ಮೈಸೂರಿನಲ್ಲಿ ಜರುಗಿದ ವಿವಿ ಘಟಿಕೋತ್ಸವ ಸಮಾರಂಭ

University convocation ceremony held in Mysore

ಮೈಸೂರಿನಲ್ಲಿ ಜರುಗಿದ ವಿವಿ ಘಟಿಕೋತ್ಸವ ಸಮಾರಂಭ

ಬಾಗಲಕೋಟೆ 19 : ಇಲ್ಲಿನ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಆರ್ ನಾಗರಾಜು ಸಲ್ಲಿಸಿದ “ಕನ್ನಡ ಸಂಗೀತ ಕ್ಷೇತ್ರಕ್ಕೆ ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯದ ಕೊಡುಗೆ” ಒಂದು ತೌಲನಿಕ ಅಧ್ಯಯನ ಎಂಬ ಪ್ರೌಢ ಪ್ರಬಂಧಕ್ಕೆ ಮೈಸೂರಿನ, ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ಡಿ.ಲಿಟ್ ಪದವಿಯನ್ನು ಘೋಷಿಸಿದ್ದು, ಶನಿವಾರ ಮೈಸೂರಿನಲ್ಲಿ ಜರುಗಿದ ವಿವಿ ಘಟಿಕೋತ್ಸವ ಸಮಾರಂಭದಲ್ಲಿ ಕುಲಾಧಿಪತಿಯೂ ಆಗಿರುವ ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ  ಸುಧಾಕರ್ ಅವರು ಡಿ.ಲಿಟ್ ಪದವಿ ಪ್ರದಾನ ಮಾಡಿದರು. ಘಟಿಕೋತ್ಸವದಲ್ಲಿ ವಿವಿ ಕುಲಪತಿಗಳಾದ ಪ್ರೊ. ನಾಗೇಶ ವಿ ಬೆಟ್ಟಕೋಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.ಪರಿಚಯ: ಮೂಲತಃ ತುಮಕೂರು ಜಿಲ್ಲೆಯವರಾದ ಡಾ. ನಾಗರಾಜು ಕಳೆದ ಎರಡು ದಶಕಗಳಿಂದ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಿ ವಿ ವಿ ಸಂಘದ ಪದವಿ ಮಹಾವಿದ್ಯಾಲಯಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾಗಿ ಸೇವೆ ಸಲ್ಲಿಸಿರುವ ಇವರು ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಇವರ ನೂರಾರು ಲೇಖನಗಳು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿವಿಧ ಸಂಘಸಂಸ್ಥೆಗಳಿಂದ ಹತ್ತಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಡಿಲಿಟ್ ಪದವಿ ಪಡೆದ ಮೊದಲಿಗರಾಗಿದ್ದಾರೆ.