ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ: ಓರ್ವ ಸಾವು

Unidentified vehicle collides with bike: one fatality

ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ: ಓರ್ವ ಸಾವು 

ಸಂಬರಗಿ 05: ಅನಂತಪೂರ ಹೊರವಲಯ ತಾಂವಶಿ ರಸ್ತೆಗೆ ಮೋಟರ್ ಸೈಕಲ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಕಾರಣ ನಾಗನೂರ ಪಿ.ಎ ಗ್ರಾಮದ ಅಶೋಕ ಸನದಿ(48) ಮೃತ ಪಟ್ಟ ಘಟನೆ ಮಂಗಳವಾರ ಸಾಯಂಕಾಲ ನಡೆದಿದೆ. ಅಶೋಕ ಸುಖದೇವ ಸನದಿ ಇವರು ಮುರಗುಂಡಿ ಗ್ರಾಮ ಪಂಚಾಯತಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ಅನಾರೋಗ್ಯದಿಂದ ಕೆಳೆದ ಆರು ತಿಂಗಳಿಂದ ವಿಶ್ರಾಂತಿ ಪಡೆಯುತ್ತಿದ್ದು, ವೈಯಕ್ತಿಕ ಕೆಲಸಕ್ಕಾಗಿ ಅನಂತಪೂರ ಗ್ರಾಮಕ್ಕೆ ಹೋಗಿ ಮರಳಿ ತಾಂವಶಿ ಮಾರ್ಗವಾಗಿ ನಾಗನೂರ ಪಿ.ಎ ಗ್ರಾಮಕ್ಕೆ ಬರುತ್ತಿದ್ದ ಸಮಯದಲ್ಲಿ ಅನಂಪೂರ ತಾಂವಶಿ ರಸ್ತೆಯಲ್ಲಿ ಹಿಂಭಾಗದಿಂದ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ಈ ಕುರಿತು ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಅಶೋಕ ಸುಖದೇವ ಸನದಿ ಇವರು ಸಂಬರಗಿ, ಜಂಬಗಿ, ನಂದಗಡ, ಬಳ್ಳಿಗೇರಿ, ಮುರಗುಂಡಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.