ಕೇಂದ್ರ ಸಚಿವ ಅನಂತಕುಮಾರ ನಿಧನಕ್ಕೆ ಶೋಕ

ಲೋಕದರ್ಶನ ವರದಿ

ಕೊಪ್ಪಳ 12: ಕೇಂದ್ರ ಮಂತ್ರಿ ಅನಂತಕುಮಾರ ಅವರ ನಿಧನದಿಂದ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ, ಕೇಂದ್ರದಲ್ಲಿ ರಾಜ್ಯದ ಅಭಿವೃದ್ಧಿ ಹಾಗೂ ಸಮಸ್ಯೆಗಳ ಬಗ್ಗೆ ಧ್ವನಿಯಾಗಿದ್ದರು, ಅವರ ಅಗಲಿಕೆಯಿಂದ  ಮಹತ್ವಾಕಾಂಕ್ಷಿ ರಾಜಕಾರಣಿಯನ್ನು ಕಳೆದುಕೊಂಡತಾಗಿದೆ ಎಂದು ನಗರದ ಗಣ್ಯರು ತಮ್ಮ ಸಂತಾಪ ಸೂಚಿಸಿದ್ದಾರೆ. ಕೇಂದ್ರ ಮಂತ್ರಿ ಅನಂತಕುಮಾರ ಅವರ ನಿಧನಕ್ಕೆ ಶೋಕವನ್ನು ವ್ಯಕ್ತ ಪಡಿಸಿರುವ ನಗರಸಭೆ ಮಾಜಿ ಸದಸ್ಯರಾದ ಪ್ರಶಾಂತ ನಾಯ್ಕರ, ವೈಜನಾಥ್ ದಿವಟರ, ಝಾಕೀರಹುಸೇನ ಕಿಲ್ಲೇದಾರ ಮತ್ತಿತರರು ತಮ್ಮ ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ಅನಂತಕುಮಾರ  ಅವರು ಕೊಪ್ಪಳ ನಗರದ ಭಾಗ್ಯನಗರ ಹಾಗೂ ಕಿನ್ನಾಳ ರೈಲ್ವೆ ಗೇಟ್ಗಳ ನಿಮರ್ಾಣದ ಮಂಜೂರಾತಿಗೆ ಅವರ ಕೊಡುಗೆ ಇದ್ದು, ಅದರಂತೆ ಕೊಪ್ಪಳ ಜಿಲ್ಲೆಯೊಂದಿಗೆ ಪಕ್ಷಾತೀತಾವಾಗಿ ಅವರು ಇಲ್ಲಿನ ಜನರೊಂದಿಗೆ ಭಾಂಧವ್ಯವವನ್ನು ಹೊಂದಿದ್ದರು ಎಂದು ಸ್ಮರಿಸಿದ್ದಾರೆ.

ಸಚಿವ ಅನಂತಕುಮಾರ ಅವರ ಹಠಾತ ಅಗಲಿಕೆ ಮನಸ್ಸಿಗೆ ತುಂಬಾ ಆಘಾತವಾಗಿದೆ, ನೇರ ಮತ್ತು ನಿಷ್ಠುರ ಹಾಗೂ ಸಾಮಾಜಿಕ ಚಿಂತನೆಕಾರರು ಆಗಿದ್ದ ಅವರ ಅಗಲಿಕೆ ದುಃಖದ ಸಂಗತಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾಥರ್ಿಸಿದ್ದಾರೆ.