ಜನಸಾಮನ್ಯರಿಗೆ ಸ್ಪಂದಿಸದ ಕೇಂದ್ರ ಬಜೆಟ್

ಲೋಕದರ್ಶನ ವರದಿ

ರಾಮದುರ್ಗ 03: ಸರ್ವ ಶಿಕ್ಷಣ ಅಭಿಯಾನದ ಅಕ್ಷರದಾಸೋಹ ಯೋಜನೆ ಅಡಿಯಲ್ಲಿ ಕಳೆದ 15 ವರ್ಷಗಳಿಂದ ಕೇವಲ ರೂ.300 ರಿಂದ 2600 ರ ಕಡಿಮೆ ವೇತನದಲ್ಲಿ ದುಡಿಯುತ್ತಾ ಬಂದಿರುವ ಬಡ ಮಹಿಳೆಯರಿಗೆ ಬಜೆಟನಲ್ಲಿ ವೇತನ ಹೆಚ್ಚಳದ ಕುರಿತು ಮಾತನಾಡದ ಕೇಂದ್ರ ಸರಕಾರದ ಬಜೆಟ್ ದುಡಿಯುವ ಮಹಿಳೆಯರ ಪರವಾಗಿ ಇಲ್ಲದ ಬಜೆಟಾಗಿದೆ ಎಂದು ಬಿಸಿ ಅಡುಗೆ ನೌಕರರು ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

      ಸಿ.ಐ.ಟಿ.ಯು ಕಚೇರಿಯಿಂದ ಹೊರಟ ಪ್ರತಿಭಟನೆ ಮೆರವಣೆಗೆ ತಹಶೀಲ್ದಾರ ಕಚೇರಿಗೆ ತೆರಳಿ ಬಿಸಿ ಅಡುಗೆ ನೌಕರರಿಗೆ ವೇತನ ಹೆಚ್ಚಳ ಮಾಡಲು ತಹಶೀಲ್ದಾರ ಮುಖಾಂತರ ಪ್ರಧಾನಮಂತ್ರಿಯವರಿಗೆ ಮನವಿ ಅಪರ್ಿಸಿದರು.

      ಬಿಸಿ ಅಡುಗೆ ನೌಕರರಿಗೆ ಈಗ ಸಿಗುತ್ತಿರುವ ರೂ.2600 ಗಳಲ್ಲಿ ಕೇಂದ್ರ ಸರಕಾರದ ಪಾಲು ಕೇವಲ ರೂ.600 ಇಂತಹ ಕಡಿಮೆ ವೇತನದಲ್ಲಿ ಬದುಕು ನಡೆಸುತ್ತಿರುವ ಬಡ ಮಹಿಳೆಯರ ಕೂಗು ಪ್ರಧಾನಮಂತ್ರಿಯವರಿಗೆ ಕೇಳಲಿಲ್ಲವೆ. ಕಳೇದ ಸೆಪ್ಟೆಂಬರ್ 5 ರಂದು ದೆಹಲಿಯವರೆಗೆ ಹೋಗಿ ವೇತನ ಹೆಚ್ಚಳಕ್ಕಾಗಿ ಹೋರಾಟ ನಡೆಸಿ ಕೇಂದ್ರ ಸರಕಾರದ ಗಮನ ಸೆಳೆದಿದ್ದರು, ಕೇಂದ್ರ ಸರಕಾರ ಇವರ ಮನವಿಗೆ ಸ್ಪಂದಿಸದೆ ಇರುವದು ವಿಷಾದನೀಯ. ಕಡಿಮೆ ವೇತನದಲ್ಲಿ ದುಡಿಯುತ್ತಿರುವ ಈ ಬಡ ಮಹಿಳೆಯರಿಗೆ ಬಜೆಟ್ ನಲ್ಲಿ ಕನಿಷ್ಠ ವೇತನ ನಿಗದಿ ಮಾಡಬೇಕು ಎಂದು ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದಶರ್ಿ ಗೈಬು ಜೈನೆಖಾನ ಕೇಂದ್ರ ಸರಕಾರಕ್ಕೆ ಆಗ್ರಹಿಸಿದರು.

      ಹಿರಿಯ ಕಾಮರ್ಿಕ ಮುಖಂಡರಾದ ವಿ.ಪಿ.ಕುಲಕಣರ್ಿ, ಅಕ್ಷರ ದಾಸೋಹ ನೌಕರ ಸಂಘದ ತಾಲೂಕಾಧ್ಯಕ್ಷರಾದ ತುಳಸಮ್ಮ ಮಾಳದಕರ, ಪ್ರೇಮಾ ಜಾಧವ, ವಿಜಯಲಕ್ಷ್ಮೀ ಬನ್ನೂರಮಠ, ಮತ್ತು ನೀಲವ್ವ ನರಗುಂದ ಮುಂತಾದವರು ಉಪಸ್ಥಿತರಿದ್ದರು.