, ಭೀಮಾಶಂಕರ ಕಲ್ಲೂರ, ಶ್ರೀಕಾಂತ ಕೂಡಿಗನೂರ, ಜಾವಿದ ಮೋಮಿನ,ಬಾಬುಗೌಡ ಪಾಟೀಲ, ಚನ್ನಪ್ಪನ್ನ ರೇವಡಿ, ರಶೀದ ಅರಬ್ ಹಾಗೂ ಇತರರು ಉಪಸ್ಥಿತರಿದ್ದರು. ಸಂತೋಷ ವಾಲೀಕಾರ ಹಾಗೂ ಸಂಘಡಿಗರು ನಾಡಗೀತೆ ಹಾಗೂ ರೈತಗೀತೆ ನಡೆಸಿಕೊಟ್ಟರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 