'ಮುಖವಾಡ ಇಲ್ಲದವನು 84' ಚಿತ್ರ ಬಿಡುಗಡೆ

ಲೋಕದರ್ಶನ ವರದಿ 

ವಿಜಯಪುರ 09: ಬೆಳಗಾವಿಯ ಗಣಪತರಾವ್ ಪಾಟೀಲ ಅವರು ಗೋಪಿಕಾ ಪ್ರೊಡಕ್ಷನ್ ಬ್ಯಾನರ್ ಅಡಿ ನಿಮರ್ಿಸಿದ 'ಮುಖವಾಡ ಇಲ್ಲದವನು 84' ಕನ್ನಡ ಚಲನಚಿತ್ರ ಬರುವ ಏಪ್ರೀಲ್ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕ ನಟ ಆನಂದ ಕೋಲಾ (ಜ್ಯೂನಿಯರ್ ಕಟ್ಟಪಾ) ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈಗಾಗಲೇ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಈ ಚಿತ್ರದಲ್ಲಿ ಮೂವರು ನಟರು, ನಟಿಯರು ಅಭಿನಯಿಸಿದ್ದಾರೆ. ಇಂದಿನ ಯುವಕ-ಯುವತಿಯರು ಮಾದಕ ವಸ್ತುಗಳಿಗೆ ಬಲಿಯಾಗಿ ದಾರಿ ತಪ್ಪುತ್ತಿರುವ ಕುರಿತಾದ ಚಿತ್ರಕಥೆ ಇದಾಗಿದೆ. ಶಿವಕುಮಾರ ಕಡೂರ ಅವರು ಒಳ್ಳೆಯ ಚಿತ್ರಕಥೆ ಹಾಗೂ ಡೈಲಾಗ್ ಬರೆದಿದ್ದಾರೆ ಎಂದರು.

ಬನ್ನೇರುಘಟ್ಟ, ಮಡಿಕೇರಿ, ಬೆಳಗಾವಿ, ಮಹಾರಾಷ್ಟ್ರದ ಅಂಬೋಲಿಘಾಟ, ಇಬ್ರಾಹಿಂಪೂರ, ಸಾವಂತವಾಡಿ, ಮುಂತಾದ ಕಡೆಗಳಲ್ಲಿ ಆರು ತಿಂಗಳ ಕಾಲ ಚಿತ್ರದ ಚಿತ್ರೀಕರಣ ಮಾಡಲಾಗಿದ್ದು, ಚಿತ್ರ ಬಿಡುಗಡೆಗೆ ಸಿದ್ಧತೆ ನಡೆದಿದೆ ಎಂದು ಅವರು ತಿಳಿಸಿದರು.

ಅನಂತ ಕೋಲಾ, ಸೋಮನಾಥ ಬಾತಖಾಂಡೆ, ಹಾಗೂ ಇನ್ನಿತರರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.