ತುಂಗಭದ್ರಾ ಗೃಹ ನಿರ್ಮಾಣ ಸಹಕಾರಿ ಸಂಘ, ನಿರ್ದೇಶಕರ ಅವಿರೋಧ ಆಯ್ಕೆ

Unopposed election of Tungabhadra Home Building Co-operative Society, Director

ತುಂಗಭದ್ರಾ ಗೃಹ ನಿರ್ಮಾಣ ಸಹಕಾರಿ ಸಂಘ,  ನಿರ್ದೇಶಕರ ಅವಿರೋಧ  ಆಯ್ಕೆ  

ರಾಣೇಬೆನ್ನೂರು  30: ಇಲ್ಲಿನ ತುಂಗಭದ್ರಾ ಗ್ರಹ ನಿರ್ಮಾಣ ಸಹಕಾರಿ ಸಂಘ ನಿಯಮಿತದ 2024-25ನೇ ಸಾಲಿನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ  ಚುನಾವಣೆ ನಡೆಯಿತು. ಐದು ವರ್ಷಗಳ ಕಾಲ ಅವಧಿಯ ಈ ಚುನಾವಣೆಯು ಇತ್ತೀಚೆಗೆ ನಡೆಯಿತು. ಚುನಾವಣಾ ನಿಯಮದಂತೆ ಪ್ರಕ್ರಿಯೆ ನಡೆದು,   ಶಾಂತಾ ಷಣ್ಮುಖಪ್ಪ ಡೊಂಬರ, ಸೋಮಶೇಖರ ಪು. ಸಣ್ಣಮನಿ, ಪ್ರಕಾಶ್ ರಾ. ಲಕ್ಷ್ಮೇಶ್ವರ, ಕೊಟ್ರೇಶಪ್ಪ ಚ. ಎಮ್ಮಿ,   ಮೀನಾಕ್ಷಮ್ಮ  ಶಿ. ಉಜ್ಜಣ್ಣನವರ, ಶ್ರೀಮತಿ ಪಾರಮ್ಮ ಉ. ಅರಳಿ, ಚೆನ್ನಗೌಡ ಚ. ಪಾಟೀಲ, ಟಿ.ಕೆ.ಎಂ.ಬಸವರಾಜಯ್ಯ, ರಾಮನಗೌಡ  ಭ. ಸೊರಟೂರ, ಮಹೇಶ್ ಮ. ಅಡಿವೆಪ್ಪನವರ ಮತ್ತು ಮುರುಗೇಶಪ್ಪ ಹೇ. ಬೆನ್ನೂರ ಇವರುಗಳು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ, ಮತ್ತು ಚುನಾವಣಾ ಅಧಿಕಾರಿಯಾಗಿದ್ದ,   ಸುಧಾ ವಿಕ್ರಂ. ಕುಲಕರ್ಣಿ ಅವರು ಘೋಷಿಸಿದರು. ನೂತನ ನಿರ್ದೇಶಕರಿಗೆ,   ಸಿದ್ದೇಶ್ವರ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಂ.ಎಸ್‌. ಅರಕೇರಿ, ಅಭಿಯಂತ ಜೆ.ಎನ್‌. ಬಲ್ಲೂರ, ಬಿ.ಎಸ್‌. ಕೆಂಡದಮಠ, ಮೇಘನಾ ಬಣಕಾರ,   ಪೂಜಾ ಚೆನ್ನಗೌಡ್ರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸೇರಿದಂತೆ ಇನ್ನಿತರೆ ಸಹಕಾರಿ ಬಂಧುಗಳು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.