ಧಾರವಾಡದಲ್ಲಿ ಪ್ರೈಡ್ ಮಾಸಾಚರಣೆ: ಹಕ್ಕುಗಳ ಕುರಿತು ಜಾಗೃತಿ

ಧಾರವಾಡದಲ್ಲಿ ಪ್ರೈಡ್ ಮಾಸಾಚರಣೆ: ಹಕ್ಕುಗಳ ಕುರಿತು ಜಾಗೃತಿ  Pride Month celebration in Dharwad: Awareness about rights

ಲೋಕದರ್ಶನ ವರದಿ 

ಧಾರವಾಡ 30 : ಎಫ್ಪಿಎಐ ಧಾರವಾಡ ಶಾಖೆ ಹಾಗೂ ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಜೂನ್ 30ರಂದು ಪ್ರೈಡ್ ಮಾಸ (ಕಡಿಜಜ ಒಠಣ) ಅಂಗವಾಗಿ ಜಾಗೃತಿ ಕಾರ್ಯಕ್ರಮ ನಡೆಯಿತು.  

ಕಾರ್ಯಕ್ರಮದಲ್ಲಿ ಡಾ. ಸುಜಾತಾ ಎಸ್‌. ಆಣಿಶೆಟ್ಟರ್ ಅವರು ಐಉಃಖಿಕಿ+ ಸಮುದಾಯದ ಹಕ್ಕುಗಳು, ಸಮಾನತೆ, ಸಾಮಾಜಿಕ ಸ್ವೀಕಾರ ಹಾಗೂ ಅವರು ಎದುರಿಸುವ ಸವಾಲುಗಳ ಕುರಿತು ಉಪನ್ಯಾಸ ನೀಡಿದರು. ಪೊಲೀಸ್ ಇನ್ಸ್ಪೆಕ್ಟರ್ ಫಕ್ಕೀರ​‍್ಪ ಡೊಕ್ಕಣ್ಣವರ ಮಾತನಾಡಿ, ಪೊಲೀಸ್ ಸಿಬ್ಬಂದಿಯಲ್ಲಿ ಐಉಃಖಿಕಿ+ ಸಮುದಾಯದ ಬಗ್ಗೆ ಅರಿವು ಮತ್ತು ಸಂವೇದನಾಶೀಲತೆ ಹೆಚ್ಚಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.  

ಎಫ್ಪಿಎಐ ಕಾರ್ಯಕ್ರಮ ಅಧಿಕಾರಿ ಎನ್‌.ಎಫ್‌. ಮಡಿವಾಳ ಸ್ವಾಗತಿಸಿದರು. ಉಪನೀರೀಕ್ಷಕರಾದ ರಾಜು ಗುಡನಟ್ಟಿ, ಪ್ರಕಾಶ ಜೋಡಳ್ಳಿ ಸೇರಿದಂತೆ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.